🌾📗🌾 ರಾಮಾಯಣದ ಮೌಲ್ಯಯುತ ಮಾತುಗಳು ಭಾಗ-೫
*ನಿವೇದ್ಯಮಾನೇ ದೋಷ: ಸ್ಯಾದ್ದೋಷ: ಸ್ಯಾದನಿವೇದನೇ ಕಥಂ ನು ಖಲು ಕರ್ತವ್ಯಂ ವಿಷಮಂ ಪ್ರತಿಭಾತಿ ಮೇ*
ಹನುಮನ ಮಾತಿದು. ಸೀತೆ ಎಷ್ಟು ಹುಡುಕಿದರೂ ಸಿಗುತ್ತಿಲ್ಲ. ಈ ವಾರ್ತೆಯನ್ನು ಹೇಳಿದರೂ ಕಷ್ಟವೇ! ಸಿಗಲಿಲ್ಲವೆಂದು ವಾನರರು ಹಾಗೂ ರಾಮಾದಿಗಳು ಪ್ರಾಣವನ್ನೇ ಬಿಟ್ಟಾರು. ಅಂತಹ ಅನರ್ಥ ಘಟಿಸೀತು. ಹೋಗಲಿ ಹೇಳದೇ ಉಳಿಯುವ ಎಂದರೆ ದೂತನಾಗಿ ಕರ್ತವ್ಯ ಸರಿಯಾಗಿ ನಿರ್ವಹಿಸದೆ ವಂಚಿಸಿದ ಪಾಪ ತಟ್ಟೀತು. ಹೀಗಿರುವಾಗ ನನ್ನ ಕರ್ತವ್ಯವೇನು! ಇದು ತುಂಬಾ ಇಕ್ಕಟ್ಟಿನ ಪರಿಸ್ಥಿತಿ ಆಗಿದೆ. ದುಷ್ಯಂತನಿಗೂ ಶಕುಂತಲೆಯ ಸ್ವೀಕಾರದ ಸಮಯದಲ್ಲಿ ಇಂತಹ ಸಂದಿಗ್ಧತೆ ಎದುರಾಗಿತ್ತು. ಪತ್ನಿಯೆಂದು ಸ್ವೀಕರಿಸಿದರೆ ಪರದಾರಪರಿಗ್ರಹವೆಂಬ ದೋಷ, ಬಿಟ್ಟರೆ ಗರ್ಭಕ್ಕೆ ಕಾರಣನಾಗಿ ನಡುನೀರಿನಲ್ಲಿ ಕೈ ಬಿಟ್ಟ ಪಾಪ ಯಾವುದು ಸರಿ ಯಾವುದು ತಪ್ಪು? ನಮ್ಮ ಜೀವನದಲ್ಲೂ ಇಂತಹ ಅನೇಕ ಸಂದಿಗ್ಧ ಸ್ಥಿತಿಗಳು ಬರುತ್ತಲೇ ಇರುತ್ತವೆ. ಆಗೆಲ್ಲ *ನ್ಯಾಯಾತ್ ಪಥ: ಪ್ರವಿಚಲಂತಿ ಪದಂ ನ ಧೀರಾ:* ಎಂಬಂತೆ ಸರಿಯಾದ ನ್ಯಾಯಯುತವಾದ ದಾರಿಯಲ್ಲೇ ನಡೆದು ಉಳಿದವರ ಕೋಪಕ್ಕೆ ಕಾರಣವಾದರೂ ದೇವನ ಪ್ರೀತಿ ಸಂಪಾದಿಸೋಣ.
*ವಿನಾಶೇ ಬಹವೋ ದೋಷಾ ಜೀವನ್ಭದ್ರಾಣಿ ಪಶ್ಯತಿ ತಸ್ಮಾತ್ಪ್ರಾಣಾನ್ಧರಿಷ್ಯಾಮಿ ಧ್ರುವೊ ಜೀವತಿ ಸಂಗಮ:*
ಜೀವನದಲ್ಲಿ ನಿರಾಶೆಗಳು ಸಹಜ. ಆಸೆಯ ಜೊತೆಗೇ ಬರುವುದು ನಿರಾಸೆ. ಅವೆರಡೂ ಅವಳಿ ಜವಳಿಯ ತರಹ. ನಿರಾಸೆಯಿಂದ ಪ್ರಾಣವನ್ನೇ ಬಿಟ್ಟರೆ ಅನೇಕದೋಷಗಳುಂಟಾಗುತ್ತವೆ. ಜೀವಿಸಿದ್ದರೆ ಇಂದಲ್ಲಾ ನಾಳೆ ಶುಭವನ್ನು ಕಾಣಬಹುದು. ಹಾಗಾಗಿ ನಾನು ಸೀತೆ ಕಾಣಸಿಗಲಿಲ್ಲವೆಂದು ಪ್ರಾಣ ತೊರೆಯಲಾರೆ. ಜೀವ ಇದ್ದರೆ ಸುಖ ಸಿಗುವುದು ನಿಶ್ಚಯ. ಜೀವ ಬಿಡಲಾರೆ. ಹನುಮನ ಮತ್ತೊಂದು ಮಾತು. ಮನ:ಶಾಸ್ತ್ರಜ್ಞರು ಒಕ್ಕೊರಲಿನಿಂದ ನುಡಿಯುವ ಮಾತಿದು. ಯುವ ಜನತೆ ಬೇರೆ ಬೇರೆ ವಿಷಯಗಳ ನಿರಾಸೆಯಿಂದ ಒಂದು ಕ್ಷಣ ಯೊಚಿಸದೇ ಅಮೂಲ್ಯವಾದ ಪ್ರಾಣವನ್ನೇ ಬಲಿ ಕೊಡುತ್ತಾರೆ. ಹಾಗೆ ಆತ್ಮಹತ್ಯೆ ಮಾಡಿಕೊಳ್ಳುವುದು ಮಹಾಪಾಪ. ಈಗ ನಿರಾಸೆ ಎದುರಾದರೂ ಮುಂದೊಮ್ಮೆ ಬಯಕೆ ಈಡೇರಬಹುದೆಂಬ ಅಶಾವಾದ ನಮ್ಮ ಜೀವನದಲ್ಲಿ ಎಲ್ಲಾ ಕಾಲಕ್ಕೂ ಅತ್ಯಂತ ಅವಶ್ಯಕ. ಜೀವನ ದೀರ್ಘವಾಗಿದ್ದಾಗ ಒಂದಲ್ಲ ಒಂದು ಘಳಿಗೆ ಸುಖಿಸುವ ಯೋಗ ತಾನಾಗಿ ಬರುವುದು. ಅಲ್ಲಿಯವರೆಗೆ ತಾಳು ಮನವೇ ಎಂದು ಸಮಾಧಾನದಿಂದಿರುವುದು ಮುಖ್ಯ.
*ಸ್ತ್ರೀ ಪ್ರಣಷ್ಟೇತಿ ಕಾರುಣ್ಯಾದಾಶ್ರಿತೇತ್ಯಾನೃಶಂಸ್ಯತ: ಪತ್ನೀ ನಷ್ಟೇತಿ ಶೋಕೇನ ಪ್ರಿಯೇತಿ ಮದನೇನ ಚ*
ರಾಮನ ದು:ಖಕ್ಕೆ ಕಾರಣವನ್ನು ಕವಿ ಉತ್ತಮ ಮಾತುಗಾರನಾದ ಹನುಮನ ಮೂಲಕ ಹೇಳುತ್ತಿರುವನು. ಸ್ತ್ರೀಯೊಬ್ಬಳು ಇಂತಹ ಅವಸ್ಥೆಗೆ ಒಳಗಾದಳಲ್ಲಾ ಎಂಬ ಕರುಣಾಪೂರ್ಣ ದು:ಖ ರಾಮನನ್ನು ಮೊದಲಿಗೆ ಬಾಧಿಸಿತು. ಸ್ತ್ರೀವಾದಿಗಳೂ ಬುದ್ಧಿಜೀವಿಗಳು ನಿಂದಿಸುವ ಸ್ತ್ರೀ ವಿರೋಧಿ ಎಂದು ಜರಿಯುವ ರಾಮನ ನೈಜ ಚಿತ್ರಣ ಇಲ್ಲಿದೆ. ಗೃಹಿಣೀ ಗೃಹಮುಚ್ಯತೇ, ನಾರ್ಯಸ್ತು ಯತ್ರ ಪೂಜ್ಯಂತೆ ಇತ್ಯಾದಿ ಮಾತಿನಂತೆ ರಾಮನಿಗೆ ಮೊದಲು ದು:ಖವಾಗಿದ್ದು ಸಮಾಜದ ಮುಖ್ಯ ಅಂಗಕ್ಕೆ ದುರವಸ್ಥೆ ಬಂದ ಕಾರಣ. ಅನಂತರ ರಾಜನಾಗಿ ಯೋಚಿಸಿದಾಗ ಕ್ಷತ್ರಿಯರ ಕರ್ತವ್ಯ ಆಶ್ರಿತರ ರಕ್ಷಣೆ. ಆ ಕಾರ್ಯ ತನ್ನಿಂದ ಆಗಲಿಲ್ಲವಲ್ಲ ಎಂದು ನಿಟ್ಟುಸಿರುಬಿಟ್ಟನಂತೆ. ತನ್ನನ್ನೇ ಆಶ್ರಯಿಸಿ ಬಂದವಳನ್ನು ಕಾಪಾಡಲು ಅಸಮರ್ಥನಾದುದು ದು:ಖಹೇತು. ಮೂರನೆಯದಾಗಿ ಧರ್ಮೇ ಚ ಅರ್ಥೇ ಚ ಕಾಮೇ ಚ ನಾತಿಚರಾಮಿ ಎಂದು ಪರಿಗ್ರಹಿಸಿದ ಪತ್ನಿಯು ಅಪಹೃತಳಾದಳು ಎಂಬ ದು:ಖ ರಾಮನದು. ಪತ್ನಿಗೆ ಪತಿಯೇ ಆಪ್ತರಕ್ಷಕ. ಅಂತಹ ಅಪ್ತನಾಗದೇ ಹೋದನಲ್ಲವೆಂಬ ಚಿಂತೆ ಬಾಧಿಸಿತು. ಕೊನೆಯದಾಗಿ ಪ್ರಿಯಳ ವಿರಹದಿಂದ ದು:ಖ. ಕೆಲವರು ಪತ್ನಿ ಹೋದರೆ ಒಂದು ಸ್ವಲ್ಪ ಕಾಲವಾದರೂ ಸಂತೋಷಪಡಬಹುದೇನೋ! ಕೈಕೇಯಿ ಒಂದೊಮ್ಮೆ ಸ್ವಲ್ಪ ಕಾಲ ದೂರ ಹೋಗಿದ್ದರೆ ದಶರಥ ಮನಶ್ಶಾಂತಿ ಪಡೆಯುತ್ತಿದ್ದನೇನೋ! ರಾಮನಿಗೆ ಹಾಗಲ್ಲ. ಅವಳು ಕೇವಲ ಪತ್ನಿಯಲ್ಲ. ಎರಡು ದೇಹ ಒಂದು ಆತ್ಮವೆಂಬಂತೆ ಅವಳು ಪ್ರೀತಿಯ ಸಖಿ. ಅಂತಹ ಪ್ರಿಯೆ ದೂರಾದಳಲ್ಲಾ ಎಂಬ ಮನ್ಮಥಬಾಧೆ ಪೀಡಿಸಿತು. ಕವಿ ಸೂಕ್ಷ್ಮವಾಗಿ ರಾಮನ ಮನದ ತುಮುಲ ತೆರೆದಿಟ್ಟಿದ್ದಾನೆ. ರಾಮಾಯಣವನ್ನು ಆಧರಿಸಿ ಬರೆದ ಅನೇಕ ಪ್ರಖ್ಯಾತರು ಇಂತಹುದನ್ನು ಮರೆತು ವಿನಾಕಾರಣ ರಾಮನನ್ನು ನಿಂದಿಸುವರೆಂಬುದು ಸಜ್ಜನರ ದು:ಖಕ್ಕೆ ಕಾರಣ.
📗 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ