🌺 ಪ್ರತಿಮಾನಾಟಕದ ಒಂದು ಸುಮ🌺
*त्वया राज्यैषिण्या नृपतिरसुभिर्नैवगणित: सुतं ज्येष्ठं च त्वं व्रज वनमिति प्रेषितवती । न शीर्णं यद् दृष्ट्वा जनकतनयां वल्कलवतीं अहो धात्रा सृष्टं भवति हृदयं वज्रकठिनम् ।।*
_ಭರತನ ಬೇಸರದ ಮಾತು.ಮಗನಿಗಾಗಿ ರಾಜ್ಯ ಕೇಳಿದ ನೀನು ಪತಿಯ ಪ್ರಾಣವನ್ನು ಲೆಕ್ಕಿಸಲಿಲ್ಲ. ಪತಿಯ ಪ್ರಾಣವನ್ನು ಬಲಿಕೊಟ್ಟಾದರೂ ರಾಜ್ಯ ಪಡೆಯುವ ನಿನ್ನ ಕೆಟ್ಟ ಬಯಕೆ ಸರಿಯಾದುದೇ! ಗಂಡನಿಗೆ ದ್ರೊಹ ಎಸಗಿರುವೆ ನೀನು. ಜ್ಯೇಷ್ಠನೂ ಸುತಶ್ರೇಷ್ಠನೂ ಆದ ರಾಮನನ್ನು ಕಾಡಿಗೆ ಅಟ್ಟಿದೆಯಲ್ಲಾ. ರಾಮ ಯಾವ ಗುಣದಲ್ಲಿ ಕಡಿಮೆ ಇದ್ದ,ಅಥವಾ ದೊಡ್ಡವನಲ್ಲವೇ, ಅವನಿಗೆ ಏನಾದರೂ ನ್ಯೂನತೆಗಳಿದ್ದವೇ, ಅಥವಾ ಪ್ರಜೆಗಳು ಅವನನ್ನು ಬಯಸಿರಲಿಲ್ಲವೇ? ಇದಾವುದೂ ಇಲ್ಲದೆ ಅವನನ್ನು ವಿನಾಕಾರಣ ಮನೆಗೆ ಕಳುಹಿ ಪುತ್ರ ದ್ರೋಹ ಮಾಡಿರುವೆ. ಅಷ್ಟಲ್ಲದೇ ಮಿಥಿಲೆಯಲ್ಲಿ ಸುಖದ ಸುಪ್ಪತ್ತಿಗೆಯಲ್ಲಿ ಬೆಳೆದ ಆ ಬಾಲಿಕೆ ಸೀತೆಗೆ ನಾರು ಬಟ್ಟೆ ಉಡಿಸಿದೆಯಲ್ಲ. ( ರಾಮಾಯಣದಲ್ಲಿ ಅವಳು ನಾರು ಬಟ್ಟೆ ಉಡುವುದಿಲ್ಲ. ರೇಶ್ಮೆ ಸೀರೆಯನ್ನೇ ಧರಿಸುತ್ತಾಳೆ) ಎಂದೂ ಅದರ ಪರಿಚಯವೇ ಇಲ್ಲದ ಮುದ್ದಿನ ಸೊಸೆಗೆ ಅದನ್ನು ಉಡಿಸಿದ ಕ್ಷಣದಲ್ಲಾದರೂ ನಿನ್ನ ಹೃದಯ ಒಡೆದು ಹೋಗಲಿಲ್ಲವೇ? ನೀನಿನ್ನೂ ಸಾಯಲಿಲ್ಲವೇ? ಅಬ್ಬಾ ನಿಜಕ್ಕೂ ಬ್ರಹ್ಮ ವಜ್ರದಷ್ಟು ಕಠಿನವಾದ ಅಥವಾ ಕ್ರೂರವಾದ ಹೃದಯವನ್ನೇ ಸೃಷ್ಟಿ ಮಾಡಿದ್ದಾನೆ. ಇಷ್ಟೆಲ್ಲಾ ಘಟನೆಗಳು ನಡೆದರೂ ದು:ಖ ಮಡುಗಟ್ಟುತ್ತಿದ್ದರೂ ನಿನ್ನೆದೆ ಒಡೆದು ಹೋಗಲಿಲ್ಲ.? ಇನ್ನೂ ಬದುಕಿ ನಾನೇನು ತಪ್ಪು ಮಾಡಿದೆಯೆಂದು ಪ್ರಶ್ನೆ ಮಾಡುತ್ತಿರುವೆಯಲ್ಲ. ನೀನು ಸತ್ತು ಹೋಗಿದ್ದರೆ ಚೆನ್ನಾಗಿರುತ್ತಿತ್ತೇನೋ! ಭರತ ತನ್ನ ಅಣ್ಣನ ಮೇಲಿನ ಅತಿಯಾದ ವಾತ್ಸಲ್ಯದಿಂದ ತಾಯಿಯನ್ನು ಕೂಡ ಕ್ರೂರವಾಗಿ ನಿಂದಿಸುತ್ತಿದ್ದಾನೆ. ಪತಿದ್ರೋಹ ಪುತ್ರದ್ರೋಹ ಪ್ರಜಾದ್ರೋಹ ಇತ್ಯಾದಿ ಮಾಡಿಯೂ ಬದುಕಿ ಹೇಗೆ ಉಳಿದೆ ಎಂಬ ಭಾವ. ಹೃದಯ ಎಷ್ಟು ಕಠಿಷವಾಗಿದೆಯೆಂದರೆ ವಜ್ರದಷ್ಟೇ ಎನ್ನುತ್ತಾನೆ ಕವಿ. ಅದು ಯಾವ ಸಂದರ್ಭದಲ್ಲೂ ಜಗ್ಗಲಾರದು, ಕುಗ್ಗಲಾರದು._
📜 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ