🌺 ಪ್ರತಿಮಾನಾಟಕದ ಒಂದು ಸುಮ 🌺

*ತಾಯಂದಿರ ದಿನದ ವಿಶೇಷ ಕುಸುಮ*

*काले खल्वागता देव्य: पुत्रे मोहमुपागते । हस्तस्पर्शोहि मातृणामजलस्य जलाञ्जलि: ।।*

_ದೇವಕುಲಿಕನ ಮಾತು. ಭರತ ತನ್ನ ತಂದೆಯನ್ನು, ಅಣ್ಣನನ್ನು ನೆನೆನೆನೆದು  ಮೂರ್ಛೆ ಹೋಗಿದ್ದಾನೆ. ಅದೇ ಸಮಯದಿ ಕೌಸಲ್ಯಾದಿ ಅಮ್ಮಂದಿರು ರಾಜರ ಪ್ರತಿಮೆ ಇಡುವ ಆ ಮನೆಗೆ ಬಂದಿದ್ದಾರೆ. ಅವರು ಬಂದ ಸಮಯ ಸೂಕ್ತವಾಗಿದೆ. ಏಕೆಂದರೆ ತಾಯಂದಿರ ಸ್ಪರ್ಶ ಮಕ್ಕಳ ಎಲ್ಲಾ ನೋವನ್ನೂ ಮರೆಸಬಲ್ಲದು ಹೊರತು ಇನ್ಯಾವುದೂ ಅಲ್ಲ. ನೀರು ಸಿಗದೇ ಬಾಯಾರಿ ಬಳಲಿದವನಿಗೆ ನೀರು ದೊರಕಿದಾಗ ಎಷ್ಟು ಆನಂದವಾಗುವುದೋ ಅಂತಹ ಆನಂದ ಅಮ್ಮನ ಸ್ಪರ್ಶದಲ್ಲಿದೆ. ಅರ್ಥಾಂತರ ನ್ಯಾಸ ಅಲಂಕಾರ. ಅಂತಹ ಅಮ್ಮಂದಿರನ್ನು ದಿನವೂ ನೆನೆಯುತ್ತಾ ಅವರ ಮನಕ್ಕೆ ದು:ಖ ನೀಡದೇ ಪ್ರೀತಿ ಉಳಿಸಿಕೊಂಡು ಗೌರವಿಸೋಣ. ನಮ್ಮೆಲ್ಲರನ್ನೂ ಅಮ್ಮಂದಿರ ಆತ್ಮೀಯ ಸ್ಪರ್ಶ ಹರಸಲಿ._

📜 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩