📙 ವೇದ- ಧರ್ಮ ಭಾಗ-೧೦
*ವೇದದ ಬ್ರಾಹ್ಮಣಗಳು*
ಕೃಷ್ಣದ್ವೈಪಾಯನರು ವೇದಗಳ ಅಧ್ಯಯನ ಸುಲಭವಾಗಲೆಂದು, ವೇದರಾಶಿ ಉಳಿಯಲೆಂದು ವೇದಗಳನ್ನು ನಾಲ್ಕಾಗಿ ವಿಂಗಡಿಸಿದರು. ಆ ಪ್ರತಿಯೊಂದು ವೇದವೂ ಮತ್ತೆ ವಿಷಯ ನಿರೂಪಣೆಯ ಭಿನ್ನತೆಯಿಂದಾಗಿ ನಾಲ್ಕು ರೂಪಗಳನ್ನು ಪಡೆಯಿತು. ಅವೇ *ಸಂಹಿತಾ,ಬ್ರಾಹ್ಮಣ, ಆರಣ್ಯಕ, ಉಪನಿಷತ್* ಎಂಬುದಾಗಿ.
ಇಲ್ಲಿ ಬ್ರಾಹ್ಮಣ ಎನ್ನುವುದು ಜಾತಿವಾಚಕವಲ್ಲ. ದ್ವಾಪರದ ಕಾಲದವರೆಗೂ ಸಹಜ ವಾಗಿಯೂ ಈ ಶಬ್ದ ಜಾತಿವಾಚಕವಾಗಿರಲಿಲ್ಲ. ಬ್ರಹ್ಮ ಚಿಂತನೆ ಇರುವ ಪ್ರತಿಯೊಬ್ಬನೂ ಬ್ರಾಹ್ಮಣ ಎಂದೇ ಕರೆಸಿಕೊಳ್ಳುತ್ತಿದ್ದ.
ಇಲ್ಲಿ ಬ್ರಾಹ್ಮಣವೆಂದರೆ *ಬ್ರಾಹ್ಮಣಂ ನಾಮ ಕರ್ಮಣ: ತನ್ಮಂತ್ರಾಣಾಂ ಚ ವ್ಯಾಖ್ಯಾನಂ ಗ್ರಂಥ:* ಎಂದಿದ್ದಾರೆ ಸಾಯಣರು. ನಾನಾ ಕರ್ಮಗಳು ಹಾಗೂ ಮಂತ್ರಗಳ ವಿವರಣೆಯೇ ಮುಖ್ಯ ವಿಷಯ. ಒಂದು ರೀತಿಯಲ್ಲಿ ವೈಜ್ಞಾನಿಕ, ಆಧಿಭೌತಿಕ, ಆಧ್ಯಾತ್ಮಿಕ ಮೀಮಾಂಸೆಯನ್ನು ಪ್ರಸ್ತುತಪಡಿಸುವ ವಿಶ್ವಕೋಶಗಳೇ ಬ್ರಾಹ್ಮಣಗಳು.
*ನೈರುಕ್ತ್ಯಂ ಯಸ್ಯ ಮಂತ್ರಸ್ಯ ವಿನಿಯೋಗ: ಪ್ರಯೋಜನಮ್, ಪ್ರತಿಷ್ಠಾನಂ , ವಿಧಿಶ್ಚೈವ ಬ್ತಾಹ್ಮಣಮ್ ತದಿಹೋಚ್ಯತೇ* ಎನ್ನುತ್ತಾರೆ ವ್ಯಾಖ್ಯಾನ ಕಾರರು. ಮಂತ್ರದ ಅರ್ಥವನ್ನು ವಿವರಿಸುತ್ತಾ ಎಲ್ಲಿ ಅದರ ಬಳಕೆ, ಏನು ಪ್ರಯೋಜನ, ಯಜ್ಞಗಳ ವಿವರಣೆ, ಆ ಪದದ ನಿಜಾರ್ಥವೇನು, ಮಂತ್ರ ಪ್ರತಿಪಾದ್ಯ ಯಾರು, ಕರ್ಮಗಳ ಸರಿಯಾದ ಅನುಷ್ಠಾನ ಹೇಗೆ ಮುಂತಾದವನ್ನು ವಿವರಿಸುವುದು ಬ್ರಾಹ್ಮಣ.
*ಹೇತು,ನಿರ್ವಚನ,ನಿಂದಾ,ಪ್ರಶಂಸಾ, ಸಂಶಯ-ಪರಿಹಾರ,ವಿಧಿ, ಪರಕ್ರಿಯಾ, ಪುರಾಕಲ್ಪೋ ವ್ಯವಧಾರಣ ಕಲ್ಪನಾ.ಉಪಮಾನಂ ದಶೈತೇತು ವಿಧೆಯೋ ಬ್ರಾಹ್ಮಣಸ್ಯ ತು* ಎಂಬ ಕಾರಿಕೆಯೂ ಇದನ್ನೇ ಸ್ಪಷ್ಟಪಡಿಸುವುದು. ಬ್ರಾಹ್ಮಣ ಗ್ರಂಥಗಳ ವೈಜ್ಞಾನಿಕತೆಗೆ ಪ್ರಮಾಣವು ಪ್ರಬಂಧ ಚತುಷ್ಟಯದಲ್ಲಿ *ವಿನಿಯೋಗ* ರೂಪದಲ್ಲಿ ಸಿಗುತ್ತದೆ. ಯಾವ ಮಂತ್ರದ ಪ್ರಯೋಗದ ಉದ್ದೇಶ ( ಇಲ್ಲಿ ಪ್ರಯೋಗವೆಂದರೆ ಉಚ್ಚಾರಣೆ ಅಷ್ಟೇ. ಮಾಟವಲ್ಲ.) ಮಂತ್ರ ಯಾರಿಗೆ ಸಂಬಂಧಿಸಿದ್ದು, ಯಾವಾಗ ಹೇಗೆ ಬಳಕೆ ಇತ್ಯಾದಿ ವಿವರಣೆ ನೀಡುವುದು ವಿನಿಯೋಗ.
ಎರಡನೆಯದಾಗಿ ಸರಿಯಾದ ಕಾರಣಗಳನ್ನು ನಿರೂಪಿಸುವ ಅಂಗವೇ ಹೇತು.
ಮೂರನೆಯ ಅಂಗ- ಅರ್ಥವಾದ. ಮಾಡುವ ಕರ್ಮದಲ್ಲಿ ಶ್ರದ್ಧೆ ಹುಟ್ಟಿಸುವುದೇ ಅರ್ಥವಾದ.ಪ್ರತಿಯೊಂದು ಸ್ತೋತ್ರ ಅಥವಾ ವ್ರತಗಳ ಕೊನೆಯಲ್ಲಿ ಕಾಣುವ ಫಲಶ್ರುತಿಗಳೆಲ್ಲ ಇದೇ ಗುಂಪಿಗೆ ಸೇರಿವೆ.
ನಾಲ್ಕನೆಯ ಅಂಗ- ನಿರುಕ್ತಿ. ಇದು ವೇದದ ಅತ್ಯಂತ ವೈಜ್ಞಾನಿಕ ಅಂಗ. ಈ ಶಬ್ದದ ಅರ್ಥ ಹೀಗೆ, ಈ ಸಂದರ್ಭದಲ್ಲಿ ಹೀಗೆಯೇ ಅರ್ಥ ಮಾಡಬೇಕು ಇತ್ಯಾದಿ ಅಂಶಗಳನ್ನು ವಿವರಿಸುತ್ತದೆ.ಭಾಷಾಶಾಸ್ತ್ರದ ದೃಷ್ಟಿಯಿಂದ ಈ ಅಂಗವು ಅತ್ಯಂತ ಮಹತ್ವಪೂರ್ಣವಾದುದು. ಯಾಸ್ಕರ ನಿಘಂಟನ್ನು *ನಿರುಕ್ತ* ಎಂದೇ ಕರೆಯುವರು. ಅರ್ಥ ತಿಳಿಯದೇ ಮಂತ್ರಗಳನ್ನು ಹೇಳಿದಾಗ ಸ್ವರ ಅಕ್ಷರಗಳಲ್ಲಿ ವ್ಯತ್ಯಾಸವಾಗಿ ಅನರ್ಥಕಾರಿ ಪರಿಣಾಮ ಉಂಟಾಗಬಹುದು. ಅನೇಕ ಕರ್ಮಗಳ ಆಚರಣೆಯು ಫಲದಾಯಕವಾಗದೇ ಇರಲು ಇದು ಮುಖ್ಯ ಕಾರಣ.
ಐದನೆಯ ಅಂಗ-ಆಖ್ಯಾನ. ವಿಧಿ ಏನಿದೆ, ಮಾಡುವ ವಿಧಾನ ಹೇಗೆ ಎಂಬುದನ್ನು ವಿವರಿಸುವುದು. ಹಿಂದೆ ಯಾರು ಮಾಡಿದರು, ಏನು ಫಲ ಪಡೆದರು ಇತ್ಯಾದಿ ಅಂಶವನ್ನೂ ವಿವರಿಸುವುದು. ಇದು ಎರಡು ಬಗೆಯಲ್ಲಿದೆ. ಅಲ್ಪಕಾಯ ಹಾಗೂ ದೀರ್ಘಕಾಯ. ಅಲ್ಪಕಾಯದಲ್ಲಿ ಕರ್ಮದ ಉಪಯೋಗ,ಆಚರಣೆ, ಮಾಡುವ ಬಗೆಗೆ ಪ್ರಮಾಣ ವಿವರಣೆ ಇದೆ. ದೀರ್ಘ ಕಾಯದಲ್ಲಿ ಈಗಾಗಲೇ ಸಂಹಿತೆಯಲ್ಲಿ ಸಂಕ್ಷಿಪ್ತವಾಗಿ ಹೇಳಿದ *ಬೀಜ* ರೂಪದ ಮಂತ್ರಗಳ ವಿಸ್ತಾರವಾದ ವ್ಯಾಖ್ಯಾನ.
ಇನ್ನು ಉಳಿದ ಅಂಗಗಳು ನಮಗೆ ಗೊತ್ತಿರುವಂತಹವೇ ಆಗಿವೆ. ನಿಂದಾ, ಪ್ರಶಂಸಾ, ಉಪಮಾನ( ದೃಷ್ಟಾಂತ) ಇತ್ಯಾದಿಗಳು.
ವೇದದ ಭಿನ್ನ ಭಿನ್ನ ಶಾಖೆಗಳಿಗನುಗುಣವಾಗಿ ಬ್ರಾಹ್ಮಣ ಮಂತ್ರಗಳು ಬೇರೆ ಬೇರೆಯಾಗಿ ಇವೆ. ಇದರ ಪರಿಚಯ ಮುಂದೆ ನೋಡೋಣ.
📙 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ