🌺 ಪ್ರತಿಮಾನಾಟಕದ ಒಂದು ಕುಸುಮ 🌺
*अत्र रामश्च सीता च लक्ष्मणश्च महायशा: । सत्यं शीलं च भक्तिश्च येषु विग्रहवान् स्थिता ।।*
_ಭರತ ರಾಮನ ಪರ್ಣಕುಟೀರ ಪ್ರವೇಶಿಸಿದ್ದಾನೆ. ತನ್ನ ತಾಯಿಯ ಪ್ರೀತಿಗೊಸ್ಕರ ರಾಜ್ಯಲಕ್ಷ್ಮಿಯನ್ನು ತ್ಯಜಿಸಿ ಕಾಡಿಗೆ ಬಂದ ತನ್ನ ಪರಮ ದೈವವಾದ ರಾಮನನ್ನು ನೋಡಲು ಅತಿಯಾದ ಕುತೂಹಲ. ಬಹಳ ದಿನಗಳಾಗಿದೆ ಅಣ್ಣ ಅತ್ತಿಗೆ ತಮ್ಮನನ್ನು ನೋಡಿ. ಆಗ ಸುಮಂತ್ರ ಅವರನ್ನು ತೋರಿಸಿಕೊಡುತ್ತಿರುವನು. ಇಲ್ಲೇ ಇದ್ದಾರೆ ಇವರು. ಸೀತಾರಾಮಲಕ್ಷ್ಮಣರು. ಬಹು ಕೀರ್ತಿವಂತರು. ಅಷ್ಟೇ ಅಲ್ಲ. ಸತ್ಯ ಶೀಲ ಭಕ್ತಿ ಮೂರು ಒಂದೆಡೆ ಸೇರಿದಂತಾಯಿತು. ಎಷ್ಟು ಸುಂದರ ಮಾತು ಭಾಸನದು. ಸತ್ಯದ ಪ್ರತೀಕ ಶ್ರೀರಾಮ. ಅವನೆಂದೂ ಸತ್ಯಮಾತಿಗೆ ತಪ್ಪಿ ನಡೆದವನಲ್ಲ ನಡೆಯುವವನೂ ಅಲ್ಲ. ಸೀತೆ ಸನ್ನಡತೆಯ ಸಂಕೇತ. ಪತಿ ಕಷ್ಟ ಅನುಭವಿಸುವಾಗ ತಾನು ರಾಜಭೋಗ ಅನುಭವಿಸುವುದು ಹೇಗೆಂಬ ಯೋಚನೆಯಿಂದ ಪತಿಯನ್ನೇ ಕಾಡಿನಲ್ಲೂ ಹಿಂಬಾಲಿಸಿದವಳು. ತನ್ನ ಮಾತು ಕೃತಿಗಳಲ್ಲಿ ಎಳ್ಳಷ್ಟೂ ಕುಂದುಂಟಾಗದಂತೆ ವರ್ತಿಸಿದ ಮಾತೆ ಅವಳು. ಇನ್ನು ಲಕ್ಷ್ಮಣ. ಭಕ್ತಿ ಹೇಗೆ ಮಾಡಬೇಕು, ಯಾರಲ್ಲಿ ಭಕ್ತಿ ಮಾಡಬೇಕು ಎಂಬುದನ್ನು ತನ್ನ ಕೃತಿಯ ಮೂಲಕ ತೋರಿಸಿಕೊಟ್ಟ ಮಹಾತ್ಮ. ರಾಮನ ಮೇಲಿನ ಅತಿಯಾದ ಭಕ್ತಿಯು ಅವನಿಗೆ ಭರತನನ್ನೇ ಸಂಶಯಿಸುವಂತೆ ಮಾಡಿದೆ.( ಭರತ ಕಾಡಿಗೆ ಬರುವಾಗ ) ಅಂತಹ ನಿಷ್ಕಲಂಕ ಕಾಮನೆಯಿಲ್ಲದ ಭಕ್ತಿ. ರಾಮನ ಭಕ್ತಿಯಿಂದ ಮೇಲ್ನೋಟಕ್ಕೆ ಕಾಣುವ ಯಾವ ಪ್ರಯೋಜನವೂ ಅವನಿಗಿಲ್ಲ. ಅವನು ಯುವರಾಜನೂ ಅಲ್ಲ. ಈ ಮೂರನ್ನು ನಾವು ಅನುಸರಿಸೋಣ. ರಾಮನಂತೆ ಸತ್ಯದ ದಾರಿಯಲ್ಲಿ ಸದಾ ಪಯಣ, ಸೀತೆಯಂತೆ ಸನ್ನಡತೆ ಅನುಸರಿಸುವುದು, ಲಕ್ಷ್ಮಣನಂತೆ ಭಗವಂತನಲ್ಲಿ ಭಕ್ತಿ. ಇವು ನಮ್ಮ ಆತ್ಮೋದ್ಧಾರಕ್ಕೆ ಕಾರಣವಾಗಬಹುದು._
📜 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ