🌾📗ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು🌾📗
ಭಾಗ-೮
*ವಾಮಃ ಕಾಮೋ ಮನುಷ್ಯಾಣಾಂ ಯಸ್ಮಿನ್ಕಿಲ ನಿಬಧ್ಯತೇ ಜನೇ ತಸ್ಮಿಂಸ್ತ್ವನುಕ್ರೋಶಃ ಸ್ನೇಹಶ್ಚ ಕಿಲ ಜಾಯತೇ*
ರಾವಣನ ಮಾತು. ಯಾವ ಜನರ ವಿಷಯದಲ್ಲಿ ಅತ್ಯಂತ ಉತ್ಕಟವಾದ ಕಾಮವಿರುವುದೋ ಅಂತಹವರ ವಿಷಯದಲ್ಲೇ ದಯೆ ಮತ್ತು ಸ್ನೇಹಭಾವಗಳು ಹುಟ್ಟುತ್ತವೆಯಲ್ಲವೇ! ಸೀತೆ ನಿನ್ನ ವಿಷಯದಲ್ಲಿ ನನ್ನ ಪರಿಸ್ಥಿತಿ ಹಾಗೇ ಆಗಿದೆ. ಲೋಕದಲ್ಲಿ ಜನರು ಯಾರ ಮೇಲಾದರೂ ಅತಿಯಾದ ದಯೆ ಅಥವಾ ಕರುಣೆ ತೋರಿದರೆ ಅಥವಾ ಹೆಚ್ಚಿನ ಸ್ನೇಹ ಸಂಬಂಧ ಬೆಳೆಸಿದರೆ ಯಾವುದಾದರೊಂದು ಬಗೆಯ ಕಾಮನೆ ಅದರ ಹಿಂದೆ ಇದ್ದೇ ಇರುತ್ತದೆ. ಇಲ್ಲದಿದ್ದರೆ ವಿಶ್ವಾಮಿತ್ರನಂತೆ ಎಲ್ಲರಿಗೂ ಮಿತ್ರನಾಗಿ ಭಗವಂತನಂತೆ ಎಲ್ಲರಿಗೂ ದಯೆ ತೋರಬೇಕಾದೀತು. ಆದರೆ ನಮ್ಮ ಸ್ವಭಾವ ಹಾಗಿಲ್ಲದಿರುವುದು ಸತ್ಯ.
*ಅಕಾಮಾಂ ಕಾಮಯಾನಸ್ಯ ಶರೀರಮುಪತಪ್ಯತೇ ಇಚ್ಛಂತೀಂ ಕಾಮಯಾನಸ್ಯ ಪ್ರೀತಿರ್ಭವತಿ ಶೋಭನಾ*
ಸೀತೆಯ ಉತ್ತರ. ಒಲಿಯದಿರುವವಳನ್ನು ಕಾಮಿಸಹೋಗುವವನ ಶರೀರ ಮುಂದೆ ಬಹಳ ಪರಿತಪಿಸುತ್ತದೆ. ತಾನಾಗಿಯೇ ಬಂದವಳನ್ನು ಕಾಮಿಸುವವನಿಗೆ ಅಂತಹವಳ ಸಮಾಗಮದಿಂದ ಶೋಭನವಾದ ಪ್ರೀತಿಯುಂಟಾಗುವುದು. ಸ್ತ್ರೀ ಒಲಿದು ಬಂದರೆ ಮಾತ್ರ ಚಿನ್ನ. ಮುನಿದ ಮಾನಿನಿಯರ ತಾಗೆ ಅದು ಕಬ್ಬಿಣದಂತೆ ಎಂಬ ಸಂದೇಶ ಇದೆ. ನಾನು ನಿನ್ನ ವಿಷಯದಲ್ಲಿ ಸ್ವಲ್ಪವೂ ಪ್ರೀತಿ ಹೊಂದಿಲ್ಲ. ಹಾಗಾಗಿ ನನ್ನನ್ನು ಬಯಸುವುದು ನಿನಗೆ ಕ್ಷೇಮಕರವಲ್ಲ.
📗 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ