🍀🌸 ಮಹಾಭಾರತದ ಅಪ್ರಸಿದ್ಧ ಕಥೆಗಳು ಹಾಗೂ ಕೆಲವು ಶ್ಲೋಕಗಳು ☘🌻
ಪಾಂಡವರು ಏಕಚಕ್ರನಗರದಿಂದ ವ್ಯಾಸರ ಆಣತಿಯಂತೆ ದ್ರೌಪದಿಯನ್ನು ಪಡೆಯಲೆಂದು ಪಾಂಚಾಲದ ಕಡೆಗೆ ಪಯಣಿಸುತ್ತಿದ್ದರು.ಮಧ್ಯ ಮಾರ್ಗದಲ್ಲಿ ಗಂಗೆಯ ತೀರವೊಂದರಲ್ಲಿ ಸಂಧ್ಯಾಸಮಯದಲ್ಲಿ ಉಳಿಯಲು ಬಯಸುತ್ತಾರೆ.ಆ ಸಮಯದಲ್ಲಿ ಅರ್ಜುನನು ಸ್ವಲ್ಪ ಕತ್ತಲಾದ್ದರಿಂದ ಬೆಳಕಿನ ದೊಂದಿ ಹಿಡಿದು ಅವರನ್ನು ಮುನ್ನಡೆಸುತ್ತಿರುತ್ತಾನೆ.
ಆಗ ಅದೇ ಪ್ರದೇಶದಲ್ಲಿ ಸ್ವಲ್ಪ ರಮಣೀಯವಾದ ಗಂಗೆಯ ಪ್ರವಾಹವಿರುವ ಸ್ಥಳದಲ್ಲಿ ಅಂಗಾರಪರ್ಣನೆಂಬ ಗಂಧರ್ವರಾಜನೊಬ್ಬ ಸಖಿಯರೊಡಗೂಡಿ ಜಲಕ್ರೀಡೆ ಆಡುತ್ತಿದ್ದನು. ಇವರ ಆಗಮನವನ್ನು ಕಂಡ ಆ ಈರ್ಷ್ಯೆಯ ಗಂಧರ್ವನು ಕುಪಿತನಾಗಿ ಆಕ್ಷೇಪಿಸುತ್ತಾನೆ.
*ಸಂಧ್ಯಾ ಸಂರಜ್ಯತೇ ಘೋರಾ ಪೂರ್ವರಾತ್ರಾಗಮೇಷು ಯಾ ಅಶೀತಿಭಿಸ್ತ್ರುಟೈರ್ಹೀನಂ ತಂ ಮುಹೂರ್ತಂ ಪ್ರಚಕ್ಷತೆ ವಿಹಿತಂ ಕಾಮಚಾರಾಣಾಂ ಯಕ್ಷಗಂಧರ್ವರಾಕ್ಷಸಾಮ್.*
ರಾತ್ರಿಯ ಆರಂಭಕ್ಕೆ ಮುನ್ನ ಘೋರವಾದ ಸಂಧ್ಯಾಕಾಲ ಕೆಂಪೇರುತ್ತಿದೆ. ಎಂಭತ್ತು ವಿಘಳಿಗೆಗಳು ಕಳೆದ ಮೇಲೆ ಬರುವ ಮುಹೂರ್ತವು ಕಾಮಚಾರಿಗಳಾದ ಯಕ್ಷರು ರಾಕ್ಷಸರು ಗಂಧರ್ವರು ಇವರುಗಳಿಗೆ ಹೇಳಿದ ಕಾಲ. ಉಳಿದ ಸಮಯವೆಲ್ಲ ಮನುಷ್ಯರಿಗೆ ಮೀಸಲಾಗಿದೆ.ಹಾಗಾಗಿ ನೀವೇಕೆ ಸಂಚರಿಸುತ್ತಿರುವಿರಿ.
*ತತೋ ರಾತ್ರೌ ಪ್ರಾಪ್ನುವತೋ ಜಲಂ ಬ್ರಹ್ಮವಿದೋ ಜನಾ: ಗರ್ಹಯಂತಿ ನರಾನ್ಸ್ತರ್ವಾನ್ಬಲಸ್ಥಾನ್ನೃಪತೀನಪಿ* ರಾತ್ರಿಯ ಕಾಲದಲ್ಲಿ ನೀರಿನ ಬಳಿ ಬರುವ ಮನುಷ್ಯರನ್ನು ಅವರು ಬಲಯುತರಾಗಿದ್ದರೂ ಅದು ಸರಿಯಲ್ಲವೆಂದು ಬ್ರಹ್ಮಜ್ಞರು ನಿಂದಿಸುವರು.
ನಮ್ಮ ಹಿರಿಯರು ಈ ಕಾರಣದಿಂದಲೇನೋ ಸಂಧ್ಯಾಕಾಲದಲ್ಲಿ ನದಿ ಕೆರೆ ಬಾವಿಗಳ ಬಳಿಯಲ್ಲಿ ಹೋಗುವುದನ್ನು ನಿಷೇಧಿಸಿದ್ದರು. ಸಂಧ್ಯಾ ಸಮಯದಲ್ಲಿ ಸ್ತೋತ್ರ ಮಂತ್ರ ಭಜನೆ ಅರ್ಘ್ಯದಾನ ಜಪ ಹೀಗೆ ದೇವ ಕಾರ್ಯಗಳಲ್ಲಿ ರತರಾದಾಗ ದುಷ್ಟರಿಂದ ರಕ್ಷಣೆ ಸಿಗುವುದು.
ಆ ಗಂಧರ್ವನು ಮುಂದುವರೆದು ಕುಬೇರನ ಸ್ನೇಹಿತನು ನಾನು. ಈ ಅರಣ್ಯಪ್ರದೇಶ ನನ್ನ ಆಳ್ವಿಕೆಯಲ್ಲಿದೆ. ಗಂಗಾ ಮತ್ತು ವಾಕಾ ನದಿಗಳ ಸಂಗಮ ಸ್ಥಳವಿದು. ನೀವೇಕೆ ಬಳಿ ಬರುತ್ತಿರುವಿರಿ ಎಂದು ಆಕ್ಷೇಪಿಸುತ್ತಾನೆ.
ಆಗ ಅರ್ಜುನ ' ಸಮುದ್ರ ಹಿಮಾಲಯದ ತಪ್ಪಲು ಈ ಗಂಗಾನದಿ ಈ ಮೂರು ಸ್ಥಳಗಳಲ್ಲಿ ನಮ್ಮನ್ನು ಯಾವನೂ ಅಡ್ಡಿಪಡಿಸಲಾರ. ಅವರಿಗೆ ಅಂತಹ ಅಧಿಲಾರವೇ ಇಲ್ಲ. ಎಂದು ಸಮರ್ಥಿಸಿಕೊಳ್ಳುತ್ತಾನೆ.
ಗಂಗೆಯ ಜಲ ಯಾವ ಸಮಯದಲ್ಲೂ ಸೇವಿಸಲು ಯೋಗ್ಯ ಎಂಬ ಸಂಗತಿ ಹೀಗೆ ಹೇಳಲ್ಪಟ್ಟಿದೆ. ಮುಂದುವರೆಸುತ್ತಾ ಗಂಗೆಯ ಮಹತ್ವ ಹೇಳುತ್ತಾನೆ.
*ಪುರಾ....ಗಂಗಾ ಗತ್ವಾ ಸಮುದ್ರಾಂಭ: ಸಪ್ತಧಾ ಪ್ರತಿಪದ್ಯತೇ. ಇಯಂ ಭೂತ್ವಾ ಚೈಕವಪ್ರಾ ಶುಚಿರಾಕಾಶಗಾ ಪುನ: ದೇವೇಷು ಗಂಗಾ ಗಂಧರ್ವ ಪ್ರಾಪ್ನೋತ್ಯಲಕನಂದತಾಮ್. ತಥಾ ಪಿತೃನ್ವೈತರಣೀ ದುಸ್ತರಾ ಪಾಪಕರ್ಮಭಿ:*
ಹಿಮವಂತನಿಂದ ಹೊರಟ ಈ ಗಂಗೆಯು ಏಳು ಕವಲಾಗಿ ಹರಿದು ಸಮುದ್ರ ಸೇರುತ್ತದೆ. ಈ ಗಂಗೆ ಆಕಾಶದಲ್ಲಿ ಏಕವಪ್ರಾ ಹೆಸರು, ದೇವಲೋಕದಲ್ಲಿ ಅಲಕನಂದಾ ಎಂಬ ಹೆಸರು ಪಡೆಯುವುದು.ಹಾಗೆಯೇ ಪಿತೃಲೋಕದಲ್ಲಿ ಪಾಪಿಗಳಿಗೆ ದಾಟಲಸಾಧ್ಯವಾದ ವೈತರಣೀ ಎನಿಸುತ್ತದೆ. ಹೀಗೆಲ್ಲಾ ವ್ಯಾಸರ ಮಾತಿದೆ.ನೀನಾರು ನಮ್ಮನ್ನು ತಡೆಯಲು ಎಂದು ಪ್ರತಿಭಟಿಸುವನು.
ಮುಂದುವರಿಯುವುದು.....
📗 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ