🌺 ಪ್ರತಿಮಾ ನಾಟಕದ ಒಂದು ಸುಮ 🌺
*तं स्मृत्वा शुल्कदोषं भवतु मम सुतो राजेत्यभिहितं तद्धैर्येणाश्वसन्त्या व्रज सुत! वनमित्यार्योप्यभिहित: । तं दृष्ट्वा बद्धचीरं निधनमसदृशं राजा ननु गत: पात्यन्ते धिक्प्रलापा ननु मयि सदृशा: शेषा: प्रकृतिभि: ।।*
_ದೇವಕುಲಿಕನು ಭರತನಿಗೆ ನಡೆದ ಘಟನೆಗಳನ್ನೆಲ್ಲ ವಿವರಿಸಲು ತೊಡಗಿದಾಗ ಸ್ವಲ್ಪ ಆಲಿಸಿ ಭರತನೇ ಮುಂದುವರೆಸುತ್ತಾನೆ. ಹಾಗಾದರೆ ಹೀಗಾಗಿರಬಹುದು- ನನ್ನ ಮಗ ರಾಜನಾಗಬೇಕೆಂಬ ಹಿಂದಿನ ವಿವಾಹ ಶುಲ್ಕವನ್ನು ಸ್ಮರಿಸಿ ಕೈಕೇಯಿಯು ನನ್ನ ಮಗನಿಗೆ ಪಟ್ಟಕಟ್ಟು ಎನ್ನಲು, ತನ್ನ ಮಾತಿನಂತೆ ಮಗನನ್ನು ದಶರಥ ರಾಜನನ್ನಾಗಿಸಬಹುದೆಂಬ ಧೈರ್ಯದಿಂದ ರಾಮನನ್ನು ಕುರಿತು ಹೀಗೆ ನುಡಿಯಲು " ಮಗನೇ ರಾಮ ನೀನು ಅಡವಿಗೆ ಪೋಗು" , ವನವಾಸಕ್ಕಾಗಿ ನಾರುಬಟ್ಟೆಯುಟ್ಟು ಸಿದ್ಧನಾದ ರಾಮನ ನೋಡಿ ದಶರಥನು ಅಕಾಲಿಕವಾದ ಅಥವಾ ಅವನಿಗೆ ಯೋಗ್ಯವಲ್ಲದ ( ಇಕ್ಷ್ವಾಕು ಕುಲದವರು ವಾನಪ್ರಸ್ಥದಲ್ಲಿ ಯೋಗದ ಮೂಲಕ ಪ್ರಾಣ ಬಿಡುವ ಪದ್ಧತಿ ಇದ್ದುದರಿಂದ) ನಿಧನವನ್ನು ಹೊಂದಿರಬೇಕು. ಇಷ್ಟೆಲ್ಲ ನಡೆದಾಗ ಇವುಗಳಿಗೆಲ್ಲ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಭರತನೇ ಕಾರಣನೆಂದು ತಿಳಿದ ಮಂತ್ರಿಗಳು, ಸೇವಕರು, ರಾಜಪರಿವಾದವರು ಹಾಗೂ ಉಳಿದ ಪುರಜನರು ಧಿಕ್ಕಾರವಿರಲಿ ಇಂತಹ ದುಷ್ಟನಿಗೆ ಎಂಬ ಮಾತನ್ನು ನನ್ನ ಕುರಿತು ಆಡುತ್ತಿರುವರೇನೋ? ತನ್ನ ಅಮ್ಮ ತನ್ನ ಉದ್ದೇವಾಗಿ ಮಾಡಿದ ಅರ್ಥವು ಅನರ್ಥಕ್ಕೆ ಹೇತುವಾದ್ದರಿಂದ ತನಗೇ ಪ್ರಜೆಗಳು ಧಿಕ್ಕಾರ ಕೂಗುವರೆಂಬ ಭಯ ಭರತನದ್ದು. ಅವನ ಪಾತ್ರವೇನಿಲ್ಲದಿದ್ದರೂ ಅಥವಾ ಅವನಿಗೆ ಇದು ಇಷ್ಟವಿಲ್ಲದಿದ್ದರೂ ಅಮ್ಮನ ಕಾರಣದಿಂದ ಅವನೀಗ ಬೈಗುಳ ತಿನ್ನಬೇಕಾಗಿದೆ. ಇಲ್ಲಿ ಘಟನೆಗಳನ್ನು ಜೋಡಿಸುತ್ತಾ ವರ್ಣಿಸುವ ಪರಿ ನಿಜಕ್ಕೂ ಸುಂದರ. ಕವಿ ಹೆಚ್ಚು ಕಷ್ಟಪಡದೇ ಸುಲಭವಾಗಿ ಸಂಬಂಧ ಹೇಳುತ್ತಾ ಹೋಗುತ್ತಾನೆ. ಭರತನ ದು:ಖವನ್ನೂ ಸೂಕ್ಷ್ಮವಾಗಿ ಕೆಲವೇ ಪದಗಳಲ್ಲಿ ಹಿಡಿದಿಟ್ಟಿದ್ದಾನೆ ಕವಿ. ಭರತನಂತೆ ನಮಗೂ ಕೆಲವೊಮ್ಮೆ ತಪ್ಪು ಮಾಡದಿದ್ದರೂ ಅವಮಾನ ಎದುರಿಸುವ ಸಂದರ್ಭಗಳು ಎದುರಾಗುತ್ತವೆ. ಅಂತಹ ಸನ್ನಿವೇಶಗಳಲ್ಲಿ ಧೃತಿಗೆಡದೆ ಮುನ್ನುಗ್ಗಿ ಯಶಸ್ಸು ಸಂಪಾದಿಸಬೇಕು ರಾಮನ ಪಾದುಕೆಯನ್ನು ಭರತ ಸಂಪಾದಿಸಿ ಅಪವಾದವನ್ನು , ಶೋಕವನ್ನು ಕಳೆದುಕೊಂಡ ರೀತಿಯಲ್ಲಿ. ಭರತನ ನಡೆ ನಮಗೊಂದು ಆದರ್ಶ._
📜 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ