🌾📙🌾 *ರಾಮಾಯಣದಲ್ಲಿ ಕಾಣಸಿಗುವ ವಿಶೇಷ ಮಾಹಿತಿಗಳು ಹಾಗೂ ನುಡಿಮುತ್ತುಗಳು* ಭಾಗ-೩
*ಪ್ರಯಾಣಕಾಲೇ ಸ್ವಗೃಹಪ್ರವೇಶೇ ವಿವಾಹಕಾಲೇಪಿ ಚ ದಕ್ಷಿಣಾಂಘ್ರಿಮ್ ಕೃತ್ವಾಗ್ರತ: ಶತ್ರುಪುರಪ್ರವೇಶೇ ವಾಮಂ ನಿದಧ್ಯಾಚ್ಚರಣಂ ನೃಪಾಲ:*
*ಅದ್ವಾರೇಣ ಪ್ರವಿಶೇಚ್ಛತ್ರುವಿನಾಶಾಯ* ಎಂಬ ಮಾತಿನಂತೆ ಹನುಮನು ಲಂಕೆಯನ್ನು ಪ್ರವೇಶಿಸುವಾಗ ಅಪದ್ವಾರದಿಂದ ಪ್ರವೇಶಿಸಿದನು. ಕೃಷ್ಣನೂ ಮಗಧವನ್ನು ಪ್ರವೇಶಿಸುವಾಗ ಹಿಂದಿನ ಬಾಗಿಲಿನಿಂದಲೇ ಪ್ರವೇಶ ನೀಡುತ್ತಾನೆ. ಇದರ ನಂತರ ಹನುಮಂತ ಎಡಗಾಲನ್ನು ಇಟ್ಟ ಎನ್ನುವ ಶ್ಲೋಕದ ವ್ಯಾಖ್ಯಾನದ ಸಂದರ್ಭ ಈ ಮೇಲಿನ ಶ್ಲೋಕ ಬೃಹಸ್ಪತಿ ಸ್ಮೃತಿಯದ್ದೆಂದು ಉಲ್ಲೇಖಿಸಿದ್ದಾರೆ. ದೂರಪ್ರಯಾಣಕ್ಕೆ ಹೊರಡುವಾಗ ಹಾಗೂ ತನ್ನ ಮನೆಯನ್ನು ಪ್ರವೇಶಿಸುವಾಗ , ವಿವಾಹಕಾಲದಲ್ಲಿ ಬಲಗಾಲನ್ನು ಮುಂದಿಡಬೇಕು. ಶತ್ರುಗಳ ಪುರ ಪ್ರವೇಶಿಸುವಾಗ ಎಡಗಾಲನ್ನು ಮೊದಲು ಇಡಬೇಕು. ಹೀಗಿರುವುದರಿಂದ ಈಗಿನ ಸೊಸೆಯಂದಿರು ಎಡಗಾಲಿಟ್ಟು ಬರುವುದು ಶತ್ರುಮನೆಯೆಂದೋ ತಿಳಿದಿಲ್ಲ. ಬೇರೆ ಶ್ಲೋಕಗಳು ಆ ಬಗ್ಗೆ ಇರಬಹುದು. ತಿಳಿದವರು ಹೇಳಿ.
ಮುಂದುವರಿಯುತ್ತಾ ಪದ್ಮ ಸ್ವಸ್ತಿಕ ಮುಂತಾದ ಆಕಾರದ ಭವನಗಳನ್ನು ನೋಡಿದನೆಂದು ಬರುತ್ತದೆ. ಅಲ್ಲಿಯ ವ್ಯಾಖ್ಯಾನದ ಶ್ಲೋಕ-
*ಚತು:ಶಾಲಂ ಚತುರ್ದ್ವಾರಂ ಸರ್ವತೋಭದ್ರಸಂಜ್ಞಕಮ್ ಪಶ್ಚಿಮದ್ವಾರರಹಿತಂ ನಂದ್ಯಾವರ್ತಾಹ್ವಯಂ ತು ತತ್ ಪ್ರಾಗ್ದ್ವಾರರಹಿತಂ ಸ್ವಸ್ತಿಕಾಖ್ಯಂ ಪುತ್ರಧನಪ್ರದಮ್*
ನಾಲ್ಕು ಪ್ರಾಂಗಣವುಳ್ಳ ಮತ್ತು ನಾಲ್ಕು ಬಾಗಿಲುಗಳುಳ್ಳ ಮನೆಗೆ *ಸರ್ವತೋಭದ್ರ*ಎಂಬ ಹೆಸರು. ಪಶ್ಚಿಮದಲ್ಲಿ ಬಾಗಿಲಿಲ್ಲದಿರುವ ಮನೆ *ನಂದ್ಯಾವರ್ತ*. ದಕ್ಷಿಣದಲ್ಲಿ ಬಾಗಿಲಿಲ್ಲದಿರುವುದು *ವರ್ಧಮಾನ*. ಇದು ಧನಹೆಚ್ಚಳಕ್ಕೆ ಕಾರಣ. ಪೂರ್ವದಲ್ಲಿ ಬಾಗಿಲಿಲ್ಲದಿರುವುದು *ಸ್ವಸ್ತಿಕ*. ಇದು ಪುತ್ರಾಭಿವೃದ್ಧಿಯನ್ನೂ, ಧನಾಭಿವೃದ್ಧಿಯನ್ನೂ ತಂದುಕೊಡುತ್ತದೆ. ನಮ್ಮ ಸಾಮಾನ್ಯ ನಂಬಿಕೆ ಪೂರ್ವದ ಬಾಗಿಲು ಶ್ರೇಷ್ಠ. ಆದರೆ ಇಲ್ಲಿ ಹಾಗಿಲ್ಲದಿರುವುದೇ ಶ್ರೇಷ್ಠ ಎಂದಿದ್ದಾರೆ.
ಸ್ತ್ರೀಯರ *ಎದೆ-ಕತ್ತು-ಶಿರ* ಈ ಮೂರು ಸ್ಥಾನಗಳಲ್ಲಿ *ಮಂದ್ರ-ಮಧ್ಯಮ-ತಾರಕ* ಎಂಬ ಮೂರು ಸ್ವರಗಳು ಜನಿಸುತ್ತವೆ.
*ಯಥಾ ವಜ್ರಂ ಹರೇ: ಪಾಣೌ ತಥಾ ವಿಪ್ರಕರೇ ಕುಶಾ:* ರಾವಣನ ಪುರಿಯಲ್ಲಿ ಕೆಲವರು ಆಯುಧದಂತೆ ದರ್ಭೆಗಳ ಮುಷ್ಟಿಯನ್ನು ಕೈಯಲ್ಲಿ ಹಿಡಿದಿದ್ದರು. ಯಾಕೆಂದರೆ ಇಂದ್ರನಿಗೆ ವಜ್ರದಂತೆ ಬ್ರಾಹ್ಮಣರಿಗೆ ದರ್ಭೆ ಶಕ್ತಿದಾಯಕ. ತನ್ನ ಕೆಲಸಕ್ಕೆ ಬಳಸುವುದಕ್ಕೂ ಸಾಧ್ಯ.( ಹೋಮ ಹವನ ಪೂಜೆ ವ್ರತ) ಶತ್ರುಬಂದಾಗ ಅಭಿಮಂತ್ರಿಸಿ ಆಯುಧವಾಗಿ ಬಳಸಲೂ ಸಾಧ್ಯ. ಇದು ಕುಶದ ಪಾವಿತ್ರ್ಯವನ್ನು ಸ್ಪಷ್ಟಪಡಿಸುವುದು.
📙 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ