🌹ಮೇಘದೂತದ ಒಂದು ಬಿಂದು🌹
*रत्नच्छायाव्यतिकर इव प्रेक्ष्यमेतत्पुरस्तात् वल्मीकाग्रात्प्रभवति धनु:खण्डमाखण्डलस्य । येन श्यामं वपुरतितरां कान्तिमापस्त्यते ते बर्हेणेव स्फुरितरुचिना गोपवेषस्य विष्णो: ।।*
_ಚಿತ್ರಕೂಟ ಪರ್ವತವನ್ನು ದಾಟಿ ಹೋಗುವಾಗ ಕಾಣುವ ಬಗೆಯನ್ನು ಯಕ್ಷ ವರ್ಣಿಸುತ್ತಿದ್ದಾನೆ. ನೀನು ಕಪ್ಪೆಂದು ಕೀಳರಿಮೆ ಬೇಡ. ಕೃಷ್ಣನೂ ಕಪ್ಪು ವರ್ಣದವನೇ. ನೀನು ಈ ಪ್ರಕೃತಿಯಲ್ಲಿ ಮಿಂದಾಗ ಕೃಷ್ಣನಂತೇ ಕಾಣುವೆ. ನಿನ್ನ ಮಾರ್ಗದಲ್ಲಿ ಈ ಪರ್ವತಪ್ರದೇಶದ ಅನೇಕ ಕಡೆ ಹುತ್ತಗಳನ್ನು ನೀನು ಕಾಣುವಿ. ಬೆಳಗಿನ ಹೊಂಬಿಸಿಲು ಆ ಹುತ್ತಗಳು ಮತ್ತು ಮರಗಳ ನಡುವೆ ಒಡಮೂಡಿದಾಗ ಅಲ್ಲೊಂದು ಚಮತ್ಕಾರ ನಡೆಯುತ್ತದೆ. ಇಂದ್ರನ ಧನುಸ್ಸು ಅಥವಾ ಕಾಮನಬಿಲ್ಲು ನಿನ್ನ ಮುಂಭಾಗದ ಹುತ್ತದ ಮೇಲೆ ಕಾಣಬರುವುದು. ಅದರ ಕಾಂತಿ ಪದ್ಮರಾಗ ಮಾಣಿಕ್ಯ ಪಚ್ಚೆ ಮುಂತಾದ ರತ್ನಗಳ ಮಿಶ್ರಣದಂತೆ ಶೋಭಿಸುವುದು. ನಿನ್ನೆದುರು ಅದು ಕಂಡಾಗ ನಿಜಕ್ಕೂ ನೀನು ಸಂತೋಷಪಡುವೆ. ಏಳು ಬಣ್ಣದ ಆ ಇಂದ್ರಚಾಪವು ಕ್ಷಣಕಾಲ ಮಿಂಚುತ್ತಿರಲು ಯಾವ ರಸಿಕರ ಕಣ್ಣು ಮುಚ್ಚೀತು! ಅನತಿ ಕಾಲದಲ್ಲೇ ಆ ಕಾಮನಬಿಲ್ಲಿನ ಪ್ರಕಾಶಮಾನ ಬೆಳಕು ಕಪ್ಪಾದ ದೇಹವುಳ್ಳ ನಿನ್ನ ಮೇಲೆ ಬಿದ್ದಾಗ ನಿಜಕ್ಕೂ ನೀನು ಅತಿಶಯವಾಗಿ ಶೋಭಿಸುವೆ. ಅದರಲ್ಲೂ ಗೋಪವೇಷವನ್ನು ಧರಿಸಿದ ಕಪ್ಪಾದ ಕೃಷ್ಣನು ನವಿಲುಗರಿ ಮುಡಿದುಕೊಂಡು ಹೇಗೆ ಸಕಲರನ್ನೂ ಆಕರ್ಷಿಸುವನೋ ಅಂತಹ ಶೋಭೆ ನಿನ್ನಲ್ಲೂ ಕಂಡುಬರುವುದು. ನೀನು ಕೃಷ್ಣನಂತೆ ಎಲ್ಲರನ್ನೂ ಆಕರ್ಷಿಸುವೆ. ಉಪಮಾ ಮತ್ತು ಉತ್ಪ್ರೇಕ್ಷೆ ಅಲಂಕಾರಗಳು. ಯಕ್ಷ ತನ್ನ ಕೆಲಸ ಮಾಡಿಸಿಕೊಳ್ಳಲು ಮೋಡವನ್ನು ಹೊಗಳಿ ಅಟ್ಟಕ್ಕೇರಿಸುತ್ತಿದ್ದಾನೆ. ಕೃಷ್ಣನಂತೆ ನೀನು ಆ-ಕರ್ಷಕ ಎಂದೆಲ್ಲಾ ಹೇಳಿ ಒಲಿಸಲು ಪ್ರಯತ್ನಿಸುತ್ತಿದ್ದಾನೆ. ರತ್ನವರ್ಣಗಳ ಛಾಯೆಯ ಸೊಬಗಿನ ಇಂದ್ರ ಚಾಪದ ಸ್ಪರ್ಶವು ನಿನ್ನ ನೀಲಮೈಯ ಕಾಂತಿಯನ್ನು ಇಮ್ಮಡಿಗೊಳಿಸುವುದು. ನಾವೂ ಇನ್ನೊಬ್ಬರ ಹೊಗಳಿಕೆಯನ್ನು ಕೇಳಿ ನಾವೇ ಸರ್ವಜ್ಞರೆಂಬಂತೆ ಬೀಗದಿರೋಣ._
📜 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ