🌺 ಪ್ರತಿಮಾನಾಟಕದ ಒಂದು ಸುಮ 🌺

*अयि सुगुण ममापि त्वत्प्रसूति: प्रसूति: स च खलु निभृतधीमांस्ते पिता मे पिता च | सुपुरुष पुरुषाणां मातृदोषो न दोषो वरद भरतमार्तं पश्य तावद्यथावत् ||*

 _ರಾಮ ಬರಲು ಒಪ್ಪಲಿಲ್ಲ. ಭರತ ಮತ್ತಷ್ಟು ಪ್ರಯತ್ನಿಸುತ್ತಿರುವನು. ಇದು ಭರತನ ನುಡಿ. ಹೇ ಸದ್ಗುಣಪೂರ್ಣನೇ, ನೀನು ಯಾವ ಶ್ರೇಷ್ಠವಾದ ಇಕ್ಷ್ವಾಕು ವಂಶದಲ್ಲಿ ಜನಿಸಿದೆಯೋ ಅದೇ ವಂಶದಲ್ಲಿ ನಾನೂ ಜನಿಸಿದೆ. ನಿನಗೆ ಹೇಗೆ ರಾಜ್ಯ ಪಡೆವ ಇಚ್ಛೆಯಿಲ್ಲವೋ ನನಗೂ ರಾಜ್ಯದಲ್ಲಿ ನೀನಿಲ್ಲದೆ ಆಸಕ್ತಿ ಇಲ್ಲ. ಇನ್ನು ಧೀಮಂತನಾದ ದೃಢ ನಿರ್ಧಾರ ತೆಗೆದುಕೊಳ್ಳುತ್ತಿದ್ದ ನಿನ್ನ ತಂದೆ ದಶರಥ ನನಗೂ ತಂದೆಯಷ್ಟೆ! ಆ ಧೈರ್ಯ ಸ್ಥೈರ್ಯಗಳು ನನಗೂ ನಿಮ್ಮ ತಂದೆಯಿಂದ ಬಳುವಳಿ ಬಂದಿವೆ. ಹಾಗಾಗಿ ರಾಜ್ಯ ತಪ್ಪಿತೆಂದು ನಿನ್ನಂತೆ ನಾನೂ ದುಃಖಿಸುತ್ತಿಲ್ಲ. ಎಲೈ ಸಜ್ಜನನೇ, ಪುರುಷರಿಗೆ ತಾಯಿ ಮಾಡಿದ ತಪ್ಪು ತಪ್ಪಲ್ಲವೆಂದಾದಲ್ಲಿ ನನಗೆ ಮಾತ್ರ ಯಾಕೆ ರಾಜ್ಯವಾಳುವ ಶಿಕ್ಷೆ.? ತಾಯಿಯ ತಪ್ಪನ್ನು ಕ್ಷಮಿಸಿ ರಾಜ್ಯವನ್ನು ಮುನ್ನಡೆಸು. ನನ್ನ ತಾಯಿಯ ತಪ್ಪಿಗಾಗಿ ನನ್ನ ಮೇಲೆಕೆ ಕೋಪ ನಿನಗೆ! ಕೇಳಿದ್ದನ್ನು ಕೊಡುವ ವರದನೇ, ಈ ಭರತನಿಗೂ ಒಂದು ವರ ನೀಡು. ದುಃಖಿಸುತ್ತಿರುವ ನನ್ನನ್ನು ನೋಡೊಮ್ಮೆ. ನಾನು ನಿನ್ನ ಕರುಣೆಗೆ ಪಾತ್ರನಾದವನು‌. ಭರತನ ಈ ಮಾತು ಹೃದಯಸ್ಪರ್ಶಿಯಾಗಿದೆ. ಮೂರು ವಿಶೇಷಣಗಳಿಂದ ರಾಮನನ್ನು ಸ್ತುತಿಸಿದ್ದಾನೆ. ವರದ , ಸುಗುಣ, ಸುಪುರುಷ ಎಂದು. ಅಣ್ಣತಮ್ಮಂದಿರಲ್ಲಿ  ಎಂತಹ ಮಧರ ಬಾಂಧವ್ಯವಿತ್ತೆಂಬ ಸಂಗತಿ ಕವಿಯ ಮಾತಿನಲ್ಲಿ ಮೂಡಿಬಂದಿದೆ._

📜 ಸಂಗ್ರಹ ✍ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩