🌾📗🌾 ರಾಮಾಯಣದ ಮೌಲ್ಯಯುತ ಮಾತುಗಳು ಭಾಗ-೬
*ಭರ್ತಾ ನಾಮ ಪರಂ ನಾರ್ಯಾ ಭೂಷಣಂ ಭೂಷಣಾದಪಿ ಏಷಾ ಹಿ ರಹಿತಾ ತೇನ ಶೋಭನಾರ್ಹಾ ನ ಶೋಭತೇ*
ಹನುಮನು ಸೀತೆಯನ್ನು ನೋಡಿ ಚಿಂತಿಸುತ್ತಿದ್ದಾನೆ. ಮಹಿಳೆಯರಿಗೆ ಇತರ ಎಲ್ಲಾ ಆಭರಣಗಳಿಗಿಂತ ಪತಿಯೇ ಪರಮಶ್ರೇಷ್ಠ ಆಭರಣ. ಆಭರಣಗಳಿಂದ ಶೋಭಿಸಬೇಕಾಗಿರುವ ಇವಳು ಪತಿಯೆಂಬ ಆ ಅಮೂಲ್ಯ ಆಭರಣದಿಂದ ರಹಿತಳಾಗಿ ಶೋಭಿಸುತ್ತಿಲ್ಲ. ಪತಿ ಪತ್ನಿ ಒಟ್ಟಿಗಿದ್ದರೇನೇ ಚೆನ್ನ. ಇಲ್ಲದಿರೆ ಅದೆಷ್ಟು ಸಂಪತ್ತಿದ್ದರೂ ಮದುವೆಯಾದ ಲಲನೆಯರಿಗೆ ಅವೆಲ್ಲ ಶೊಭೆ ತರಲಾರದು. ಪತಿಯ ಜೊತೆಗಿದ್ದು ಧರಿಸುವ ಆಭರಣ ಅತ್ಯಂತ ಶೋಭಾಯಮಾನ. ಅವರ ನಡುವಿನ ಸಂಬಂಧ ಅಷ್ಟು ಸೂಕ್ಷ್ಮವಾದದ್ದು. ಲೋಕದೆದುರು ಅದು ಆಭರಣದಂತಿರಬೇಕು ಹೊರತು ಮರದ ತುಂಡಿನಂತಲ್ಲ ಎಂಬ ಧ್ವನಿ. ರಾಮ ಸೀತೆಯರ ಆತ್ಮೀಯತೆಯನ್ನೂ ಹನುಮ ಗುರುತಿಸಿದ್ದಾನೆ.
*ವೈವಾಹಿಕೋ ವಿಧಿ: ಸ್ತ್ರೀಣಾಮೌಪನಾಯಿಕ: ಸ್ಮೃತ:*
ವ್ಯಾಖ್ಯಾನದಲ್ಲಿ ಬರುವ ಸ್ಮೃತಿಯೊಂದರ ಮಾತು. ಸ್ತ್ರೀಯರಿಗೆ ಉಪನಯನ ಎಂಬ ಪ್ರತ್ಯೇಕ ಸಂಸ್ಕಾರ ಇಲ್ಲ. ವಿವಾಹವೇ ಅವರಿಗೆ ಉಪನಯನಕ್ಕೆ ಸಮಾನವಾದ ಸಂಸ್ಕಾರ ಎನ್ನುವರು ಸ್ಮೃತಿಕಾರರು. ಅದೇ ಅವರಿಗೆ ಎರಡನೆಯ ಜನ್ಮ ಅಥವಾ ದ್ವಿಜತ್ವದಾಯಕ. ಈ ಕಾರಣದಿಂದಲೋ ಏನೋ ಬಾಲ್ಯವಿವಾಹ ಮಾಡುತ್ತಿದ್ದುದು. ವಿವಾಹದ ಅನಂತರ ಸಾಕಷ್ಟು ಅಧ್ಯಯನ ಮಾಡಿದ ಉಲ್ಲೇಖಗಳು ಅಲ್ಲಲ್ಲಿ ಸಿಗುತ್ತವೆ.
*ಅಭೂತೇನಾಪವಾದೇನ ಕೀರ್ತಿಂ ನಿಪತಿತಾಮಿವ ಆಮ್ನಾಯಾನಾಮಯೋಗೇನ ವಿದ್ಯಾಂ ಪ್ರಶಿಥಿಲಾಮಿವ*
ಸೀತೆ ಹೇಗಾಗಿದ್ದಳೆಂದರೆ ಮೊದಲು ಎಲ್ಲೆಡೆ ಹರಡಿದ್ದ ಕೀರ್ತಿಯು ಇಲ್ಲದಿರುವ ದೋಷಾರೋಪಣೆಯ ಕಾರಣದಿಂದ ಅಥವಾ ಸುಳ್ಳು ಅಪವಾದದ ಕಾರಣ ಕಳೆದುಹೋದಂತೆ, ಕಲಿತಿರುವ ಅನೇಕ ವಿದ್ಯೆಗಳು ಅಭ್ಯಾಸ ಮಾಡದೇ ಮರೆತುಹೋದಂತೆ ರಾಮನಿಲ್ಲದ ಸೀತೆಯಿದ್ದಳು. ಎಷ್ಟು ಕೀರ್ತಿವಂತನಾದರೂ ಒಂದು ಚಿಕ್ಕ ಸುಳ್ಳು ಆರೋಪವು ನಮ್ಮ ಕೀರ್ತಿಯನ್ನೆಲ್ಲ ಮಣ್ಣು ಪಾಲು ಮಾಡಬಲ್ಲದು. ಯಾದವಕುಲೋದ್ಧಾರಕ ಆ ಕೃಷ್ಣನೇ ಅಪವಾದ ಪಡೆದಿದ್ದನು. ಅಂತಹುದರಲ್ಲಿ ನಾವೆಲ್ಲ ಯಾವ ಲೆಕ್ಕ! ಹಾಗಾಗಿ ಯಾರೊಡನೆಯ ವ್ಯವಹಾರವೂ ತುಂಬಾ ಜಾಗರೂಕತೆಯಿಂದ ಕೂಡಿರಬೇಕು. ಇನ್ನು ಕಲಿತ ವಿದ್ಯೆಯನ್ನು ಮತ್ತೆ ಮತ್ತೆ ಅಭ್ಯಾಸ ಮಾಡುತ್ತಿರಬೇಕು. ಇಲ್ಲದಿದ್ದರೆ ಅಟ್ಟದ ಮೇಲಿಟ್ಟ ಹರಿತ ಕತ್ತಿಯು ಅಥವಾ ಸಾಣೆ ಹಿಡಿಯದೆ ತುಕ್ಕು ಹಿಡಿದ ಕತ್ತಿಯಂತೆ ಸಮಯದಲ್ಲಿ ಉಪಯೋಗಕ್ಕೆ ಬರಲಾರದು. ಸತತವಾದ ಅಭ್ಯಾಸ ನಿರಂತರ ಓದು ವಿದ್ಯೆಯನ್ನು ಹೆಚ್ಚಿಸುತ್ತದೆ. ಮರೆಯದಂತೆ ಕಾಪಿಡುತ್ತದೆ.
📗 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ