🌹 ಮೇಘದೂತದ ಒಂದು ಕುಸುಮ 🌹

*तां कस्यांचिद्भवनवलभौ  सुप्तपारावतायां  नीत्वा रात्रिं चिरविलसनात्खिन्नविद्युकलत्र: । सूर्ये दृष्टे पुनरपि भवान्वाहयेदध्वशेषं मन्दायन्ते न खलु सुहृदामभ्युपेतार्थकृत्या: ।।*

_ಮೇಘವೇ, ನೀನು ಅಲ್ಲಲ್ಲಿ ಮಿಂಚಿನ ಸಂಚಾರ ಏರ್ಪಡಿಸಿ ಮಳೆಯ ತೋರಣ ಕಟ್ಟುತ್ತಾ ಹೋಗುತ್ತಿರುವಾಗ ಬಹುಕಾಲ ಸ್ಫುರಿಸಿದುದರಿಂದ ಬಳಲಿದ ಮಿಂಚೆಂಬ ನಿನ್ನ ಪತ್ನಿಗೆ ಸ್ವಲ್ಪ ವಿಶ್ರಾಂತಿ ಕೊಡಿಸು. ಜನರೆದುರಿಗೆ ಅವಳು ಸತತವಾಗಿ ಕಾಣಿಸಿಕೊಂಡು ಆಕೆ ಬಳಲಿಹಳು ಆಧುನಿಕ ಮಾಡೆಲ್ ಗಳು ಕ್ಯಾಮೆರಾ ಕಣ್ಣಿಗೆ ಬಿದ್ದು ಬಳಲುವಂತೆ. ನೀನು ಯಾವುದಾದರೂ ಪಾರಿವಾಳಗಳು ಮಲಗಿರುವ ಮಹಡಿಯ ಮೇಲ್ಭಾಗದಲ್ಲಿ ಆ ರಾತ್ರಿಯನ್ನು ಕಳೆ. ಹಾಗೆಯೇ ಮೈ ಮರೆಯದಿರು. ಸೂರ್ಯೋದಯವಾಗುತ್ತಿದ್ದಂತೆ ಮತ್ತೆ ನಾನು ನಿರ್ದೇಶಿಸಿದ ಉಳಿದ ಮಾರ್ಗವನ್ನು ಸಾಕಷ್ಟು ಬೇಗ ಕ್ರಮಿಸು. ಏಕೆ ಹೀಗೆ ನುಡಿಯುವೆನೆಂದರೆ ಮಿತ್ರರ ಕೆಲಸ ಮಾಡುವೆವೆಂದು ಮಾತು ಕೊಟ್ಟವರಾರೂ ವಿಳಂಬ ಮಾಡದೇ ಶೀಘ್ರವಾಗಿ ‌ಮುಗಿಸುವರು._

_ಸ್ವಲ್ಪ ಕಾಲ ಯಾರಿಗೂ ಕಾಣಿಸಿಕೊಳ್ಳದೇ ಮಿಂಚು ಹೊಡೆಸದೇ ವಿಶ್ರಾಂತಿ ಪಡೆ. ಅನಂತರ ಎಷ್ಟು ಸಾಧ್ಯವೋ ಅಷ್ಟು ಬೇಗ ನನ್ನ ಮನದರಸಿಯ ಬಳಿ ತೆರಳು. ಒಳ್ಳೆಯ ಮಿತ್ರನು ಯಾವತ್ತಿಗೂ ತಾನು ಮಾಡಿಕೊಡುವೆನೆಂದು ಹೇಳಿದ ಕೆಲಸದ ವಿಷಯದಲ್ಲಿ ವಿಳಂಬ ಮಾಡಲಾರನು. ನನ್ನ ಆಪ್ತಮಿತ್ರ ನೀನು. ನಿನ್ನನ್ನೇ ನಂಬಿ ಬದುಕು ಉಳಿಸಿಕೊಂಡಿರುವೆ. ಹಾಗಾಗಿ ಬೇಗ ನಲ್ಲೆಯ ಬಳಿಗೆ ತೆರಳು. ಮಿತ್ರರ ಉದಾರತೆಯನ್ನು ಕೊಂಡಾಡಿದ್ದಾರೆ._

📜 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩