💐 ಪ್ರತಿಮಾ ನಾಟಕದ ಒಂದು ಹೂವು 💐
*हृदय भव सकामं यत्कृते शङ्कसे त्वं शृणु पितृनिधनं तद् गच्छ धैर्यं च तावत् । स्पृशति तु यदि नीचो मामयं शुल्कशब्द: अथ च भवति सत्यं तत्र देहो विशोध्य: ।।*
_ಭರತನಾಡುವ ಮಾತು. ಮೃತರ ಪ್ರತಿಮೆಯನ್ನು ಇರಿಸುವ ಮನೆಗೆ ಹೋಗಿ ದಶರಥನ ಪ್ರತಿಮೆಯನ್ನು ನೋಡಿದಾಗಲೇ ಭರತನಿಗೆ ಶಂಕೆ ಬಂದಿತ್ತು. ತಾನು ಊರಿನಿಂದ ಹೊರಡಲು ಕಾರಣವಾದ ಸಂದೇಶದಲ್ಲೂ ಏನಾದರೂ ಕೆಡುಕು ಘಟಿಸಿರಬಹುದೇ ಎಂದು ಸಂದೇಹಪಟ್ಟಿದ್ದನು. ಈಗ ನೋಡಿದರೆ ಅದು ನಿಜವಾಗಿದೆ. ಏ, ಮನವೇ ನಿನ್ನ ಬಯಕೆ ಈಡೇರಿತು. ಏನು ಆಗಬಾರದಿತ್ತೋ ಅದನ್ನೇ ನೀನು ಯೋಚಿಸುವುದು , ಅದೇ ಈಗ ಆಗಿ ಹೋಗಿದೆ. ಯಾವುದನ್ನು ಶಂಕಿಸುತ್ತಿದ್ದಿಯೋ ( ದಶರಥನ ಸಾವು ಆಗಿರಬಹುದೇ ಅಥವಾ ಬೇರೆ ಏನಾದರೂ ಕೆಡುಕು)ಅದು ನಿಜವಾಗಿದೆ. ತಂದೆ ಸತ್ತ ಸುದ್ದಿ ತಿಳಿದು ಧೈರ್ಯ ಕಳೆದುಕೊಳ್ಳದಿರು. ಅಪ್ಪನ ಮರಣ ವಾರ್ತೆಯನ್ನು ಕೇಳು. ಅಧೀರನಾಗದಿರು. ಆದರೆ ಅಪ್ಪನ ಸಾವಿಗೆ ಯಾವ ಈ ನೀಚವಾದ ಶುಲ್ಕ ವೆಂಬ ಶಬ್ದವು ಕಾರಣವಾಯಿತೋ ಅದು ನನ್ನನ್ನುದ್ದೇಶಿಸಿ ಅಥವಾ ನನಗೆ ಸಂಬಂಧಿಸಿದ್ದಾದರೆ, ಈ ನನ್ನ ದೇಹವನ್ನು ಅಗ್ನಿ ಪ್ರವೇಶಾದಿಗಳ ಮೂಲಕ ಶುದ್ಧ ಮಾಡಿಕೊಳ್ಳಬೇಕು. ಏನೋ ನಡೆದಿರಬಹುದೆಂದು ಭರತನ ಅಂತರಾತ್ಮ ಚಿಂತಿಸುತ್ತಿತ್ತು. ಮಾರ್ಗದಲ್ಲಿ ಕಂಡ ಅಪಶಕುನಗಳು ಅದನ್ನೇ ಸೂಚಿಸುತ್ತಿದ್ದವು. ಈಗ ಅವನ ಯೋಚನೆ ನಿಜವಾಗಿದೆ. ಹಾಗಾಗಿಯೇ ಧೈರ್ಯದಿಂದಿರು ಎಂದು ಸಮಾಧಾನಿಸುತ್ತಿದ್ದಾನೆ ತನ್ನದೇ ಮನಕ್ಕೆ. ಪ್ರತೀಹಾರೀ ಹಿಂದಿನ ಶ್ಲೋಕದಲ್ಲಿ *ಯೇನ ಪ್ರಾಣಾಶ್ಚ ರಾಜ್ಯಂ ಚ ಸ್ತ್ರೀಶುಲ್ಕಾರ್ಥೇ ವಿಸರ್ಜಿತಾ:* ಎಂದಿದ್ದ. ಶುಲ್ಕದ ಕಾರಣ ದಶರಥನ ಜೀವನರಥ ಮುರಿದದ್ದು ಎನ್ನುವುದು ಭರತನಿಗೆ ಅಲ್ಲೇ ತಿಲಿಯಿತು. ಆ ಶುಲ್ಕವೇನಾದರೂ ತನಗೆ ಸಂಬಂಧಿಸಿದ್ದಾದರೆ ಅದು ನಿಜಕ್ಕೂ ಬೇಸರದ ಸಂಗತಿ. ಅಪ್ಪನ ಮುದಿತನದ ಕಾಲದಲ್ಲಿ ನೋಡಿ ಸಲಹಬೇಕಾದ ಮಗನ ಕಾರಣದಿಂದಲೇ ಸಾವು ಬಂದೊದಗಿದರೆ ಅದು ಗುಣವಂತನಾದ ಭರತನಿಗೆ ದು:ಖದ ಸಂಗತಿ. ಹಾಗಾಗಿ ನುಡಿಯುತ್ತಿದ್ದಾನೆ. ಒಂದು ವೇಳೆ ತನಗೆ ಆ ಶುಲ್ಕ ಶಬ್ದವು ಸಂಬಂಧಿಸಿದ್ದೇ ಆದರೆ ಈ ದೇಹ ಹಾಳಾದಂತಾಯಿತು. ಅಥವಾ ದೇಹದ ನಿರ್ಮಲತೆ ಹೊರಟುಹೋಯಿತು. ಆಚಾರ ವಿಚಾರಗಳಲ್ಲಿ ಸತ್ವ- ಸತ್ಯಗಳಿದ್ದಾಗ ನಿರ್ಮಲತೆ ಹೊರತು ಗಂಧಾದಿಗಳನ್ನು ಪೂಸಿಯೋ, ಪೀತಾಂಬರ ಧರಿಸಿಯೊ, ಮಡಿ ಎನ್ನುತ್ತಾ ಒದರಿದಾಗಲೋ ಅಲ್ಲ. ತನ್ನ ಕುರಿತು ಅಪ್ಪನ ಮನ ನೊಂದು ದೇಹ ತ್ಯಾಗ ಮಾಡಿದ್ದಾದರೆ ಕೆಟ್ಟ ಕರ್ಮಕ್ಕೆ ಕಾರಣನಾದ ಪ್ರಯುಕ್ತ ಈ ದೇಹವನ್ನು ನೀರಿನಲ್ಲಿ ಮುಳುಗಿಸಿಯೋ ಅಗ್ನಿಯಲ್ಲಿ ಸುಟ್ಟೋ ಅಂಟಿದ ಪಾಪವನ್ನು ಕಳೆದುಕೊಳ್ಳಬೇಕು. ನನ್ನ ತಾಯಿ ನನ್ನ ಅಭಿಷೇಕದ ಕಾರಣ ಅಪ್ಪನ ಸಾವನ್ನು ತಂದುಕೊಟ್ಟದ್ದಾದರೆ ಅದು ನನಗೆ ಕೆಟ್ಟದ್ದು. ಹಾಗಾಗಿ ಪ್ರಾಣವನ್ನು ತ್ಯಜಿಸುವುದೇ ಈ ಸಮಯದಿ ಲೇಸೆಂದು ಭರತನ ಭಾವ. ಕವಿ ಭರತನ ಅಂತರಾಳವನ್ನು ಅತ್ಯಂತ ಮಾರ್ಮಿಕವಾಗಿ ಚಿತ್ರಿಸಿದ್ದಾನೆ. ಭರತನ ಗುಣಗಳು ನಮಗೆಲ್ಲ ಮಾದರಿ. ಅಧಿಕಾರಕ್ಕಾಗಿ ಹಪಹಪಿಸುವ ನಮ್ಮ ಮನವು ಭರತನಂತೆ ಯೋಚಿಸಲಿ._
📜 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ