💐 ಪ್ರತಿಮಾ ನಾಟಕದ ಒಂದು ಕುಸುಮ💐
*पतितमिव शिर: पितु: पादयो: स्निह्यतेवास्मि राज्ञा समुत्थापित: त्वरितमुपगता इव भ्रातर: क्लेदयन्तीव मामश्रुभिर्मातर: । सदृश इति महानिति व्यायतश्चेति भृत्यैरिवाहं स्तुत: सेवया परिहसितमिवात्मनस्तत्र पश्यामि वेषं च भाषां च सौमित्रिणा ।।*
_ಭರತನ ಕಲ್ಪನೆ. ಊರು ಸಮೀಪಿಸಿದಂತೆ ನಮ್ಮ ಮನದಲ್ಲಿ ಏನೆಲ್ಲ ಅಗಬಹುದು ಎಂದು ಮೂಡುವ ಭಾವವನ್ನು ಕವಿ ಭರತನ ಮೂಲಕ ವರ್ಣಿಸಿದ್ದಾನೆ. ಅರಮನೆಗೆ ಹೋದ ಕ್ಷಣದಲ್ಲೇ ಮೊದಲು ಅಪ್ಪನ ಕಾಲಿಗೆ ಬಿದ್ದು ಅವನ ಆಶೀರ್ವಾದ ಪಡೆದುಕೊಳ್ಳುವಂತೆ, ಅಪ್ಪನು ನನ್ನ ಮೇಲಿನ ಅತಿಯಾದ ವಾತ್ಸಲ್ಯದಿಂದ ಎಬ್ಬಿಸಿ ಮೈದಡವಿದಂತೆ ಭಾವಿಸುತ್ತೇನೆ. ಭರತನಿಗೆ ಹಿರಿಯರ ಮೇಲಿದ್ದ ಗೌರವವನ್ನು ಇಲ್ಲಿ ಕಾಣಬಹುದು. ಎಲ್ಲದಕ್ಕಿಂತ ಮೊದಲು ತಂದೆ- ತಾಯಂದಿರ ಯೋಗಕ್ಷೇಮ ವಿಚಾರಿಸಿ ಆಶೀರ್ವಾದ ಪಡೆದುಕೊಳ್ಳುವುದು. ಅನಂತರ ಬಹುಕಾಲದ ನಂತರ ಹಿಂತಿರುಗಿದ ಸಹೋದರರನ್ನು ನನ್ನ ಅಣ್ಣ ತಮ್ಮಂದಿರು ತ್ವರಿತವಾಗಿ ನನ್ನನ್ನು ಸುತ್ತುವರೆದು ನಿಂತಂತೆ, ಮೂರೂ ಜನ ಅಮ್ಮಂದಿರು ನನ್ನನ್ನು ಅವರ ಆನಂದಾಶ್ರುಗಳಿಂದ ತೋಯಿಸಿದಂತೆ ಊಹಿಸಿಕೊಳ್ಳುತ್ತೇನೆ. ರಾಮಾದಿಗಳ ಮಧ್ಯೆ ಎಂತಹ ಸುಮಧುರ ಬಾಂಧವ್ಯ ಇತ್ತೆನ್ನುವುದು ಇದರಿಂದ ತಿಳಿಯುವುದು. ಭರತ ಬಂದನೆಂಬ ವಾರ್ತೆ ಕೇಳಿದೊಡನೆ ಅವರೆಲ್ಲ ಮಾಡುತ್ತಿದ್ದ ಕಾರ್ಯಗಳನ್ನು ಅಲ್ಲಲ್ಲೆ ತ್ಯಜಿಸಿ ಒಡೋಡಿಬಂದು ಸುತ್ತುವರೆದಂತೆ, ಅಷ್ಟಲ್ಲದೇ ಕೌಸಲ್ಯಾ ಸುಮಿತ್ರೆ ಕೈಕೇಯಿಯರು ತುಂಬಾ ದಿನದ ನಂತರ ಕಂಡ ಮಗನನ್ನು ಮುದ್ದಾಡಿ ಖುಷಿಯಿಂದ ಕಣ್ಣೀರು ಸುರಿಸಿದಂತೆ ಕಾಣುವೆ. ಇದು ಮಕ್ಕಳಲ್ಲಿ ಭೇದವೆಣಿಸದೆ ಒಂದಾಗಿ ಕಂಡು ಪ್ರೀತಿಸುತ್ತಿದ್ದ ಅವರ ವಿಶಾಲ ಗುಣ. ಇನ್ನು ಸೇವಕರು ' ಥೇಟ್ ರಾಜನಂತೆ, ತುಂಬಾ ದೊಡ್ಡವನಾಗಿದ್ದಾನೆ, ಉದ್ದ ಆಗಿದ್ದಾನೆಂದು, ಅಗಲ ಆಗಿದ್ದಾನೆಂದು ಬಗೆ ಬಗೆಯಲ್ಲಿ ಭರತನನ್ನು ವರ್ಣಿಸುತ್ತಿರುವಂತೆ ಕಾಣುತ್ತಿದ್ದಾನವನು. ಆ ಸೇವಕರು ನೃಪಸೂನು ಭರತನನ್ನು ಕಾಲೊತ್ತುವುದೇ ಮೊದಲಾದ ಕಾರ್ಯಗಳಿಂದ ಸೇವಿಸುತ್ತಿದ್ದಾರೆ. ಇನ್ನು ಕೊನೆಯದಾಗಿ ಸೌಮಿತ್ರಿ ಲಕ್ಷ್ಮಣನು ಭರತನ ವೇಷವನ್ನು ಅವನಾಡುವ ಬೇರೆ ದೇಶದ ಮಾತನ್ನು ಹಾಸ್ಯ ಮಾಡುತ್ತಾ ಕೀಟಲೆ ಮಾಡುವಂತೆ ಕಲ್ಪಿಸಿಕೊಳ್ಳುತ್ತಿದ್ದೇನೆ. ಬಹುಕಾಲ ಮಾವನ ಮನೆಯಲ್ಲಿ ಉಳಿದ ಕಾರಣ ಭರತನಾಡುವ ಮಾತುಗಳಲ್ಲಿ ಆ ದೇಶದ ಪದಗಳು ವಾಕ್ಯಗಳು ಬರಬಹುದು. ಹಾಗೆಯೇ ಕೇಕಯ ದೇಶದ ಪದ್ಧತಿಯ ವೇಷಧಾರಿಯಾದ ಅವನನ್ನು ಲಕ್ಷ್ಮಣ ಅತ್ಯಂತ ಆತ್ಮೀಯತೆಯ ಕಾರಣ ತಮಾಷೆ ಮಾಡಿ ಸುಖಪಡುತ್ತಿರುವನು. ಅವನ ತಮಾಷೆಯ ಮಾತು ಭರತನಿಗೂ ಪ್ರಿಯವೇ. ಅದಕ್ಕೆ ಕಾರಣ ಅವರಲ್ಲಿದ್ದ ಆತ್ಮೀಯತೆ. ಭರತ ಹೀಗೆಲ್ಲ ಆಗಬಹುದೆಂದು ಕಲ್ಪಿಸುತ್ತಾ ರಥದಲ್ಲಿ ಬರುತ್ತಿದ್ದಾನೆ ಅಯೋಧ್ಯೆಯೆಡೆಗೆ. ಆದರೆ ದೈವದ ನಿಶ್ಚಯ ಬೇರೆಯದೇ ಆಗಿದೆ. ಅವನನ್ನು ಸರಿಯಾಗಿ ಸ್ವಾಗತಿಸಲೂ ಜನ ಇರಲಿಲ್ಲ ಆ ಸಮಯದಲ್ಲಿ. ಕವಿ ನಾವು ತುಂಬಾ ದಿನಗಳಾದ ಮೇಲೆ ಮನೆಗೆ ಹಿಂದಿರುಗುವುವಾಗ ಕಲ್ಪನೆ ಮಾಡಿಕೊಳ್ಳುವಂತೆ ಭರತನ ಕಲ್ಪನೆಯನ್ನು ಸುಂದರವಾಗಿ ಹೆಣೆದಿದ್ದಾನೆ.ಸ್ವಭಾವೋಕ್ತಿ ಅಲಂಕಾರ. ಇಲ್ಲಿ ಪರಸ್ಪರ ಎಲ್ಲರ ಮಧ್ಯೆ ಭರತನ ಮೇಲಿದ್ದ ಆತ್ಮೀಯತೆಯೂ ಸುಂದರವಾಗಿ ಮೂಡಿಬಂದಿದೆ._
📜 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ