🌾📗 ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು 📗🌾
ಭಾಗ-೧೧
*ದದ್ಯಾನ್ನ ಪ್ರತಿಗೃಹ್ಣೀಯಾತ್ಸತ್ಯಂ ಬ್ರೂಯಾನ್ನಚಾನೃತಮ್ ಅಪಿ ಜೀವಿತಹೇತೋರ್ವಾ ರಾಮಃ ಸತ್ಯ ಪರಾಕ್ರಮಃ*
ರಾಮನ ಬಗೆಗೆ ಸೀತೆಯ ಮಾತು. ನನ್ನ ಪತಿ ಎಂದಿಗೂ ದಾನಕೊಡುತ್ತಾನೆ ಹೊರತು ಸ್ವೀಕರಿಸುವುದಿಲ್ಲ. ( ಕ್ಷತ್ರಿಯರಿಗೆ ದಾನಸ್ವೀಕಾರ ಶಾಸ್ತ್ರದಲ್ಲೂ ನಿಷಿದ್ಧ. ಅವರಿಗೆ ಮೂರೇ ಕರ್ಮಗಳು) ಎಂದಿಗೂ ಸತ್ಯವನ್ನು ಹೇಳುವವನೇ ಹೊರತು ಪ್ರಾಣ ಹೋದರೂ ಅಥವಾ ಅಂತಹ ಸಂದರ್ಭ ಬಂದರೂ ಸುಳ್ಳುಹೇಳಲಾರ. ರಾಮನ ಧರ್ಮನಿಷ್ಠೆ ಎಷ್ಟು ಎಂಬುದು ಸೀತೆಯ ಮಾತಿನಲ್ಲಿ ಸ್ಪಷ್ಟವಾಗಿ ಹೇಳಲ್ಪಟ್ಟಿದೆ.
*ಏತಿ ಜೀವಂತಮಾನಂದೋ ನರಂ ವರ್ಷಶತಾದಪಿ*
ಹನುಮನು ಜನಕಾತ್ಮಜೆಗೆ ನುಡಿಯುವ ವಚನ. ಸೀತೆ, ಸಾವೊಂದೇ ಸಮಸ್ಯೆಗಳಿಗೆ ಪರಾಹಾರವಲ್ಲ. ಸತ್ತು ಸಾಧಿಸುವುದಾದರೂ ಏನು? ಈಸಬೇಕು ಇದ್ದು ಜೈಸಬೇಕು ಎಂದಿದ್ದಾರೆ ಹಿರಿಯರು. ಬದುಕಿರುವ ಮನುಷ್ಯನಿಗೆ ನೂರು ವರ್ಷ ಕಳೆದ ಮೇಲಾದರೂ ಆನಂದ ಲಭಿಸಿಯೇ ತೀರುವುದು. ದೇಹದಲ್ಲಿ ಜೀವವೊಂದಿದ್ದರೆ ಇಂದಲ್ಲ ನಾಳೆ ಆನಂದದ ಕ್ಷಣಗಳನ್ನು ಕಾಣಬಹುದು. ಆದರೆ ಜೀವವೇ ಇಲ್ಲದಿದ್ದರೆ ಅದು ಸಾಧ್ಯವೇ? ಹಾಗಾಗಿ ನೂರು ವರ್ಷವಾದರೂ ದೇವನ ಅನುಗ್ರಹಕ್ಕಾಗಿ ಕಾಯಬೇಕೇ ಹೊರತು ಕೊರಗಬಾರದು.
*ಐಶ್ವರ್ಯೇ ವಾ ಸುವಿಸ್ತೀರ್ಣೇ ವ್ಯಸನೇ ವಾ ಸುದಾರುಣೇ ರಜ್ವೇವ ಪುರುಷಂ ಬದ್ಧ್ವಾ ಕೃತಾಂತಃ ಪರಿಕರ್ಷತಿ*
ಹನುಮನ ಮಾತು. ಮನುಷ್ಯನು ಅಪಾರವಾದ ಐಶ್ವರ್ಯದಲ್ಲಿ ಮುಳುಗಿಹೋಗಿರಲಿ, ಅತಿದಾರುಣವಾದ ವ್ಯಸನದಲ್ಲಿಯೇ ಸಿಲುಕಿರಲಿ, ದೈವವು ಅಥವಾ ಕಾಲವು ಮನುಷ್ಯನನ್ನು ಪಶುವನ್ನು ಹಗ್ಗದಿಂದ ಬಂಧಿಸಿ ಎಳೆದಾಡುವಂತೆ ಕಷ್ಟಕೊಡುತ್ತದೆ. ದೈವಕ್ಕೆ ಇವನು ಬಡವ ಇವನು ಬಲ್ಲಿದ ಇವನು ವ್ಯಸನಿ ಇವನು ದುಃಖಿತ ಇವನು ಆ ಜಾತಿ ಇವನು ಈ ಜಾತಿ ಇತ್ಯಾದಿ ಯಾವ ವ್ಯತ್ಯಾಸವೂ ಇಲ್ಲದಂತೆ ಕಾಲಪಾಶದಿಂದ ಬಿಗಿದು ಸೆಳೆದಾಡುತ್ತಿರುತ್ತದೆ. ನೀನು ಧರ್ಮಾತ್ಮಳೂ ಪತಿವ್ರತೆಯೂ ನ್ಯಾಯತತ್ಪರಳೂ ಆಗಿದ್ದರೂ ದೈವವು ನಿನಗೆ ಸಹಕಾರಿ ಆಗಲಿಲ್ಲ ಎಂಬ ಭಾವದಿಂದ ಹೇಳುವುದು. ಸೀತೆಯಂತಹ ಮಾತೆಗೆ ತೊಂದರೆ ಬಂದಿರಬೇಕಾದರೆ ನಾವು ನೀವು ವಿಧಿಗೆ ಯಾವ ಲೆಕ್ಕ!
📗 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ