🌹 ಮೇಘದೂತದ ಒಂದು ಸಾಲು 🌹

*तस्माद्गच्छेरनुकनखलं शैलराजावतीर्णां जह्नो कन्यां सगरतनयस्वर्गसोपानपङ्तिम् । गौरीवक्त्रभ्रुकुटिरचनां या विहस्येव फेनै: शम्भो: केशग्रहणमकरोदिन्दुलग्नोर्मिहस्ता ।।*

_ಹೇ ಸಖನೇ, ಆ ಕುರುಕ್ಷೇತ್ರವನ್ನು ದಾಟಿ ಕನಖಲವೆಂಬ ಪರ್ವತದ ಸಮೀಪದಲ್ಲಿ ಹಿಮಾಲಯದಿಂದ ಹರಿದು ಬಂದಿರುವ, ಸಗರನ ಮಕ್ಕಳ ಸ್ವರ್ಗದ ಗಮನಕ್ಕೆ ಮೆಟ್ಟಿಲಾದ ಜಹ್ನುವಿನ ಮಗಳಾದ ಗಂಗೆಯನ್ನು ಸೇವಿಸು. ಸಗರನ ಪುತ್ರರ ಪಾಪ ಕಳೆದು ಮುಕ್ತಿ ಕೊಡಿಸಿದ ಪುನೀತೆ ಅವಳು. ಅಷ್ಟೇ ಅಲ್ಲ ಜಹ್ನುವಿನ ಆಶ್ರಮ ಮುಳುಗಿಸಲು ಹೋಗಿ ತಾನೇ ಅವನಲ್ಲಿ ಮುಳುಗಿ ಮಗಳಾಗಿ ಬಂದ ಧೀರೆ. ಅವಳ ನೀರನ್ನು ತುಂಬಿಸಿಕೊಂಡರೆ ನೀನು ಪುನೀತನಾದಂತೆ ಆಗುವುದು. ಆ ಗಂಗೆ ಸಾಮಾನ್ಯಳಲ್ಲ. ಈಶ್ವರನನ್ನು ಆಶ್ರಯಿಸಿ ಪಾರ್ವತಿಗೆ ಅಸೂಯೆ ಉಂಟುಮಾಡಿ ಅವಳ ಹುಬ್ಬುಗಂಟುವೆಕೆಯನ್ನು ಅಣಕಿಸಲೆಂಬಂತೆ ತನ್ನ ಬಿಳಿಯ ನೊರೆಗಳೆಂಬ ನಗುವಿನಿಂದ ಅಟ್ಟಹಾಸಗೈಯುತ್ತಾ ಅಲೆಗಳನ್ನು ಚಂದ್ರನಿರುವ ಶಿವನ ತಲೆಯ ಮೇಲ್ಭಾಗದವರೆಗೆ ಕುಣಿಸುತ್ತಾ ಅವನ ಜುಟ್ಟು ತನ್ನ ಕೈಯಲ್ಲಿರುವಂತೆ ಶಿವೆಗೆ ಕಾಣುವ ರೀತಿಯ ವೈಯ್ಯಾರಮಿಶ್ರಿತ ನಡೆ ಅವಳದು. ಅಂತಹ ಶಿವನನ್ನು ಆಶ್ರಯಿಸಿದ ತನ್ಮೂಲಕ ಪಾಪವನ್ನು ತೊಳೆಯುವ ಗಂಗೆಯಲ್ಲಿ ಮುಳುಗು ಹಾಕು. ಭಗೀರಥನ ಕೋರಿಕೆಯಂತೆ ಶಿವನು ಗಂಗೆಯ ಮುಕ್ಕಾಲು ಪ್ರವಾಹವನ್ನು ತನ್ನ ಜಟೆಯಲ್ಲಿ ಬಂಧಿಸಿ ಸ್ವಲ್ಪ ಮಾತ್ರ ಬಿಟ್ಟನು. ಹೀಗೆ ಗಂಗೆ ಶಿವನ ತಲೆ ಮೇಲೆ ಸ್ಥಾನ ಪಡೆದಳು. ಕವಿಯು ಈ ಸಹಜಸ್ಥಿತಿಯನ್ನೇ ಸವತಿಯರ ಮನೋಧರ್ಮವನ್ನು ವಿವರಿಸುವ ದೃಶ್ಯವನ್ನಾಗಿಸಿದ್ದಾನೆ._

📜 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩