🌸📗 ಮಹಾಭಾರತದ ಕೆಲವು ಅಪ್ರಸಿದ್ಧ ಕಥೆಗಳು📗🌸
ಅಂಗಾರಪರ್ಣ ಹಾಗೂ ಅರ್ಜುನನ ಸಂವಾದ .
ನಾವು ಬಳಸುವ ಆಯುಧಗಳೆಲ್ಲವೂ ವಜ್ರಾಯುಧದ ಭಾಗಗಳೇ ಆಗಿವೆ.
*ಪುರಾ ಕೃತಂ ಮಹೇಂದ್ರಸ್ಯ ವಜ್ರಂ ವೃತ್ರನಿಬರ್ಹಣೇ ದಶಧಾ ಶತಧಾ ಚೈವ ತಚ್ಛೀರ್ಣಂ ವೃತ್ರಮೂರ್ಧನಿ*
ವೃತ್ರನನ್ನು ಕೊಲ್ಲಲು ಹಿಂದೆ ವಜ್ರಾಯುಧವು ನಿರ್ಮಿಸಲ್ಪಟ್ಟಿತು. ಅದು ಅವನ ತಲೆಯ ಮೇಲೆ ಬಿದ್ದ ಕ್ಷಣವೇ ನೂರಾರು ಚೂರುಗಳಾಯಿತು. *ತತೋ ಭಾಗೀಕೃತೋ ದೇವೈರ್ವಜ್ರಭಾಗ ಉಪಾಸ್ಯತೇ ಲೋಕೇ ಯತ್ಸಾಧನಂ ಕಿಂಚಿತ್ಸಾ ವೈ ವಜ್ರತನು: ಸ್ಮೃತಾ*
ಅದಾದ ನಂತರ ದೇವತೆಗಳು ತುಂಡಾದ ಆ ಭಾಗವನ್ನೇ ವಜ್ರ ವೆಂದು ಉಪಾಸಿಸುತ್ತಿರುವರು. ಲೋಕದಲ್ಲಿ ಎಲ್ಲಾ ಕೆಲಸಗಳಲ್ಲೂ ಬಳಸಲ್ಪಡುವ ಸಾಧನಗಳೂ ಅದರದ್ದೇ ಸ್ವರೂಪವೆನಿಸಿವೆ.
*ವಜ್ರಪಾಣಿರ್ಬ್ರಾಹ್ಮಣಃ ಸ್ಯಾತ್ಕ್ಷತ್ರಂ ವಜ್ರರಥಂ ಸ್ಮೃತಮ್ ವೈಶ್ಯಾ ವೈ ದಾನವಜ್ರಾಶ್ಚ ಕರ್ಮವಜ್ರಾ ಯವೀಯಸಃ* ಬ್ರಾಹ್ಮಣನಿಗೆ ಕೈಯೇ ವಜ್ರ.( ತಪಸ್ಸಿನ ಶಕ್ತಿಯಿಂದ ಶಾಪ ಕೊಡಲು) ಕ್ಷತ್ರಿಯನಿಗೆ ರಥವೇ ವಜ್ರ( ಯುದ್ಧ ಮಾಡಿ ಗೆಲ್ಲಲು. ಹಾಗಾಗಿಯೇ ದೃಷ್ಟದ್ಯುಮ್ನ ಹುಟ್ಟಿದ ಕ್ಷಣವೇ ರಥವೇರಿ ಹೊರಡುವನು) ವೈಶ್ಯನಿಗೆ ದಾನವೇ ವಜ್ರ.( ನ್ಯಾಯಯುತವಾದ ಸಂಪಾದನೆಯ ಒಂದಷ್ಟು ಭಾಗ ದಾನ ಮಾಡಿ ಪಾಪ ಲೇಪವಾಗದಂತೆ ನೋಡುವುದು) ಉಳಿದವರಿಗೆ ಅವರ ಕರ್ಮವೇ ವಜ್ರ. ( ಕರ್ಮದಿಂದ ಏನನ್ನು ಬೇಕಾದರೂ ಸಾಧಿಸಬಹುದು, ಗುಹ ಶಬರಿ ಇತ್ಯಾದಿ ಮಹನೀಯರು ಋಷಿಗಳಿಗೂ ದೊರಕದ ಮೋಕ್ಷವನ್ನು ಕರ್ಮದಿಂದ ಪಡೆದರು)
ಅರ್ಜುನ ಮೊದಲಿಗೆ ಗಂಧರ್ವನ ಕೊಡುತ್ತಿರುವ ಉದ್ದೇಶ ಅರಿಯಲು ನಿರಾಕರಿಸುವನು. ಆಗ ಅವನು ಪ್ರೀತಿಯಿಂದಲೇ ನೀಡುವೆನು, ನಿನ್ನಿಂದಲೂ ಪಡೆಯುವೆನೆಂದು ಅರ್ಜುನನಿಂದ ಆಗ್ನೇಯಾಸ್ತ್ರ ಪಡೆದುಕೊಳ್ಳುವನು.ವಿದ್ಯೆ ಹೀಗೂ ಸಂಪಾದಿಸಬಹುದು. ನಮ್ಮಲ್ಲಿನ ವಿದ್ಯೆ ಹಂಚಿ ಅವರಲ್ಲಿನ ವಿದ್ಯೆ ನಾವು ಪಡೆಯುವುದು. *ಗುರುಶುಶ್ರೂಷಯಾ , ಪುಷ್ಕಲೇನ ಧನೇನ, ವಿದ್ಯಯಾ ವಿದ್ಯಾ* ಎಂಬ ಮೂರು ಬಗೆಗಳು ವಿದ್ಯೆ ಪಡೆಯಲು ಇರುವ ವಿಧಾನಗಳು.
ಕೊನೆಗೆ ತನ್ನನ್ನು ತಡೆದ ಕಾರಣವನ್ನು ಕೇಳಿದಾಗ ಆ ಗಂಧರ್ವ ಒಂದಷ್ಟು ವಿಷಯ ಹೇಳುವನು.
*ಅನಗ್ನಯೋ ಅನಾಹುತಯೋ ನ ಚ ವಿಪ್ರಪುರಸ್ಕೃತಾ: ಯೂಯಂ ತತೋ ಧರ್ಷಿತಾಃ ಸ್ಥ* ಅಗ್ನಿಹೋತ್ರ ದಿನವೂ ಮಾಡದ ಕಾರಣ ತಡೆದೆ , ಯಜ್ಞಗಳನ್ನು ಆಚರಿಸದ ಕಾರಣ ತಡೆದೆ ಹೋಗಲಿ ಬ್ರಹ್ಮ ಚಿಂತನೆಯ ಬ್ರಾಹ್ಮಣರಾರೂ ನಿಮ್ಮೊಂದಿಗಿಲ್ಲ ಹಾಗಾಗಿ ತಡೆದೆ. ನಾವು ಸ್ವತಃ ಅಗ್ನಿಹೋತ್ರ ಮಾಡಬೇಕು. ಯಜ್ಞ ಗಳನ್ನು ಯಥಾಶಕ್ತಿ ಆಚರಿಸಬೇಕು. ವಿಪ್ರರ ಸಹಕಾರ ಪಡೆಯಬೇಕು. ಪಾಂಡವರು ಆ ಕಾಲದಲ್ಲಿ ಭಿಕ್ಷೆಯಿಂದ ಜೀವನ ಸಾಗಿಸುತ್ತಿದ್ದ ಕಾರಣ ಸಾಧ್ಯವಾಗಲಿಲ್ಲ.
*ಸ್ತ್ರೀಸಕಾಶೇ ಚ ಕೌರವ್ಯ ನ ಪುಮಾನ್ಕ್ಷಂತುಮರ್ಹತಿ* ಸ್ತ್ರೀಯರೊಡನಿರುವಾಗ ಯಾವನೂ ಅಪಮಾನ ಸಹಿಸಲಾರ. ಆದರೆ ಗಂಧರ್ವನಂತೆ ಸ್ತ್ರೀಯರೆದುರು ಪರಾಕ್ರಮ ಪ್ರದರ್ಶಿಸಲು ಹೋಗಿ ಮರ್ಯಾದೆ ಕಳಿದುಕೊಳ್ಳಬೇಕಾದೀತು.
*ನಕ್ತಂ ಚ ಬಲಮಸ್ಮಾಕಂ ಭೂಯ ಏವಾಭಿವರ್ಧತೇ* ರಾತ್ರಿಯಲ್ಲಿ ಗಂಧರ್ವರ ಹಾಗೂ ರಾಕ್ಷಸಾದಿಗಳ ಬಲ ಹಗಲಿನ ಹತ್ತು ಪಟ್ಟು ಹೆಚ್ಚು. ಮಾನವರಿಗೆ ಮಾತ್ರ ಹಗಲಲ್ಲೇ ಹೆಚ್ಚು ಬಲ.
*ಬ್ರಹ್ಮಚರ್ಯಂ ಪರೋ ಧರ್ಮಃ* ಲೋಕದಲ್ಲಿ ಶ್ರೇಷ್ಠವಾದ ಧರ್ಮ ಬ್ರಹ್ಮಚರ್ಯದ ಆಚರಣೆ. ಅದು ನೀನು ಮಾಡುತ್ತಿರುವ ಕಾರಣ ನನ್ನನ್ನು ಸೋಲಿಸಿರುವೆ. ಬ್ರಹ್ಮಚರ್ಯದ ಮಹತ್ವ ಇಲ್ಲಿ ತಿಳಿಯುತ್ತದೆ.
ಇನ್ನು ಮುಂದುವರಿದು ಯಾರು ಪುರೋಹಿತರು, ರಾಜನಿಗೆ ಏಕೆ ಅವಶ್ಯಕ ಅವರು ಇತ್ಯಾದಿ ವಿವರಿಸುತ್ತಾನೆ.
*ವೇದೇ ಷಡಂಗೇ ನಿರತಾಃ ಶುಚಯಃ ಸತ್ಯವಾದಿನಃ ಧರ್ಮಾತ್ಮಾನಃ ಕೃತಾತ್ಮಾನಃ ಸ್ಯುರ್ನೃಪಾಣಾಂ ಪುರೋಹಿತಾಃ*
ಶಿಕ್ಷಾ ವ್ಯಾಕರಣ ಛಂದಸ್ಸು ಜ್ಯೋತಿಷ್ಯ ಕಲ್ಪ ನಿರುಕ್ತ ಎಂಬ ಆರು ಅಂಗಗಳ ಜೊತೆಗೆ ವೇದ ಓದಿದವರು, ಅಂತರ್ಬಹಿ ಶುದ್ಧರೂ ( ಹೊರಗೆ ತೋರಿಕೆಗೆ ಮಾತ್ರವಲ್ಲ ಮನವೂ ಕಲ್ಮಶರಹಿತವಾಗಿರಬೇಕು) ಸತ್ಯವಾದಿಗಳೂ, ಧರ್ಮಾತ್ಮರೂ, ಸ್ಥಿರಚಿತ್ತರೂ ಆದ ಪುರೋಹಿತರೂ ರಾಜರಿಗಿರಬೇಕು.
ಮುಂದೆ ಕುರುವಂಶದ ಆದಿಯ ಬಗೆಗೆ ಕಥೆ ಮುಂದುವರೆಸುತ್ತಾನೆ ಅಂಗಾರಪರ್ಣ.
ಮುಂದುವರಿಯುವುದು....
📗 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ