🌺 ಪ್ರತಿಮಾನಾಟಕದ ಒಂದು ಸುಮ 🌺
*स्वर्गं गते नरपतौ सुकृतानुयात्रे पौराश्रुपातसलिलैरनुगम्यमान: । द्रष्टुं प्रयाम्यकृपणेषु तपोवनेषु रामाभिधानमपरं जगत: शशाङ्कम् ।।*
_ಭರತ ಸುಮಂತ್ರನೊಡಗೂಡಿ ಅರಣ್ಯಕ್ಕೆ ರಾಮನನ್ನು ಕರೆತರಲು ಅರಣ್ಯಕ್ಕೆ ತೆರಳಿದ್ದಾನೆ. ಆ ಸಮಯದಲ್ಲಿ ಸುಮಂತ್ರನೊಡನೆ ಭರತನಾಡುವ ಮಾತು. ತಂದೆಯು ತನ್ನ ಪುಣ್ಯ ಫಲದ ಬಲದಿಂದ ಸ್ವರ್ಗವನ್ನು ಹೊಂದಿದ. ನಾನಾದರೋ ಪೌರರ ಕಣ್ಣೀರಧಾರೆಯನ್ನು ಅನುಸರಿಸಿದವನಾಗಿ( ಭರತನು ರಾಜ್ಯಕ್ಕೆ ಹಿಂತಿರುಗಿದಾಗ ರಾಜನನ್ನು ಕಳೆದುಕೊಂಡ ಪ್ರಜೆಗಳ ಆರ್ತನಾದವೇ ಅವನನ್ನು ಸ್ವಾಗತಿಸಿದ್ದು) ಉದಾರವಾದ ರಮಣೀಯವಾದ ತಪೋವನದಲ್ಲಿ ರಾಮನೆಂಬ ಜಗದ ಚಂದಿರನನ್ನು ನೋಡಲು ತೆರಳುತ್ತಿರುವೆನು. ದಶರಥನ ಮರಣವು ರಾಮನ ಗಮನವು ಅಯೋಧ್ಯೆಯ ಜನರ ಹಾಗೂ ಭರತನ ಚಿಂತೆಯನ್ನು ದುಃಖವನ್ನು ಹೆಚ್ಚಿಸಿದೆ. ತಂದೆ ತನ್ನ ಪುಣ್ಯದ ಪ್ರಭಾವದಿಂದೇನೋ ಸ್ವರ್ಗವನ್ನೈದ. ಆದರೆ ನಾವೇನು ಮಾಡಬೇಕು? ಹಾಗಾಗಿ ಜಗದ ಜನರ ಮನಕ್ಕೆ ತಂಪು ಕೊಡುವವನು ಒಬ್ಬ ರಾತ್ರಿಯ ಚಂದ್ರ. ಎಷ್ಟು ದುಃಖದಲ್ಲಿದ್ದರೂ ಒಮ್ಮೆ ಚಂದಿರನ ಕಂಡ ಕೂಡಲೇ ಆನಂದವಾಗುವುದು. ಪ್ರಕೃತ ನಮ್ಮ ದುಃಖ ಮರೆಯಲು ರಾಮನೆಂಬ ಚಂದ್ರ ನನ್ನು ದರ್ಶಿಸಬೇಕಾಗಿದೆ. *ಪ್ರಜಾಸುಖತ್ವೇ ಚಂದ್ರಸ್ಯ* ಪ್ರಜೆಗಳಿಗೆ ಸುಖ ಕೊಡುವುದರಲ್ಲಿ ಚಂದ್ರನಂತೆ ಎಂದಿದ್ದಾರೆ ವಾಲ್ಮೀಕಿಗಳು. ಅಂತಹ ಜಗದ ಜನರ ತಾಪವನ್ನು ಪರಿಹರಿಸುವ ರಾಮನ ದರ್ಶನಕ್ಕೆ ಹೊರಟಿರುವೆನು. ಆಕಾಶದಂತೆ ಇಲ್ಲಿ ನಿರ್ಮಲವಾದುದು ಮನೋಹರವಾದುದು ರಾಮನಿರುವ ತಪೋವನ. ಅದೇ ರಾಮಚಂದ್ರನ ಆಗಸ._
📜 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ