🌾📗ಮಹಾಭಾರತದ ಅಪ್ರಸಿದ್ಧ ಕಥೆಗಳು📗🌾
ಹಿಂದೆ ಸೂರ್ಯನಿಗೆ ತಪತಿ ಎಂಬ ಮಗಳಿದ್ದಳು. ಅತಿಲೋಕ ಸುಂದರಿಯೂ ಸದಾಚಾರಸಂಪನ್ನಳೂ ಆದ ಅವಳ ವಿವಾಹದ ಬಗ್ಗೆ ಚಿಂತೆಗೀಡಾದನು. ಅದೇ ಸಮಯದಲ್ಲಿ ಋಕ್ಷನ ಮಗನಾದ ಸಂವರಣನೆಂಬುವನು ಲೋಕವನ್ನು ಆಳುತ್ತಿದ್ದ. ಸೇವಾಪರನೂ, ನಿರಹಂಕಾರಿಯೂ ಭಕ್ತಿವಂತನೂ ಸದ್ಗುಣಪೂರ್ಣನೂ ಆಗಿದ್ದನು ಅವನು. ಅವನು ದಿನವೂ ಉದಯಕಾಲದ ಸೂರ್ಯನನ್ನು ದಿನವೂ ಬಹುವಿಧದಲ್ಲಿ ಆರಾಧಿಸುತ್ತಿದ್ದನು. ಪರಾಕ್ರಮಿಯೂ ತೇಜಸ್ವಿಯೂ ಆದ ಅವನನ್ನು ಕಂಡ ರವಿಯು ತನ್ನ ಮಗಳಿಗೆ ಇವನೇ ಸರಿಯಾದ ಪತಿ ಎಂದೆಣಿಸಿದನು.
ಒಮ್ಮೆ ಸಂವರಣನು ಬೇಟೆಗೆಂದು ಹೋದಾಗ ಅವನ ಹಯ ದುರದೃಷ್ಟವಶಾತ್ ಸಾಯಲಾಗಿ ರಾಜನು ನಡೆದುಬರುತ್ತಿದ್ದಾಗ ಅರಣ್ಯದಲ್ಲಿ ಸಂಚರಿಸುತ್ತಿದ್ದ ತಪತಿಯನ್ನು ನೋಡಿ ಅನುರಕ್ತನಾಗುವನು. ಅವಳೂ ಅವನ ಬಗೆಗೆ ಅದೇ ಭಾವನೆ ತಾಳಿದಳು.
ಅವಳು ಅನುರಾಗ ತಾಳಿದರೂ ಆ ಕ್ಷಣವೇ ಗಾಂಧರ್ವ ವಿವಾಹ ಮಾಡಿಕೊಳ್ಳದೇ ತನ್ನ ತಂದೆಯನ್ನು ಕೇಳಿ ವರಿಸುವೆನೆಂದಳು. ಅವನಾದರೋ ಅವಳದೇ ಚಿಂತೆಯಲ್ಲಿ ಮುಳುಗಿದ.
ಅನಂತರ ಅವಳನ್ನು ಪಡೆಯಲು ಬಯಸಿ ಸೂರ್ಯನನ್ನು ಆರಾಧಿಸುತ್ತಾ ಒಮ್ಮೆ ತನ್ನ ಕುಲಗುರುಗಳಾದ ವಸಿಷ್ಠರನ್ನು ನೆನಪು ಮಾಡಿಕೊಳ್ಳುತ್ತಾನೆ.
ವಸಿಷ್ಠರು ಅವನ ಮನದಿಂಗಿತವನ್ನು ಅರ್ಥೈಸಿಕೊಂಡು ಸೂರ್ಯನ ಬಳಿಗೆ ತೆರಳಿ ತಪತಿಯನ್ನು ಅವನೊಡನೆ ವಿವಾಹ ಮಾಡಿಸುತ್ತಾರೆ.
ವಿವಾಹದ ನಂತರ ಆ ರಾಜಶ್ರೇಷ್ಠನು ತನ್ನ ಆಡಳಿತವನ್ನು ಮಂತ್ರಿಗೆ ನಿಯಮಿಸಿ ತಾನು ಹನ್ನೆರಡು ವರ್ಷಗಳ ಕಾಲ ಆ ಕಾಡು ಮೇಡುಗಳಲ್ಲಿ ಅವಳೊಡನೆ ಸುಖಿಸಿದನು.
ಆ ಸಮಯದಲ್ಲಿ ಅತ್ಯಂತ ಧರ್ಮಾತ್ಮನಿಲ್ಲದ ಆ ಪಟ್ಟಣದಲ್ಲಿ ದೇವೇಂದ್ರನು ಮಳೆ ಸುರಿಸದೇ ಬರಗಾಲ ಉಂಟಾಗಿ ಪ್ರೇತರಾಜನ ಪಟ್ಟಣದಂತೆ ಆ ಭೂಮಿ ಸಾಯುವವರಿಂದ ತುಂಬಿಹೋಯಿತು.
ಇದನ್ನು ಅರಿತ ವಸಿಷ್ಠನು ಮತ್ತೆ ಸಂವರಣನ ಬಳಿ ಹೋಗಿ ಅವನನ್ನು ರಾಜ್ಯಕ್ಕೆ ಕರೆತರುವಲ್ಲಿ ಯಶಸ್ವಿಯಾಗುವನು. ಅನಂತರ ಆ ರಾಜ್ಯ ಮೊದಲಿನಂತೆ ಸಮೃದ್ಧಿಯನ್ನು ಪಡೆಯಿತು. ಇಂತಹ ಮಹಿಮಾನ್ವಿತ ವಂಶ ದಲ್ಲಿ ತಪತಿಯ ವಂಶದಲ್ಲಿ ಹುಟ್ಟಿದ ಕಾರಣ ನಿನ್ನನ್ನು ತಾಪತ್ಯ ಎಂದು ಕರೆದೆ ಎನ್ನುತ್ತಾನೆ ಅಂಗಾರಪರ್ಣ.
ಈ ಕಥೆ ನೋಡಿದಾಗ ಅನೇಕ ವಿಷಯ ಗಮನಿಸಬಹುದು. ಕ್ಷತ್ರಿಯರಿಗೆ ಗಾಂಧರ್ವ ವಿವಾಹ ಉಚಿತವಾದರೂ ಅಪ್ಪನ ಆಣತಿಯಿಲ್ಲದೆ ಮಾಡಿಕೊಳ್ಳಲಾರೆ ಎಂದು ನಿರಾಕರಿಸಿದ ಶ್ರೇಷ್ಠಳು ತಪತಿ. ಗಾಂಧರ್ವ ವಿವಾಹ ಅಂದರೆ ದೈಹಿಕ ಸಂಪರ್ಕ ಬೆಳೆಸುವ ಮೂಲಕ ನಡೆಯುವ ವಿವಾಹ ತಂದೆ ತಾಯಂದಿರ ಅನುಮತಿ ಇಲ್ಲದಿದ್ದಾಗ ನಿರಾಕರಿಸಲಾಗುತ್ತಿತ್ತು. ಶಕುಂತಲೆಯ ಬಗ್ಗೆ ಉದಾಹರಿಸುವವರು ತಪತಿಯನ್ನೂ ನೆನಪು ಮಾಡಿಕೊಳ್ಳುವುದು ಉತ್ತಮ. ರಾಜನೂ ಮೈ ಮರೆಯದೇ ಆಚಾರ ಮೀರದೇ ವರ್ತಿಸುವುದು ಅವನ ಶ್ರೇಷ್ಠತೆಯ ದ್ಯೋತಕ.
ವಸಿಷ್ಠರು ರಾಜ್ಯದ ಸುಖದು:ಖಗಳಿಗೆ ಸದಾ ಸ್ಪಂದಿಸುತ್ತಾ ನಿಜಾರ್ಥದ ಪುರೋಹಿತರಾಗಿದ್ದರು. ತಮಗೆ ಯಾವ ರೀತಿಯ ಪ್ರಯೋಜನ ಇಲ್ಲದಿದ್ದರೂ ಲೋಕ ಸಂಕಷ್ಟಕ್ಕೆ ಒಳಗಾದಾಗ ಮಿಡಿಯುವ ಅವರ ಮನಸ್ಸು ನಮಗೆಲ್ಲ ಮಾದರಿ.
📗 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ