🌹ಮೇಘದೂತದ ಒಂದು ಮಧುರ ಹನಿ 🌹
*तस्यास्तिक्तैर्वनगजमदैर्वासितं वान्तदृष्टि: जम्बूकुञ्जप्रतिहतरयं तोयमादाय गच्छे: । अन्तस्सारं घन तुलयितुं नानिलश्शक्षति त्वां रिक्तस्सर्वो भवति हि लघु: पूर्णता गौरवाय ।।*
_ಎಲೈ ಘನನೇ, ನೀನು ಮಳೆ ಸುರಿಸಿ ಸುತ್ತಲೂ ಪರಿಮಳವನ್ನು ಹಬ್ಬಿಸಿದ್ದಿ. ಅಷ್ಟಲ್ಲದೇ ಕಾಡಾನೆಗಳ ಮದಜಲದಿಂದ ಇನ್ನಷ್ಟು ಸುವಾಸನೆ ತುಂಬಿಕೊಂಡಿರುವ ಮಧ್ಯ ಮಧ್ಯದಲ್ಲಿ ನೇರಳೆ ಗಿಡದ ಪೊದೆಗಳು ಬೆಳೆದು ಅವುಗಳಿಂದ ತಡೆಯಲ್ಪಟ್ಟ ವೇಗವುಳ್ಳ, ಆ ರೇವಾನದಿಯ ನೀರನ್ನು ಹೀರಿ ಮುಂದುವರೆ. ರೇವಾನದಿ ಆನೆಗಳ ನದಿಯೆನಿಸಿದೆ. ಆ ವಿಂಧ್ಯಪರ್ವತದ ಭಾಗ ಆನೆಗಳ ಜನ್ಮಭೂಮಿಯೆನಿಸಿದೆ. ಅದೊಂದು ತರಹದ ಸುವಾಸನೆ ಅವುಗಳ ಮದಜಲದಲ್ಲಿ ಅಡಗಿದೆ. ಅದೀಗ ನದೀ ನೀರಿನಲ್ಲಿ ಅವುಗಳ ಜಲಕ್ರೀಡಾಸಮಯದಲ್ಲಿ ಮಿಳಿತವಾಗಿದೆ. ಅಂತಹ ಸುಗಂಧ ಭರಿತ ನೀರನ್ನು ಕುಡಿದು ಪ್ರಯಾಣ ಮುಂದುವರೆಸು. ಮಳೆ ಸುರಿಸಿ ಆಗಲೇ ಖಾಲಿಯಾಗಿದ್ದಿ. ಈಗ ತುಂಬಿಕೊ. ಹೊಸ ಮಳೆ ಬಿದ್ದ ಹಾಗೂ ಆನೆಗಳ ಮದಜಲದ ಪರಿಮಳ ಎರಡೂ ಮಿಲಿತವಾಗಿ ಒಂದೊಳ್ಳೆ ಮಾದಕತೆ ಅಲ್ಲಿನ ವಾತಾವರಣದಲ್ಲಿ ಮೂಡುವುದು. ಆ ನದಿ ನೀರು ಕುಡಿದು ತುಂಬಿಕೊಂಡಿರುವ ನಿನ್ನನ್ನು ಗಾಳಿ ಹಾರಿಸಲು ಸಮರ್ಥವಾಗದು. ನಿನ್ನಷ್ಟಕ್ಕೆ ನೀನು ನಿಧಾನಕ್ಕೆ ಹೋಗಬಹುದು. ಒಳಗೆ ಬಲವಿಲ್ಲದ ಎಲ್ಲರೂ ಹಗುರವಾಗುತ್ತಾರೆ, ಸಂಪೂರ್ಣ ಬಲವು ಗೌರವಕ್ಕೆ ಕಾರಣವಾಗುವುದು. ಕವಿಯ ಸಾರ್ವಕಾಲಿಕ ಮಾತಿದು. ನಮ್ಮಲ್ಲಿ ಏನಾದರೂ ಸತ್ವವಿದ್ದಾಗ ಜನರು ನಮ್ಮ ಬಗ್ಗೆ ಹಗುರವಾದ ಮಾತನ್ನು ಆಡಲಾರರು, ಸಹಜವಾಗಿ ಗೌರವಿಸುವರು. ಅದೇ ಜ್ಞಾನದ ಅಥವಾ ಬಲದ, ಹಣದ , ರೂಪದ , ಅಧಿಕಾರದ ಕೊರತೆಯೆಂಬುದು ಎಲ್ಲ ರೀತಿಯ ಅಪಮಾನಾದಿಗಳಿಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಕಾರಣವಾಗುವುದು. ಅತ್ಯಂತ ಸಾಮಾನ್ಯರೂ ತರಹೇವಾರಿ ಮಾತುಗಳಿಂದ ಜರಿಯುವರು. ನಮ್ಮಲ್ಲಿ ಇವೆಲ್ಲ ಇದ್ದಾಗ ದುರ್ಗುಣಗಳಿದ್ದರೂ ಲೋಕ ಹಾಡಿ ಹೊಗಳುವುದು. ನೀನೇ ಇಂದ್ರ ನೀನೇ ಚಂದ್ರ ಎಂದೆಲ್ಲ. ಹಾಗಾಗಿ ಆದಷ್ಟು ಪೂರ್ಣತೆ ಪಡೆಯುವುದು ನಮ್ಮ ಆತ್ಮಗೌರವಕ್ಕೆ ಸ್ವಾಭಿಮಾನಕ್ಕೆ ಪೂರಕ. ಉಳಿದ ಎಲ್ಲಕ್ಕಿಂತ ಜ್ಞಾನ ನಿರಂತರ ಸಂಪಾದಿಸುತ್ತಾ ಎಲ್ಲರ ಜ್ಞಾತಿಗಳಾಗೋಣ.( ಬಂಧುಗಳು) ಇಲ್ಲದಿದ್ದರೆ ಗಾಳಿಯಂತಿರುವ ನೀಚರು ನಮ್ಮನ್ನು ಹಾರಿಸಿಯಾರು.ಮೊದಲಿಗೆ ನೀರಿನ ವಾಂತಿ ಮಾಡಿ ಅನಂತರ ನದಿಯ ಒಳ್ಳೆಯ ನೀರಿನ ರೂಪದ ಕಷಾಯ ಕುಡಿದು ಸುಧಾರಿಸಿಕೊಂಡು ಮುಂದುವರೆಯಬಹುದು ಎನ್ನುವ ಅಭಿಪ್ರಾಯವನ್ನು ವ್ಯಾಖ್ಯಾನಕಾರರು ಸೂಚಿಸಿದ್ದಾರೆ._
📜 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ