ಪ್ರತಿಮಾ ನಾಟಕ

🌺 ಪ್ರತಿಮಾ ನಾಟಕದ ಒಂದು ಸುಮ 🌺

*अहो बलमहो वीर्यमहो सत्वमहो जव: | राम इत्यक्षरैरल्पै: स्थाने व्याप्तमिदं जगत् ||*

_ರಾವಣನ ಮಾತು. ಬ್ರಾಹ್ಮಣವೇಷದಲ್ಲಿ ಶ್ರಾದ್ಧಪೂರ್ವದಲ್ಲಿ ಮನೆಗೆ ಬಂದ ಅವನ ಮಾತಿನಂತೆ ಶ್ರಾದ್ಧಕ್ಕಾಗಿ ಹಿಮಗಿರಿಯ ಸುವರ್ಣವರ್ಣದ ಜಿಂಕೆಯನ್ನು ತರಲೆಂದು ರಾಮನು ಹೊರಡುವನು. ಲಕ್ಷ್ಮಣ ಅನ್ಯ ಕಾರ್ಯ ನಿಮಿತ್ತದಿ ಹೊರಹೋಗಿರುತ್ತಾನೆ. ಸೀತೆಗೆ ಸ್ವಲ್ಪ ಕಾಲ ಬ್ರಾಹ್ಮಣನನ್ನು ಆದರಿಸು ಎಂದು ರಾಮ ಹೊರಡುತ್ತಾನೆ. ರಾಮನ ಹೊರಟ ವೇಗ, ಬಾಣ ತೆಗೆದ ಪರಿ ನೋಡಿ ವಿಸ್ಮಿತನಾದ ರಾವಣ ಹೇಳಿದ ಮಾತು. ಈ ಶ್ಲೋಕವೇ ಸ್ವಲ್ಪ ಬದಲಾವಣೆಗಳಿಂದ ರಾಮಾಯಣದಲ್ಲಿ ಸುಂದರಕಾಂಡದಲ್ಲಿದೆ. ಅಲ್ಲಿ ಹನುಮನು ರಾವಣನ ಬಗೆಗೆ ಆಡುವ ಮಾತು. ಇಲ್ಲಿ ಕವಿ ಅದನ್ನೇ ಬದಲಾವಣೆ ಮಾಡಿ ರಾಮನ ಬಗ್ಗೆ ಹೇಳಿದ್ದಾನೆ. ಅಬ್ಬಾ, ಎಂತಹ ಶಾರೀರಿಕ ಬಲ, ಸಾಮಾನ್ಯರು ಕಲ್ಪಿಸಿಕೊಳ್ಳಲು ಅಸಾಧ್ಯವಾದ ಬಲಿಷ್ಠ ಬಾಹುಗಳು. ಇನ್ನು ಆಂತರಿಕವಾದ ಆತ್ಮವಿಶ್ವಾಸ ಅಥವಾ  ಉತ್ಸಾಹ, ಅದೂ ಇವನಲ್ಲಿ ಹೆಚ್ಚಿದೆ. ಇಲ್ಲಿ ವೀರ್ಯಶಬ್ದವು ಆಂತರಿಕ ಬಲ ಎಂಬ ಅರ್ಥದಲ್ಲಿದೆ. ಎಂತಹ ಧೈರ್ಯ, ಎಲ್ಲೇ ಇರಲಿ, ಎಷ್ಟೇ ಕಷ್ಟಬರಲಿ ತರಲೆಂದು ಹೊರಟ ಇವನ ಧೈರ್ಯ ಮಿಗಿಲಾದುದು. ಬಾಣಗಳನ್ನು ಬಿಡುವಲ್ಲಿನ ವೇಗ ಸರಿಸಾಟಿ ಇಲ್ಲದ್ದು. ಧನುಸ್ಸಿನ ಹಗ್ಗವನ್ನು ಎಳೆದು ಪುಂಖಾನುಪುಂಖವಾಗಿ ಬಾಣಗಳನ್ನು ಜೋಡಿಸಿ ಬಿಡುವ ಪರಿ ನಿಜಕ್ಕೂ ಅಪ್ರತಿಮವಾದುದು. ಈ ನಾಲ್ಕನ್ನೂ ಹೊಂದಿರುವ ರಾಮ ಎಂಬ ಎರಡೇ ಅಕ್ಷರಗಳಿಂದ ಈ ಜಗವೆಲ್ಲ ವ್ಯಾಪಿಸಿದೆ. ರಾಮ‌ ಕೇವಲ ದಶರಥಪುತ್ರನೆಂದು ಪ್ರಸಿದ್ಧನಾಗಿದ್ದಲ್ಲ. ದಶರಥನನ್ನೂ ಮೀರಿದ ಲೋಕೋತ್ತರಗುಣಗಳ ಸಂಪಾದನೆಯು ಇವನ ಕೀರ್ತಿಗೆ ಕಲಶವಿಟ್ಟಂತಿದೆ. ರಾಮ ಎಂಬ ಎರಡಕ್ಷರದ ಉಚ್ಚಾರಣೆಯು ನಮಗೆ ಈ ಎಲ್ಲವನ್ನೂ ದಯಪಾಲಿಸುತ್ತದೆ. ಇವನ ಕೀರ್ತಿ ಸ್ವಭಾವಸಹಜವಾದುದು._

📜 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩