🌾📗ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು🌾📗
ಭಾಗ-೭
*ಆಮ್ನಾಯಾನಾಮಯೋಗೇನ ವಿದ್ಯಾಂ ಪ್ರಶಿಥಿಲಾಮಿವ* ನಿನ್ನೆ ಇದರ ಅರ್ಥ ಬೇರೆ ರೀತಿಯಲ್ಲಿ ಬರೆದಿದ್ದೆ. ವ್ಯಾಖ್ಯಾನಕಾರರ ಮತದಂತೆ. ಇಲ್ಲಿ ಆಮ್ನಾಯ ಶಬ್ದಕ್ಕೆ ವೇದವೆಂದು ಅರ್ಥ ಮಾಡಿದಾಗ ವೇದರಹಿತವಾದ ವಿದ್ಯೆ ಹೇಗೆ ಶೋಭಿಸುವುದಿಲ್ಲವೋ ಹಾಗೆ ರಾಮನಿಲ್ಲದ ಸೀತೆ ಶೋಭಿಸುತ್ತಿರಲಿಲ್ಲ. ಎಲ್ಲಾ ವಿದ್ಯೆಗಳಿಗೂ ವೇದಗಳೇ ಮೂಲ. ಆ ಮೂಲವನ್ನೇ ಮರೆತು ಎಷ್ಟು ಕಲಿತರೇನು, ವೇದವನ್ನು ಅರ್ಥೈಸಿಕೊಳ್ಳದ ಪಂಡಿತನಂತೆ ಶೋಭಾಯಮಾನವಲ್ಲ ಎಂಬ ತಾತ್ಪರ್ಯ.
*ಅತುಷ್ಟಂ ಸ್ವೇಷು ದಾರೇಷು ಚಪಲಂ ಚಲಿತೇಂದ್ರಿಯಮ್ ನಯಂತಿ ನಿಕೃತಿಪ್ರಾಜ್ಞಂ ಪರದಾರಾಃ ಪರಾಭವಮ್*
ಸೀತೆ ರಾವಣನಿಗೆ ನುಡಿಯುವ ಮಾತು. ತನ್ನ ಪತ್ನಿಯಲ್ಲಿ ತೃಪ್ತಿ ಹೊಂದದೇ ಅಸಭ್ಯನಾದ ಚಂಚಲಚಿತ್ತನಾದ ಇಂದ್ರಿಯಗಳಿಗೆ ದಾಸನಾದ ವಂಚಿಸುವ ಬುದ್ಧಿಯಿಂದ ಕೂಡಿದ ಮಾನವನನ್ನು ಪರಪತ್ನಿಯರು ತಿರಸ್ಕಾರಕ್ಕೆ ಈಡು ಮಾಡುತ್ತಾರೆ. ಅಂತಹ ವ್ಯಕ್ತಿಗಳನ್ನು ಸ್ತ್ರೀ ಸಮೂಹ ಗೌರವಿಸಲಾರದು. ಸಮಾಜ ಅವನ ಬಗೆ ತಿರಸ್ಕಾರ ತಾಳುವುದು. ಎಷ್ಟೇ ಮುಂದುವರೆದ ಸಮಾಜವಾದರೂ ಸಮಾಜದ ಸುವ್ಯವಸ್ಥೆಯ ದೃಷ್ಟಿಯಿಂದ ಇಂತಹ ಆಚರಣೆ ಅವಶ್ಯಕ. ಇಲ್ಲದಿದ್ದರೆ ಯಾರಿಗೆ ಯಾರು ಪತಿ ಯಾರಿಗೆ ಪತ್ನಿ ಯಾರ ಮಕ್ಕಳು ಮುಂತಾದ ಪ್ರಶ್ನೆಗಳಿಗೆ ಉತ್ತರ ಹುಡುಕಬೇಗಾಗುತ್ತದೆ. ಅದು ಸಾಮಾಜಿಕ ವ್ಯವಸ್ಥೆಯನ್ನು ಹಾಳುಮಾಡುತ್ತದೆ. ಹಾಗಾಗಿ ತನ್ನ ಪತ್ನಿಯಲ್ಲಿ ರಮಿಸುವುದು ಉತ್ತಮ ಎಂಬ ಅಭಿಪ್ರಾಯ ಕವಿಯದ್ದು.
*ಅಕೃತಾತ್ಮಾನಮಾಸಾದ್ಯ ರಾಜಾನಮನಯೇ ರತಮ್ ಸಮೃದ್ಧಾನಿ ವಿನಶ್ಯಂತಿ ರಾಷ್ಟ್ರಾಣಿ ನಗರಾಣಿ ಚ*
ಇದು ಪ್ರಸಿದ್ಧ ಶ್ಲೋಕ. ಸತ್ಪುರುಷರ ಉಪದೇಶ ಸ್ವೀಕರಿಸದ ಅವರ ಮಾತಿಗೆ ಗೌರವ ಕೊಡದ ಅನೀತಿವಂತನಾದ ರಾಜನನ್ನು ಪಡೆದು ಸಮೃದ್ಧವಾದ ರಾಷ್ಟ್ರಗಳೂ ಮತ್ತು ನಗರಗಳೂ ಸಂಪೂರ್ಣ ವಿನಾಶಹೊಂದುತ್ತವೆ. ಸೀತೆ ರಾವಣನಿಗೆ ನುಡಿಯುವ ಮಾತು. ವಿಭೀಷಣನಂತಹ ಸಜ್ಜನರ ಮಾತು ಕೇಳದೇ ಪರದಾರಾಪಹರಣ ರೂಪವಾದ ದುಷ್ಕರ್ಮ ಮಾಡಿರುವ ನಿನ್ನನ್ನು ಅಶ್ರಯಿಸಿರುವ ಈ ಸಂಪತ್ತಿನಿಂದ ಜಗತ್ತಲ್ಲೇ ಅತ್ಯಂತ ಸಮೃದ್ಧವಾದ ಈ ಲಂಕೆ ನಿಸ್ಸಂಶಯವಾಗಿ ನಾಶ ಹೊಂದುವುದು. ನಾವೂ ರಾಜನ ಆಯ್ಕೆಯ ಸಮಯದಲ್ಲಾದರೂ ಎಚ್ಚರ ಹೊಂದಬೇಕು. ನಮ್ಮಲ್ಲಿ ಎಷ್ಟು ಸಮೃದ್ಧಿ ಇದ್ದರೂ ರಾಜನ ಕಾರಣದಿಂದ ನಾಶ ಹೊಂದಬಹುದು. ಹಾಗಾಗಿ ಮತದಾನ ಮುಂತಾದವುಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಯೋಗ್ಯರನ್ನು ಆರಿಸಿದರೆ ಆಮೇಲೆ ಕೊರಗುವುದು ತಪ್ಪೀತು.
*ಸ್ವಕೃತೈರ್ಹನ್ಯಮಾನಸ್ಯ ರಾವಣಾದೀರ್ಘದರ್ಶಿನ: ಅಭಿನಂದಂತಿ ಭೂತಾನಿ ವಿನಾಶೇ ಪಾಪಕರ್ಮಣ:*
ರಾವಣ! ದೂರದೃಷ್ಟಿಯಿಲ್ಲದೆ ತಾನು ಮಾಡುವ ಪಾಪಕರ್ಮಗಳಿಂದಲೇ ವಿನಾಶಗಹೊಂದುವ ಪಾಪಿಯ ಸಾವು ಇಡೀ ಜೀವರಾಶಿಗೇ ಸಂತೋಷವನ್ನು ತಂದುಕೊಡುತ್ತದೆ. ಬದುಕಿದ್ದಾಗ ಒಳ್ಳೆಯ ಕೆಲಸಗಳನ್ನು ಕೆಲವನ್ನಾದರೂ ಮಾಡಿದರೆ ಜನರು ಪ್ರಶಂಸಿಸುತ್ತಾರೆ. ಆದರೆ ಪಾಪಕರ್ಮ ಮಾಡಿದಾಗ ಅಂತಹವರ ಮರಣವನ್ನೇ ಜನರು ಅಪೇಕ್ಷಿಸುತ್ತಾರೆ. ಹಾಗಾಗಿ ಕೆಟ್ಟಜನರು ಸತ್ತರೆ ದು:ಖಪಡುವುದರಲ್ಲಿ ಅರಿಸಿಣ ಇಲ್ಲ.ಆಗ ಸಂಭ್ರಮಾಚರಣೆ ಯೋಗ್ಯವೇ ಆಗಿದೆ. ಅವರ ಸಾವು ಅನೇಕರ ಪಾಲಿಗೆ ಸುದಿನಗಳನ್ನು ತಂದುಕೊಡುವುದು. ನೀನು ಪಾಪ ಮಾಡಿದ್ದಿ. ಈಗ ಪರಿಮಾರ್ಜನೆ ಮಾಡಿಕೊ.
*ಯಥಾ ಯಥಾ ಸಾಂತ್ವಯಿತಾ ವಶ್ಯ: ಸ್ತ್ರೀಣಾಂ ತಥಾ ತಥಾ ಯಥಾ ಯಥಾ ಪ್ರಿಯಂ ವಕ್ತಾ ಪರಿಭೂತಸ್ತಥಾ ತಥಾ*
ರಾವಣ ಹೇಳುವ ಮಾತು. ಲೋಕದಲ್ಲಿ ಸ್ತ್ರೀಯರನ್ನು ಯಾವ ಯಾವ ರೀತಿಯಲ್ಲಿ ಸಾಂತ್ವನಗೊಳಿಸುವರೋ ಅದೇ ರೀತಿಯಲ್ಲಿ ಅವನು ಸ್ತ್ರೀಯರಿಗೆ ಅಧೀನನಾಗುತ್ತಾನೆ. ಸ್ತ್ರೀಯರು ಅಂತಹವನ ಮಾತನ್ನು ನಂಬಿ ಅನುಸರಿಸುತ್ತಾರೆ. ಆದರೆ ನಿನ್ನ ವಿಷಯದಲ್ಲಿ ಮಾತ್ರ ಎಷ್ಟು ಆಮಿಷ ಒಡ್ಡಿದರೂ ಎಷ್ಟು ಪ್ರೀತಿಯ ಮಾತನ್ನಾಡಿದರೂ ಅ್ಟಷ್ಟಷ್ಟು ಹೆಚ್ಚಾಗಿ ನಿನ್ನಿಂದ ಅವಮಾನಿತನಾಗುತ್ತಿದ್ದೇನೆ. ಲೋಕದಲ್ಲಿ ಸಹಜವಾಗಿ ಸ್ತ್ರೀಯರ ಸ್ವಭಾವ ಮಧುರ ಮಾತುಗಳನ್ನು ನಂಬಿ ಮರುಳಾಗುವುದು. ಕೆಲವೊಮ್ಮೆ ಪುರುಷರೂ ಬಲೆಬೀಳುವರು. ಇಲ್ಲಿ ಸೀತೆ ರಾಮನ ಮೇಲಿನ ಅತಿಯಾದ ಪ್ರೀತಿಯಿಂದ ರಾವಣನೆಡೆಗೆ ಕಣ್ಣೆತ್ತಿಯೂ ನೋಡುವುದಿಲ್ಲ. ಸೀತೆಯೆಡೆಗೆ ಸಂಶಯದ ನೋಟ ಬೀರುವ ಕೆಲವು ದುಷ್ಟಮನಸ್ಥಿತಿಯವರಿಗೆ ರಾವಣನ ಈ ಮಾತು ಅರ್ಥವಾಗುವುದೇನೊ!
📗 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ