🌸📗 ಮಹಾಭಾರತದ ಕೆಲವು ಅಪ್ರಸಿದ್ಧ ಕಥೆಗಳು📗🌸

ಅಂಗಾರಪರ್ಣ ಹಾಗೂ ಅರ್ಜುನನ ಸಂವಾದ ಮುಂದುವರೆಯುತ್ತದೆ.

ಅರ್ಜುನನ ನಿರ್ಭೀತಿಯ ಮಾತನ್ನು ಕೇಳಿದ ಅಂಗಾರಪರ್ಣ ಅವನ ಮೇಲೆ ಯುದ್ಧ ಸಾರಿದನು. ಪಾರ್ಥನು ಕೈಯಲ್ಲಿ ಹಿಡಿದ ಕೊಳ್ಳಿಯಿಂದ ಹಾಗೂ ಚರ್ಮದ ಚೀಲದಿಂದ ಅವನ ಬಾಣಗಳನ್ನೆಲ್ಲಾ ನಿವಾರಿಸಿ ಬೃಹಸ್ಪತಿಯ ಪರಂಪರೆಯಿಂದ ಬಂದ ಆಗ್ನೇಯಾಸ್ತ್ರ ಪ್ರಯೋಗಿಸಿ ಗಂಧರ್ವನ ರಥವನ್ನು ಸುಟ್ಟುಹಾಕಿದನು. ತಲೆಕೆಳಗಾಗಿ ಬೀಳುತ್ತಿದ್ದ ಆ ಗಂಧರ್ವನ ಜುಟ್ಟು ಹಿಡಿದು ಸೋದರರ ಬಳಿಗೆ ಕೊಂಡೊಯ್ದನು. ಆಗ ಅವನ ಪತ್ನಿ ಕುಂಭೀನಸಿ ಎಂಬುವಳು ಪತಿಯ ಪ್ರಾಣಭಿಕ್ಷೆಯನ್ನು ಧರ್ಮಜನಲ್ಲಿ ಕೇಳಿದಳು. ಧರ್ಮಜ ಅಭಯ ನೀಡುವನು. ಆಗ ಗಂಧರ್ವ ಕೆಲವು ಒಳ್ಳೆಯ ಮಾತುಗಳನ್ನು ನುಡಿಯುವನು.

*ಸಂಸ್ತಂಭಿತಂ ಹಿ ತರಸಾ ಜಿತಂ ಶರಣಮಾಗತಮ್ ಯೋರಿಂ ಸಂಯೋಜಯೇತ್ಪ್ರಾಣೈ: ಕಲ್ಯಾಣಂ ಕಿಂ ನ ಸೋರ್ಹತಿ*

ತನ್ನ ಪರಾಕ್ರಮದ ಮುಂದೆ ಸೋತು ಶರಣಾಗತನಾದ ಶತ್ರುವಿಗೆ ಪ್ರಾಣದಾನ ಮಾಡಿದವನು ಯಾವ ಕಲ್ಯಾಣಕ್ಕೆ ಅರ್ಹನಲ್ಲ? ಅಂತಹ ವ್ಯಕ್ತಿಯನ್ನು ಸಕಲ ರೀತಿಯಲ್ಲೂ ಗೌರವಿಸಬೇಕು. ಪ್ರಾಣಕ್ಕಿಂತ ಮಿಗಿಲಾದ ವಸ್ತು ಜಗದಲ್ಲಿ ಬೇರೊಂದಿಲ್ಲ.

ಚಾಕ್ಷುಷೀ ವಿದ್ಯೆಯನ್ನು ಅರ್ಜುನನಿಗೆ ಉಪದೇಶಿಸುತ್ತಾನೆ. ಅದರ ಮಹತ್ವ-
*ಯಚ್ಚಕ್ಷುಷಾ ದ್ರಷ್ಟುಮಿಚ್ಛೇತ್ರಿಷು ಲೋಕೇಷು ಕಿಂಚನ ತತ್ಪಶ್ಯೇದ್ಯಾದೃಶಂ ಚೇಚ್ಛೇತ್ತಾದೃಶಂ ದ್ರಷ್ಟುಮರ್ಹತಿ*

ಮೂರು ಭುವನಗಳಲ್ಲಿ ಯಾವುದನ್ನು ಕಣ್ಣಿನಿಂದ ನೊಡಲು ಬಯಸಿದರೂ ಅವೆಲ್ಲವೂ ಕಾಣುವುದು. ಎಂತಹ ವಸ್ತುವನ್ನು ನೋಡಲು ಅಪೇಕ್ಷಿಸಿದರೂ ಅವೆಲ್ಲವೂ ಸಾಧ್ಯವಾಗುವುದು.ಮುಂದೆ ಗಂಧರ್ವ ಲೋಕದ ಉತ್ತಮ ನೂರು ಕುದುರೆಗಳನ್ನೂ ನೀಡುತ್ತಾನೆ.

ಮುಂದುವರಿಯುವುದು....

📗 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩