ರಾಮಾಯಣ ೩೪
📙🌾 ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು 🌾📙
ಭಾಗ-34
*ವಾಹಿ ವಾತ ಯತಃ ಕಾಂತಾ ತಾಂ ಸ್ಪೃಷ್ಟಾ ಮಾಮಪಿ ಸ್ಪೃಶ ತ್ವಯಿ ಮೇ ಗಾತ್ರಸಂಸ್ಪರ್ಶಶ್ಚಂದ್ರೇ ದೃಷ್ಟಿಸಮಾಗಮಃ*
_ರಾಮನ ಅನುರಾಗದ ನುಡಿಗಳು. ಹೇ ವಾಯುವೇ, ನನ್ನ ಪ್ರೇಯಸಿ ಸೀತೆಯಿರುವಲ್ಲಿ ನೀನು ಬೀಸಿ ಅವಳನ್ನು ಮೆಲ್ಲನೆ ಸ್ಪರ್ಶಿಸಿ ಅನಂತರ ಅವಳ ಶರೀರಸುಗಂಧದೊಡನೆ ನನ್ನನ್ನು ಸ್ಪರ್ಶಿಸು. ಹಾಗೆ ನೀನು ಬೀಸಿ ಬಂದು ನನ್ನ ಅಂಗಾಗಳಲ್ಲಿ ಸುಳಿದಾಡಿದೆಯೆಂದರೆ ಆ ಸೀತೆಯ ಸ್ಪರ್ಶಸುಖ ನನಗೂ ದೊರೆತಂತಾಗುತ್ತದೆ. ಚಂದ್ರನ ಮೂಲಕ ನಮ್ಮೀರ್ವರ ದೃಷ್ಟಿಗಳು ಒಂದಾಗಲಿ. ಸೀತೆ ಅಶೋಕವನದಲ್ಲಿ ಚಂದ್ರನನ್ನು ನೋಡುವ ಸಮಯದಿ ನಾನು ಇಲ್ಲಿದ್ದುಕೊಂಡು ಚಂದ್ರನನ್ನು ವೀಕ್ಷಿಸುವೆನು. ಚಂದ್ರನೆಂಬ ಮಾಧ್ಯಮದ ಮೂಲಕ ನಮ್ಮ ದೃಷ್ಟಿಸಮಾಗಮವಾಗಲಿ. ಇಬ್ಬರ ದೃಷ್ಟಿ ಒಂದೇ ವಸ್ತುವಿನ ಮೇಲೆ ಬಿದ್ದು ಉಂಟಾದ ಸಮಾಗಮ. ಅತ್ಯಂತ ಪ್ರೀತಿಯಿಂದ ಕೂಡಿದ ರಾಮನ ಮಾತುಗಳಿವು. ಪತ್ನಿಯ ವಿಷಯದಲ್ಲಿ ತೋರಬೇಕಾದ ಅನುರಾಗವನ್ನೂ ರಾಮ ತೋರಿಸಿಕೊಟ್ಟಿದ್ದಾನೆ._
*ತನ್ಮೇ ದಹತಿ ಗಾತ್ರಾಣಿ ವಿಷಂ ಪೀತಮಿವಾಶಯೇ ಹಾ ನಾಥೇತಿ ಪ್ರಿಯಾ ಸಾ ಮಾಂ ಹ್ರಿಯಮಾಣಾ ಯದಬ್ರವೀತ್*
_ರಾಮನ ಮತ್ತೊಂದು ಶೋಕದ ಮಾತು. ಆ ದುಷ್ಟ ರಾವಣನು ಸೆಳೆದು ಕರೆದುಕೊಂಡು ಹೋಗುವಾಗ ಆ ನನ್ನ ಮಡದಿ *ಹಾ ನಾಥ* ಎಂದು ಕೂಗಿದಳು. ಅದಿನ್ನೂ ನನ್ನ ಕಿವಿಗಳಲ್ಲಿ ಅನುರಣಿಸುತ್ತಿದೆ. ಆ ಒಂದು ಮಾತು ಇಂದಿಗೂ ನನ್ನನ್ನು ದಹಿಸುತ್ತಿದೆ. ಕುಡಿದ ನಂತರ ಹೊಟ್ಟೆಗೆ ಸೇರಿದ ವಿಷವು ಅಂಗಾಂಗಗಳನ್ನು ಸುಟ್ಟು ಹಾಕುವಂತೆ ಆ ಸೀತೆಯ ಮಾತು ನನ್ನನ್ನು ಸುಡುತ್ತಲೇ ಇದೆ._
📙 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ