🌺 ಪ್ರತಿಮಾ ನಾಟಕದ ಒಂದು ಸುರಭಿ 🌺
*दैत्येन्द्रमानमथनस्य नृपस्य पुत्रो यज्ञेपयुक्तविभवस्य नृपस्य पौत्र: । भ्राता पितु: प्रियकरस्य जगत्प्रियस्य रामस्य रामसदृशेन पथा प्रयाति ।।*
_ಸುಮಂತ್ರನು ಭರತನ ಬಗೆಗೆ ಆಡುವ ಮಾತಿದು. ಈ ಭರತ ಎಂತಹವನೆಂದರೆ, ರಾಕ್ಷಸಶ್ರೇಷ್ಠರ ಅಹಂಕಾರವನ್ನು ಸದೆಬಡಿದ ದಶರಥನ ಮಗನಿವನು. ಹಿಂದೆ ದೇವಾಸುರ ಯುದ್ಧದಲ್ಲಿ ಇಂದ್ರನಿಗೆ ಸಹಾಯಕನಾಗಿ ದಶರಥ ಹೋರಾಡಿ ಗೆಲುವು ಪಡೆದಿದ್ದ. ಕೈಕೇಯಿ ವರ ಪಡೆದದ್ದು ಅದೇ ಕಾಲದಲ್ಲಿ. ಇನ್ನು ಯಜ್ಞ ರಕ್ಷಣೆಯನ್ನೇ ಉಸಿರಾಗಿಸಿಕೊಂಡು ತನ್ನ ಸಂಪತ್ತನ್ನೆಲ್ಲ ಯಜ್ಞಗಳಿಗೆ ವಿನಿಯೋಗಿಸಿದ ಅಜನ ಮೊಮ್ಮಗನಿವನು. ಅಜನು ತನಗಾಗಿ ಯಾವ ಸಂಪತ್ತನ್ನೂ ಬಳಸದೇ ಯಜ್ಞಗಳಿಗಾಗಿಯೇ ವಿನಿಯೋಗಿಸಿ ಕೃತಾರ್ಥನಾದನು. ಇನ್ನು ತಂದೆಯ ಮಾತನ್ನು ಮೀರದೇ ಗುರುಹಿರಿಯರಲ್ಲಿ ತೋರಬೇಕಾದ ವರ್ತನೆಯನ್ನು ಸ್ವತಃ ತೋರಿಸಿಕೊಟ್ಟ ಜಗದ ಜನರ ಜೀವವೆನಿಸಿದ ಶ್ರೀರಾಮನ ಸಹೋದರನಿವನು. ಅಂತಹ ಭರತ ಹಿರಿಯರು ಹಾಕಿಕೊಟ್ಟ ಸನ್ಮಾರ್ಗ ಬಿಡದೆ ರಾಮನು ಯಾವ ಧರ್ಮ ಮಾರ್ಗದಲ್ಲಿ ನಡೆತುತ್ತಿದ್ದನೊ ಅದೇ ದಾರಿಯಲ್ಲಿ ಸಾಗುತ್ತಿದ್ದಾನೆ. ತಂದೆ ಅಜ್ಜ ಅಣ್ಣ ಯಾವ ಧರ್ಮವನ್ನು ಅನುಸರಿಸಿದರೋ ಅದೇ ಧರ್ಮ ಅನುಸರಿಸಿ ಹೆಜ್ಜೆ ಇಡುತ್ತಿರುವನು ಭರತ. ಇಲ್ಲಿ ಭರತನ ಅಧಿಕಾರದ ಆಸೆ ಇಲ್ಲದ ಬಂಧು ಪ್ರೀತಿ ಬಿಡದ ಶುದ್ಧ ಮನವನ್ನು ಕವಿ ವರ್ಣಿಸಿದ್ದಾನೆ. ಭರತನಂತೆ ತ್ಯಾಗಶೀಲನಾಗುವುದು ನಿಜಕ್ಕೂ ಕಷ್ಟ._
📜 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ