ಮೇಘದೂತ

🌹 ಮೇಘದೂತದ ಒಂದು ಬಿಂದು🌹

*एभिस्साधो हृदयनिहितैर्लक्षणैर्लक्षयेथा: द्वारोपान्ते लिखितवपुषौ शङ्खपद्मौ च दृष्ट्वा | क्षामच्छायं भवनमधुना मद्वियोगेन नूनं सूर्यापाये न खलु कमलं पुष्यति स्वामभिख्याम् ||*

_ಮೇಘನೇ, ನೀನು ಆ ಅಲಕೆಯ ಬೀದಿಗಳಲ್ಲಿ ಸಂಚರಿಸುವಾಗ ಸೂಕ್ಷ್ಮವಾಗೊಮ್ಮೆ ನೋಡು. ಹಿಂದೆ ನಾನು ಹೇಳಿದ ದುಃಖದ ಲಕ್ಷಣಗಳು ಯಾವ ಮನೆಯಲ್ಲಿ ಕಂಡುಬರುವವೋ ಅದೇ ನನ್ನ ಮನೆಯೆಂದು ಅರಿ. ನನ್ನ ಅಗಲುವಿಕೆಯಿಂದ ಬೇಸರಗೊಂಡ ಆ ‌ನನ್ನ ಮಡದಿ ಸಂತೋಷದಾಯಕ ವಸ್ತುಗಳನ್ನೊಂದೂ ಉಪಯೋಗಿಸಲಾರಳು. ತೋರಣ ಎಂದೋ ಬಾಡಿಹೋಗಿರುತ್ತದೆ. ಆ ನಮ್ಮ ಮನೆಬಾಗಿಲಿನ ಇಕ್ಕೆಲಗಳಲ್ಲಿ ಬರೆದ ಶಂಖಪದ್ಮಗಳ ವರ್ಣ ಮಾಸಿಹೋಗಿರುತ್ತದೆ. ಅದನ್ನೂ ಗುರುತಿಸು. ಹೀಗೆ ನನ್ನ ಅಭಾವದಿಂದ ಆ ಮನೆ ತನ್ನ ಸಹಜ ಸೊಗಸನ್ನು ಕಳೆದು ಬಾಡಿಹೋದ ಬಳ್ಳಿಯಂತೆ ಕಾಣುವುದು.  ಅದು ಹೇಗೆಂದರೆ ಸೂರ್ಯನು ಬಂದಾಗ ಅರಳಿ ಆಕಾಶದೆಡೆ ಮುಖ ಮಾಡಿ ನಸುನಗುವ ಕಮಲವು ಸೂರ್ಯಾಸ್ತವಾಗುತ್ತಿದ್ದಂತೆ ಪ್ರಿಯನ ವಿರಹವನ್ನು ನೆನೆದು ಬಾಡಿಹೋಗುತ್ತದೆ. ತನ್ನ ನಿಸರ್ಗ ಸಹಜ ಹೊಳಪನ್ನು ಕಳೆದುಕೊಂಡು ನಿಸ್ತೇಜವಾಗಿ ಮುದುಡಿಹೋಗುತ್ತದೆ. ನಾನಿಲ್ಲದ ಆ ಮನೆಯೂ ಕಳಾಹೀನವಾಗಿ ಎಂದಿಗೆ ಒಡೆಯನ ಆಗಮನವಾಗುವುದೋ ಎಂಬ ಪ್ರತೀಕ್ಷೆಯಲ್ಲಿ ಅಸ್ತಿತ್ವ ಉಳಿಸಿಕೊಂಡಿರುತ್ತದೆ. ಗೃಹಿಣೀ ಗೃಹಮುಚ್ಯತೇ ಎಂಬಂತೆ ಇಲ್ಲಿ ಕವಿ ಗೃಹವನ್ನು ಗೃಹಿಣಿಯ ರೀತಿ ಚಿತ್ರಿಸಿದ್ದಾನೆ._

📜 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩