🌹 ಮೇಘದೂತದ ಒಂದು ಮಧುಬಿಂದು 🌹
*अम्भोबिन्दुग्रहणचतुराम्श्चातकान्वीक्षमाणा: श्रेणीभूता: परिगणनया निर्दिशन्तो बलाका: । त्वामासाद्य स्तनितसमये मानयिष्यन्ति सिद्धा: सोत्कम्पानि प्रियसहचरीसम्भ्रमालिङ्गितानि ।।*
_ಎಲೈ ಜೀಮೂತವೇ, ನೀನು ಮಾರ್ಗದಲ್ಲಿ ಸಾಗುತ್ತಿರುವ ವೇಳೆ ಮಳೆ ಸುರಿಸುವಿಯೆಂಬ ಬಯಕೆಯಿಂದ ಕಾಯುತ್ತಿರುವ ಚಾತಕ ಪಕ್ಷಿಗಳು ಮಳೆಹನಿಗಳು ಬೀಳುತ್ತಿರುವ ವೇಳೆಗೆ ಅದನ್ನು ಹೀರುವ ಪರಿಯನ್ನು ಈವರೆಗೆ ನೋಡಿಯೇ ಇಲ್ಲವೆಂಬಂತೆ ಚಕಿತಚಿತ್ತರಾಗಿ ಸಿದ್ಧದಂಪತಿಗಳು ನೋಡುತ್ತಿರುವರು. ಎಲ್ಲಾ ಮಳೆಹನಿಗಳು ಚಾತಕ ಪಕ್ಷಿಗಳಿಗೆ ಪ್ರಿಯವಲ್ಲ. ಕೆಲವು ಹನಿಗಳನ್ನು ಮಾತ್ರ ಆರಿಸಿ ಕುಡಿಯುವ ಸುಂದರ ಕಲ್ಪನೆ ಕವಿ ಸಮಯ. ಅದೇ ಸಮಯದಲ್ಲಿ ನಿನ್ನ ಆಗಮನದಿಂದ ಸಂತಸಗೊಂಡ ಬಕ ಪಕ್ಷಿಗಳು ಸಾಲು ಸಾಲಾಗಿ ನಿನ್ನನ್ನೇ ಮುತ್ತಿಕೊಳ್ಳುವಂತೆ ಹಾರುವ ಬಗೆಯನ್ನು ಆ ಸಿದ್ಧ ಸ್ತ್ರೀಯರು ವರ್ಣಿಸುತ್ತಾ ತಮ್ಮ ಪ್ರಿಯಕರರಿಗೆ ಒಂದು ಎರಡು ಮೂರು ಎಂದೆಲ್ಲಾ ಬಕಗಳನ್ನು ತೋರಿಸುವ ಬಗೆ ನೋಡು. ಹೀಗೆ ಸಂಭ್ರಮದ ವೇಳೆಯಲ್ಲಿ ನೀನೊಮ್ಮೆ ಗುಡುಗಿದರೆ ಆ ಗರ್ಜನೆಗೆ ಗಾಬರಿಗೊಂಡ ಆ ಲಲನೆಯರು ಹೆದರಿ ತಮ್ಮ ಪ್ರಿಯಕರರನ್ನು ಗಟ್ಟಿಯಾಗಿ ಅಪ್ಪಿಕೊಳ್ಳುತ್ತಾರೆ. ಹೆದರಿಕೆಯಿಂದ ನಡುಕ ಉಂಟಾದ ಅವರ ದೇಹಾಲಿಂಗನವನ್ನು ಆಸ್ವಾದಿಸಿದ ಆ ಸಿದ್ಧ ಪುರುಷರು ನಿನ್ನನ್ನು ಮನಸಾರೆ ಗೌರವಿಸುವರು. ಬಯಸದೇ ಪ್ರಿಯಾಲಿಂಗನವೆಂಬ ಭಾಗ್ಯವನ್ನು ಕರುಣಿಸಿದ ನಿನ್ನ ಕಂಡು ಮುದಗೊಳ್ಳುವರು. ಹೀಗೆ ಸುತ್ತ ಮುತ್ತಲ ಚಿತ್ರ ತಲ್ಲಣಗಳಿಗೆ ಕಾರಣನಾಗುತ್ತಾ ಆ ದೃಶ್ಯಗಳನ್ನೆಲ್ಲಾ ನೋಡಿ ಆನಂದಿಸುತ್ತಾ ದಾರಿ ಮುನ್ನಡೆಸು. ಕವಿ ಇಲ್ಲಿ ಒಂದು ದೃಶ್ಯಕಾವ್ಯವನ್ನು ವರ್ಣಿಸಿದ್ದಾನೆ. ಒಂದೆಡೆ ಚಾತಕಗಳು, ಮತ್ತೊಂದೆಡೆ ಬಕ ಪಕ್ಷಿಗಳು, ಮತ್ತೊಂದೆಡೆ ಸಿದ್ಧ ದಂಪತಿಗಳು ಆ ಮೂವರ ಭಿನ್ನ ಭಿನ್ನ ಕ್ರಿಯೆಗಳು ಹೀಗೆ ಚಿತ್ರಕಾರನಿಗೆ ಬೇಕಾದ ಸರಕನ್ನೆಲ್ಲ ಕವಿ ಪದಗಳಲ್ಲಿ ನಿರೂಪಿಸಿದ್ದಾನೆ.ಗುಡುಗಿನಿಂದ ಗಾಬರಿಗೊಂಡು ಆಲಿಂಗಿಸಿದಾಗ ಸಿದ್ಧರ ಮೊಗದಲ್ಲಿ ಮೂಡಿದ ಮಂದಹಾಸವಂತೂ ಇನ್ನೊಂದು ರಮಣೀಯ ದೃಶ್ಯ._
📜 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ