🌺 ಪ್ರತಿಮಾ ನಾಟಕದ ಒಂದು ಕುಸುಮ 🌺
*अयोध्यामटवीभूतां पित्रा भ्रात्रा च वर्जिताम् । पिपासार्तोनुधावामि क्षीणतोयां नदीमिव ।।*
_ಪ್ರತಿಮೆಗಳ ಪೂಜಕನು ಭರತನನ್ನು ಸಮಾಧಾನಿಸುತ್ತಾನೆ. ಆಗ ಭರತನಾಡುವ ಮಾತು- ಯಾವ ಅಯೋಧ್ಯೆಗೆ ನಾನು ಬಂದಿದ್ದೇನೆ! ಇದು ಕಾಡು, ಅಯೋಧ್ಯೆಯಲ್ಲ. ಮಮತೆಯಿಂದ ಬೆಳೆಸಿ ಸಲಹಿದ ತಂದೆಯಿಲ್ಲದ, ತಾಯಿಯಷ್ಟೇ ಪ್ರೀತಿ ತೋರಿದ ಅಣ್ಣನಿಲ್ಲದ ಈ ಅಯೋಧ್ಯೆ ಅಯೋಧ್ಯೆಯೇ ಅಲ್ಲ. ಇದು ಕಾಡಾಗಿದೆ. ವಿಷಯ ಸರಿಯಾಗಿ ತಿಳಿದುಕೊಳ್ಳದೇ ಓಡೋಡಿ ಬಂದ ನನ್ನ ಪಾಡಿದು. ಒಂದೊಳ್ಳೆ ದೃಷ್ಟಾಂತ ಕೊಟ್ಟಿದ್ದಾನೆ ಕವಿ. ದಾಹದಿಂದ ತತ್ತರಿಸುವ ಪಥಿಕನೊಬ್ಬ ನೀರಿಗೆಂದು ಬತ್ತಿ ಹೋಗುತ್ತಿರುವ ನದಿಗೆ ಹೋದರೆ ಅವನ ದಾಹ ತಣಿಯುವುದೇ? ಸಾಧ್ಯವೇ ಇಲ್ಲ. ಸಮೃದ್ಧವಾಗಿ ಅಥವಾ ಒಂದು ರೇಖೆಯಷ್ಟಾದರೂ ಹರಿಯುವ ನೀರು ಅವನ ದಾಹವನ್ನು ತಣಿಸೀತು. ಭರತನೂ ಇಲ್ಲಿ ಅಣ್ಣ, ಅಪ್ಪನ ಪ್ರೀತಿಯ ಕರೆಯೆಂದು ಓಡೋಡಿ ಬಂದಿರುವನು. ಇಲ್ಲಿ ನೋಡಿದರೆ ಅವನ ದಾಹವು ಹೆಚ್ಚಾಯಿತೇ ಹೊರತು ಕಡಿಮೆಯಾಗಲಿಲ್ಲ. ತನ್ನ ತಂದೆಯನ್ನು ಹಾಗೂ ಅಣ್ಣನನ್ನು ಎಷ್ಟು ಪ್ರೀತಿಸುತ್ತಿದ್ದನೆಂಬ ಭಾವ ಕವಿಯ ಪದಗಳಲ್ಲಿ ಸುಂದರವಾಗಿ ಮೂಡಿಬಂದಿದೆ.ಅವನ ಎಣಿಕೆಯೆಲ್ಲ ಮಣ್ಣಾಗಿ ಹೋಗಿದೆ. ಅಯೋಧ್ಯೆ ಅವನ ಪಾಲಿಗೆ ಸುಡುಗಾಡು ಇದ್ದಂತೆ. ಆದರೂ ಪ್ರಜೆಗಳ ಮೇಲಿನ ಪ್ರೀತಿಯು, ಜನ್ಮ ಭೂಮಿಯ ಮೇಲಿನ ಅಭಿಮಾನದಿಂದ ಹಾಗೆ ಹೇಳಲಿಲ್ಲವಷ್ಟೇ! ಉಪಮಾ ಅಲಂಕಾರ._
📜 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ