🌹ಮೇಘದೂತದ ಒಂದು ಬಿಂದು 🌹
*गम्भीराया: पयसि सरितश्चेतसीव प्रसन्ने छायात्मापि प्रकृतिसुभगो लप्स्यते ते प्रवेशम् । तस्मादस्या: कुमुदविशदान्यर्हसि त्वं न धैर्यात् मोघीकर्तुं चटुलशफरोद्वर्तनप्रेक्षितानि ।।*
_ಗೆಳೆಯಾ, ನೀನು ಮುಂದೆ ಹೋದಂತೆ ಗಂಭೀರಾ ಎಂಬ ನದಿ ಸಿಗುವಳು. ಅವಳ ಮನಸ್ಸಿನಂತೆ ಸ್ವಚ್ಛವಾಗಿರುವ ನೀರಿನಲ್ಲಿ ನಿನ್ನ ಪ್ರತಿಬಿಂಬ ಬಿದ್ದು ಅವಳಿಂದ ಆಕರ್ಷಿಸಲ್ಪಡುವೆ. ನೀನೇನೂ ಕಡಿಮೆಯವನಲ್ಲ. ಸ್ವಭಾವ ಸುಂದರ ನಿನ್ನ ರೂಪ. ಅದು ತನ್ನಲ್ಲಿ ಪ್ರತಿಬಿಂಬಿತವಾದಾಗ ಅವಳ ಮನದಲ್ಲಿ ಸ್ಥಾನ ಪಡೆಯುವೆ. ನದಿಯ ಮೇಲೆ ಮೋಡವೊಂದು ಹಾದುಹೋಗುವ ದೃಶ್ಯವನ್ನೇ ಕವಿ ಹೀಗೆ ವರ್ಣಿಸಿದ್ದಾನೆ. ಆ ನದಿಯಲ್ಲಿ ನೀರಿನ ಪ್ರವಾಹದಲ್ಲಿ ಏಳುವ ಬೆಳ್ಳಗಿನ ನೊರೆಗಳು ಆಕೆಯ ವಾರೆನೋಟದಂತೆ ನಿನ್ನನ್ನೇ ದಿಟ್ಟಿಸುವವು. ಅರಳಿದ ಕುಮುದಗಳು ಅವಳ ಮುಖಕಮಲದಂತೆ. ನಿನ್ನ ಆಗಮನದಿಂದ ಅವಳ ಮುಖಕಮಲ ಅರಳಿದೆ. ಅಲ್ಲಲ್ಲಿ ಸುಳಿದಾಡುವ ಚಂಚಲವಾದ ಮೀನುಗಳ ಹೊರಳಾಟ ಅವಳ ಅಂಗಾಗಗಳ ವೈಯ್ಯಾರದಂತೆ ಕಾಣುವುದು. ಸೊಂಟ ಕುಣಿಸುವಂತೆ ಅಥವಾ ನಿಧಾನದ ನಡಿಗೆಯಂತೆ ಮೀನುಗಳ ಓಡಾಟ. ಇಷ್ಟೆಲ್ಲ ರೀತಿಯಲ್ಲಿ ನಿನ್ನನ್ನು ಆಕರ್ಷಿಸುವ ಅವಳನ್ನು ಸೇರಿ ಮುಂದುವರೆ. ಅವಳ ಬಯಕೆಯನ್ನು ವಿಫಲಗೊಳಿಸದೇ ಮಿಂದು ನೀನು ಸುಖಿಯಾಗು. ಉತ್ತಮ ನಾಯಿಕೆಯೊಬ್ಬಳು ಅನಾಮಿಕನನ್ನು ಪ್ರೇಮಿಸಿ ಸಫಲಳಾಗುವಂತೆ ಆ ನದಿಯ ಅಥವಾ ಅವಳ ಪ್ರೇಮಕಟಾಕ್ಷ ನಿನ್ನಲ್ಲಿ ವ್ಯರ್ಥವಾಗದೆ ನಿನ್ನ ಆನಂದಕ್ಕೂ ಕಾರಣವಾಗುವುದು._
📜 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ