🌺 ಪ್ರತಿಮಾನಾಟಕದ ಒಂದು ಸುಮ 🌺
*त्यक्त्वा स्नेहं शीलसङ्क्रानतदोषै: पुत्रास्तावन्नन्वपुत्रा: क्रियन्ते । लोकेपूर्वं स्थापयाम्येव धर्मं भर्तृद्रोहादस्तुमाताप्यमाता ।।*
_ಭರತನ ಮಾತು. ಕೌಸಲ್ಯೆ ನಿನ್ನ ತಾಯಿ ಇವಳು ನಮಸ್ಕರಿಸು ಎಂದಾಗ ಭರತನಾಡುವ ಮಾತು. ಹಿಂದೆ ಆಗಿದ್ದಳು ಈಗಲ್ಲ. ಎಂತಹ ಕ್ರೂರ ಮಾತು. ಏಕೆಂದರೆ ಕೆಟ್ಟವರ ಸಹವಾಸದಿಂದ ಮಕ್ಕಳಲ್ಲಿ ಪ್ರೀತಿಯನ್ನು ತೊರೆದ ಇವಳು ಮಕ್ಕಳನ್ನು ಮಕ್ಕಳಂತೆ ನೋಡದೇ ಅನ್ಯರಂತೆ ನೋಡಿದ್ದಾಳೆ. ನಾಲ್ಕು ಮಕ್ಕಳ ಮೇಲೂ ಯಾವ ಸಮಾನ ಪ್ರೀತಿ ತೋರಬೇಕಿತ್ತೋ ಅದನ್ನು ತೋರಲಿಲ್ಲ. ಅಥವಾ ಇನ್ನೊಂದು ಅರ್ಥ ಹೇಳುವುದಾದರೆ ಲೋಕದಲ್ಲಿ ಪಾಲಕರನ್ನು ಮರೆತ ಪುತ್ರರು/ಪುತ್ರಿಯರು ಅವರಿಗೆ ಸರಿಯಾದ ಮಕ್ಕಳೆನಿಸಲಾರರು. ಅಮ್ಮನ ಇಂತಹ ಕೃತ್ಯವನ್ನು ನಾನು ಸಹಿಸಲಾರೆ. ಈಗ ಹೊಸದೊಂದು ನಿಯಮವನ್ನು ಜಾರಿಗೆ ತರುತ್ತೇನೆ. ಪತಿಗೆ ದ್ರೋಹ ಬಗೆದ ಮಹಿಳೆಯು ಮಕ್ಕಳ ಪಾಲಿಗೆ ಅಮ್ಮನಲ್ಲ. ಪತಿಯ ಮರಣಕ್ಕೆ ಕಾರಣವಾದ ನಮ್ಮ ತಂದೆಯನ್ನು ಕೊಂದ ಈಕೆ ಹೇಗೆ ನಮಗೆ ತಾಯಿಯಾಗಬಲ್ಲಳು! ಇವಳನ್ನು ತಾಯಿಯೆಂದು ನಮಸ್ಕರಿಸಲು ನನ್ನ ಮನ ಎಳ್ಳಷ್ಟೂ ಒಪ್ಪಲಾರದು. ಹಾಗಾಗಿ ನಮಸ್ಕಾರ ಮಾಡುವ ಪ್ರಮೇಯವೇ ಇಲ್ಲ. ಮಕ್ಕಳಿಗೂ ಮೋಸ ಮಾಡಿದ್ದಾಳೆ ಪತಿಗೂ ದ್ರೋಹ ಮಾಡಿರುವ ಈಕೆ ಯಾವ ಸೀಮೆಯ ಅಮ್ಮ! ಶಾಲಿನೀ ಎಂಬ ವೃತ್ತ ಇಲ್ಲಿ ಬಳಕೆಯಾಗಿದೆ. ಕವಿ ಭರತನ ಮನದ ಭಾವವನ್ನು ನಾಟಕಕ್ಕೆ ಪೂರಕವಾಗಿ ಅಳವಡಿಸಿದ್ದಾನೆ._
📜 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ