🌺 ಪ್ರತಿಮಾನಾಟಕದ ಒಂದು ಸುಮ 🌺

*त चिन्तयामि नृपतिं सुरलोकयातं येनायमात्मजविशिष्टगुणो न दृष्ट: | ईदृग्विधं गुणनिधिं समवाप्य लोके धिक् भो विधेर्यदि बलं पुरुषोत्तमेषु ||*

_ರಾಮನು ಭರತನ ಬಗೆಗೆ ಹರುಷದಿಂದಾಡುವ ನುಡಿ. ಈ ಭರತನ ಗುಣಗಳನ್ನು ನೋಡುತ್ತಿದ್ದರೆ ನನ್ನ ತಂದೆಯ ನೆನಪೇ ಕಾಡುತ್ತಿದೆ. ಅಪ್ಪನ ಒಳ್ಳೆಯ ಗುಣಗಳನ್ನೆಲ್ಲ ಇವನು ನಮಗೂ ಕೊಡದೆ ಇಟ್ಟುಕೊಂಡಿರುವನು. ತನ್ನ ಮಕ್ಕಳಲ್ಲಿ ಅತ್ಯಂತ ವಿಶಿಷ್ಟಗುಣಶಾಲಿ ಈ ಭರತ ದಶರಥನಿಗೆ. ಇವನ ಮನವನ್ನು ಸುಲಭದಲ್ಲಿ ಅರಿಯಲು ನಮ್ಮೆಲ್ಲರಿಗಿಂತ ತುಂಬಾ ಕಷ್ಟ. ಅಂತಹ ಗುಣಶೀಲತೆ ನಮ್ಮ ಮೂವರನ್ನೂ ಮೀರಿಸಿದೆ. ಆದರೆ ವಿಧಿಯ ನಿರ್ಣಯವನ್ನು ನಮ್ಮಿಂದ ತಪ್ಪಿಸಲು ಸಾಧ್ಯವೇ? ಎಂದಿಗೂ ಸಾಧ್ಯವಿಲ್ಲ. ಇಂತಹ ಪುರುಷೋತ್ತಮನಾದ ಮಗನನ್ನು ಗುರುತಿಸದೇ ನನ್ನ ತಂದೆ ವ್ಯರ್ಥವಾಗಿ ದುಃಖಿಸಿ ಕಾಲವನ್ನು ಸೇರಿದರಲ್ಲ. ನನಗಿಂತಲೂ ಗುಣಿಯಾದ ಭರತನಿಗೆ ರಾಜ್ಯ ಕೊಟ್ಟರೇನು ನನಗೆ ಕೊಟ್ಟರೇನು? ಭರತನ ಆಳ್ವಿಕೆಯೂ ಸಮರ್ಥವಾಗಿರುತ್ತಿತ್ತು. ಅಂತಹುದರಲ್ಲಿ ನನ್ನಪ್ಪ ನನಗೆ ಪಟ್ಟ ಕಟ್ಟಲು ನಿರ್ಧರಿಸಿ ತಾನು ಬಯಸಿದ್ದು ಆಗಲಿಲ್ಲವೆಂದು ಕೊರಗಿ ಭರತನ ಗುಣಗಳನ್ನು ಗ್ರಹಿಸದೇ ದುಃಖಿಸಿ ಅಸುವನ್ನೇ ಕೊನೆಗೊಳಿಸಿದನಲ್ಲ. ಇದನ್ನೇ ವಿಧಿ ಎನ್ನುವುದು. ಇಂತಹ ಯೋಗ್ಯರ ಯೋಗ್ಯತೆಗೆ ಯೋಗ ಸಿಗದಂತೆ ಮಾಡಿದ ಆ ಅಯೋಗ್ಯ ವಿಧಿಗೆ ಧಿಕ್ಕಾರವಿರಲಿ. ಇಂತಹ ಗುಣನಿಧಿಯನ್ನು ಪಡೆದೂ ಅಪ್ಪನ ಸಾವು ಹೀಗೆ ನಡೆಯಿತಲ್ಲ. ನಮಗೂ ರಾಮಾಯಣದ ಕೆಲವು ಸಂದರ್ಭಗಳಲ್ಲಿ ಭರತನ ಒಳ್ಳೆಯ ಗುಣಗಳು ರಾಮನ ಜೊತೆ ಪೈಪೋಟಿಗಿಳಿದಂತೆ ಕಾಣುತ್ತವೆ. ರಾಮಾಯಣದ ಇನ್ನೊಬ್ಬ ನಾಯಕನು ಅವನೂ ಹೌದು. ಅದನ್ನೇ ಕವಿ ಇಲ್ಲಿ ವ್ಯಕ್ತಪಡಿಸಿದ್ದಾನೆ._

📜 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩