🌹 ಮೇಘದೂತದ ಒಂದು ಬಿಂದು🌹
*त्वामासारप्रशमितवनोपप्लवं साधु मूर्ध्ना वक्ष्यत्यध्वश्रमपरिगतं सानुमानाम्रकूट: । न क्षुद्रोपि प्रथमसुकृतापेक्षया संश्रयाय प्राप्ते मित्रे भवति विमुख: किं पुनर्यस्तथोच्चै: ।।*
_ಎಲೈ ಮೇಘವೇ ನೀನು ಸಂಚಾರ ಮುಂದುವರೆಸಿದಂತೆ ಮುಂದೊಂದು ಪರ್ವತಶಿಖರ ಗೋಚರಿಸುವುದು. ಆ ಪರ್ವತದ ಶಿಖರಭಾಗದಲ್ಲಿ ಮಾವಿನ ಅನೇಕ ಮರಗಳಿವೆ. ನೀನು ಹಿಂದೆ ಅನೇಕ ಬಾರಿ ಅಲ್ಲಿ ಹೊತ್ತಿ ಉರಿಯುತ್ತಿದ್ದ ಕಾಡ್ಗಿಚ್ಚನ್ನು ನಿನ್ನ ತಂಪಾದ ಧಾರಾಕಾರ ಹನಿಗಳಿಂದ ನಂದಿಸಿ ಉಪಕರಿಸಿದ್ದಿ. ಹೀಗೆ ಅಪರೂಪಕ್ಕೆ ಬಂದ ನಿನ್ನನ್ನು ಆ ಶೈಲವು ತನ್ನ ಶಿರದಲ್ಲಿ ಧರಿಸಿ ಉಪಚರಿಸುತ್ತದೆ. ಲೋಕದ ನಿಯಮವೇ ಹಾಗಿದೆ. ಕೆಟ್ಟವನು ಅಥವಾ ಜಿಪುಣನಾದರೂ ಬಹುಕಾಲದ ನಂತರ ಗೆಳೆಯನೊಬ್ಬನು ವಾಸ ಮಾಡಲೆಂದು ಬಂದಾಗ ಮೊದಲು ಅವನು ಮಾಡಿದ ಉಪಕಾರವನ್ನು ಮರೆತು ತಿರಸ್ಕರಿಸಲಾರ. ಗುಣದಿಂದ ಕೆಟ್ಟವನಾದರೂ ಯಾವನಾದರೂ ಉಪಕಾರಿಯೊಬ್ಬನು ತಾನೇ ಮನೆಗೆ ಬಂದಾಗ ತೋರಿಕೆಗಾದರೂ ಉಪಚರಿಸುವನು. ಅವನನ್ನು ತಿರಸ್ಕರಿಸಲಾರ. ಅಂತಹುದರಲ್ಲಿ ವಿಶಾಲ ಮನೊಭಾವವುಳ್ಳ ಉದಾರಿಯಾದ ಈ ಶೈಲನು ನಿನ್ನ ಆಗಮನವನ್ನು ಹಬ್ಬದಂತೆ ಆಚರಿಸುವನು. ಮೋಡ ಸಹಜವಾಗಿ ಪರ್ವತಗಳ ಮೇಲೆ ನಿಲ್ಲುವುದನ್ನು ಕವಿ ಇಲ್ಲಿ ತಲೆಯ ಮೇಲೆ ಧರಿಸಿ ಮೆರೆಸುವನೆಂದು ವರ್ಣಿಸಿದ್ದಾನೆ. ಲೋಕದಲ್ಲಿ ಸಹಜವಾಗಿಯೇ ಹಿಂದೆ ತನ್ನ ಆಪತ್ತಿನಲ್ಲಿ ಯಾರು ನೆರವಾಗಿರುವನೋ ಅಂತಹ ವ್ಯಕ್ತಿ ಮನೆಗೆ ಬಂದಾಗ ಲೋಭಿಯಾದರೂ, ಜಿಪುಣನಾದರೂ, ಕ್ರೂರನಾದರೂ ಒಂದು ಕ್ಷಣವಾದರೂ ಆದರ ತೋರುವನು ಹಿಂದಿನ ಸ್ಮರಣೆಯಿಂದ. ಹಾಗಿರುವಾಗ ಬಹುಬಾರಿ ಕಾಡ್ಗಿಚ್ಚನ್ನು ನಂದಿಸಿ ಉಪಕರಿಸಿರುವ ಈ ಮೇಘವು ಮನೆಗೆ ಬಂದಾಗ ಉದಾರಿಯಾದ ಶೈಲ ಸುಮ್ಮನಿರುವನೇ! ಸಾಧ್ಯವೇ ಇಲ್ಲ. ತಲೆಯ ಮೇಲೆ ಹೊತ್ತು ಮೆರೆಸುವನು. ಪ್ರಕೃತಿ ಸಹಜವಾದ ದೃಶ್ಯಗಳನ್ನು ಕವಿ ಲೋಕಸಹಜ ನಡೆಯನ್ನಾಗಿ ಸಮೀಕರಿಸಿ ವರ್ಣಿಸಿದ ಪರಿ ಬಲು ಸುಂದರ. ನಾವಾದರೂ ಬಾಯಿ ಮಾತಿಗೆ ಹೇಳುವುದಿಲ್ಲವೇ- ತಲೆ ಮೇಲೆ ಹೊತ್ತುಕೋಬೇಡ ಎಂದು. ( ಹೆಚ್ಚು ಉಪಚಾರ ಬೇಡವೆಂಬ ಧ್ವನಿಯಲ್ಲಿ). ನಮ್ಮ ಮಿತ್ರರು ಬಂದಾಗ ನಾವೂ ಉಪಕಾರ ಮಾಡಿರಲಿ ಇಲ್ಲದಿರಲಿ ಮನದುಂಬಿ ಆದರ ತೋರಿ ಮಿತ್ರತ್ವವನ್ನು ಗಟ್ಟಿಗೊಳಿಸೋಣ. ಮೊದಲು ಕುಡಿದ ನೀರನ್ನು ಸ್ಮರಿಸಿ ಜೀವನವಿಡೀ ಎಳನೀರು ಕೊಡುವ ಕಲ್ಪವೃಕ್ಷದಂತೆ ಉಪಕಾರ ಸ್ಮರಣೆ ಇಟ್ಟುಕೊಂಡು ಕೃತಜ್ಞರಾಗಿ ಬಾಳೋಣ. ಮೊದಲು ಪಯಣದಲ್ಲಿ ಮಿತ್ರನು ದೊರಕಿ ಕಾರ್ಯಸಿದ್ಧಿಯಾಗುವುದು ಸೂಚಿತವಾಯಿತು.
📜 ಸಂಗ್ರಹ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ