📙🌾 ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು 🌾📙
ಭಾಗ-೨೫
_ಹನುಮನು ಮತ್ತೂ ಅಲ್ಲಿ ನಡೆದ ಘಟನೆ ವಿವರಿಸುತ್ತಾ ಹೀಗೆ ಹೇಳುವಳು. ಸೀತೆ ಸಹಜವಾಗಿಯೇ ಕೃಶಾಂಗಿಯು. ಈಗ ರಾಮ ವಿಯೋಗದುಃಖದಿಂದ ಮತ್ತಷ್ಟು ಕೃಶಳಾಗಿದ್ದಾಳೆ. ಅದು ಹೇಗೆಂದರೆ ಅನಧ್ಯಯನದ ದಿನ ಅಧ್ಯಯನ ಮಾಡುವವರ ವಿದ್ಯೆ ನಶಿಸಿಹೋಗುವಂತೆ ನಶಿಸುತ್ತಿದ್ದಾಳೆ ಎನ್ನುತ್ತಾನೆ._
*ವೇದಾಧ್ಯಯನದ ನಿಯಮವಿದು. ಅಮಾವಾಸ್ಯಾ ಗುರುಂ ಹಂತಿ ಶಿಷ್ಯಂ ಹಂತಿ ಚತುರ್ದಶೀ ಉಭೌ ಚ ಅಷ್ಟಮೀ ಹಂತಿ ಪ್ರತಿಪತ್ಪಾಠನಾಶಿನೀ*
_ಅಮಾವಾಸ್ಯೆಯ ದಿನ ಅಧ್ಯಯನ ಮಾಡಿದರೆ ಪಾಠಮಾಡಿದ ಗುರುವಿಗೆ ಕೆಡುಕು. ಚತುರ್ದಶಿಯ ಅಧ್ಯಯನವು ಶಿಷ್ಯನ ಅವನತಿಗೆ ಕಾರಣ. ಅಷ್ಟಮಿಯ ಅಧ್ಯಯನವು ಇಬ್ಬರ ನಷ್ಟಕ್ಕೂ ಹೇತು. ಪಾಡ್ಯ ಅಥವಾ ಪ್ರತಿಪತ್ತಿನ ದಿನ ಅಧ್ಯಯನ ಮಾಡಿದರೆ ಕಲಿತ ವಿದ್ಯೆ ಮರೆತುಹೋಗುತ್ತದೆ. ಹಾಗಾಗಿ ಇಂತಹ ದಿನಗಳಲ್ಲಿ ವೇದಾಧ್ಯಯನ ಸಲ್ಲದು._
*ವಿಫಲಂ ಕರ್ಮ ಚ ಕೃತಂ ಭವೇತ್ತುಷ್ಟಿರ್ನ ತಸ್ಯ ಚ ವೃಥಾ ಚ ದರ್ಶಿತಂ ವೀರ್ಯಂ ಭವೇದ್ವಾನರಪುಂಗವಾಃ*
_ಹನುಮನ ಮಾತನ್ನೆಲ್ಲ ಆಲಿಸಿದ ಅಂಗದನು ತಾವು ಒಂದುಗೂಡಿ ಈಗಲೇ ಲಂಕೆಗೆ ತೆರಳಿ ರಾವಣನನ್ನು ಜಯಿಸಿ ಸೀತೆಯನ್ನು ಕರೆತರೋಣವೆಂದು ಹೇಳುವನು. ಆಗ ಜಾಂಬವಂತನು ಈ ಮಾತನ್ನು ನುಡಿಯುವನು. ನಮಗೆ ಸೀತೆಯನ್ನು ಹುಡುಕಲಷ್ಟೇ ಆಜ್ಞೆ ಆಗಿರುವುದು. ಕರೆತರುವುದಕ್ಕಲ್ಲ. ಮೇಲಾಗಿ ರಾಕ್ಷಸರನ್ನು ಜಯಿಸಿ ನಾವೇ ಸೀತೆಯನ್ನು ಕರೆತರುವುದು ರಾಮನಿಗೆ ರುಚಿಸುವುದಿಲ್ಲ, ಏಕೆಂದರೆ ನಮ್ಮೆದುರೇ ಅವನು ಶತ್ರುವನ್ನು ಜಯಿಸಿ ಸೀತೆಯನ್ನು ಕರೆತರುವುದಾಗಿ ಪ್ರತಿಜ್ಞೆ ಮಾಡಿದ್ದಾನೆ. ಹಾಗಾಗಿ ಅವಸರಿಸದಿರಿ. ನೀನು ಹೇಳಿದಂತೆ ನಾವು ಮಾಡಿದಲ್ಲಿ ಮಾಡಿದ ಕಾರ್ಯವೂ ವಿಫಲವಾದೀತು. ಸರಿಯಾದ ಯೋಜನೆ ಅಥವಾ ನಾಯಕತ್ವವಿಲ್ಲದೆ. ಅದು ರಾಮನ ಅಸಮಾಧಾನಕ್ಕೂ ಕಾರಣವಾಗಬಹುದು. ನಾವು ಪರಾಕ್ರಮ ತೋರಿದ್ದೂ ವ್ಯರ್ಥವಾಗಬಹುದು. ಹಾಗಾಗಿ ರಾಮನನ್ನು ಕೇಳಿ ಪ್ರವೃತ್ತಿ ಮಾಡೋಣ. ನಾವೂ ಅಂಗದನಂತೆ ಕೆಲವೊಮ್ಮೆ ನಮ್ಮ ಮೂಗಿನ ನೇರ ಅಲೋಚಿಸಿ ಕಾರ್ಯದಲ್ಲಿ ತೊಡಗುತ್ತೇವೆ. ಸ್ಪಷ್ಟ ಗೊತ್ತು ಗುರಿ ಇಲ್ಲದೆ ವಿಫಲವಾದಾಗ ಹಿರಿಯರ ಮೊರೆ ಹೊಕ್ಕುತ್ತೇವೆ. ಹಾಗಾಗಿ ಸ್ವಂತ ಬುದ್ಧಿ ಎಷ್ಟಿದ್ದರೂ ಗುರು- ಹಿರಿಯರ ಮಾರ್ಗದರ್ಶನದಲ್ಲಿ ನಡೆಯುವುದು ಶ್ರೇಯಸ್ಕರ._
*ಅವ್ಯಗ್ರಮನಸೋ ಯೂಯಂ ಮಧು ಸೇವತ ವಾನರಾಃ ಅಹಮಾವಾರಯಿಷ್ಯಾಮಿ ಯುಷ್ಮಾಕಂ ಪರಿಪಂಥಿನಃ*
_ಹನುಮನ ಹೃದಯ ವೈಶಾಲ್ಯ ಇಲ್ಲಿ ಕಾಣಬಹುದು. ಕೆಲಸ ಸಾಧಿಸಿದ್ದು ತಾನಾದರೂ ಸುಖ ಅನುಭವಿಸುವುದು ತಾನೊಬ್ಬನೇ ಆಗಬಾರದು ಎಂಬ ವಿಶಾಲ ಭಾವನೆ. ಕಪಿಗಳಿಗೆ ಹೀಗೆ ಹೇಳುತ್ತಿರುವನು. ವಾನರವೀರರೇ, ನೀವು ಯಸವ ಚಿಂತೆಯೂ ಮಾಡದೇ ಏಕಾಗ್ರಮನದಿಂದ ಮಧುವನ್ನು ಪಾನ ಮಾಡಿರಿ. ನಿಮ್ಮನ್ನು ತಡೆಯಲು ಬರುವ ಶತ್ರುಗಳನ್ನು ನಾನು ನಿವಾರಿಸುವೆನು. ತಾನು ಕಷ್ಟಪಟ್ಟಿರುವೆನೆಂದು ತಾನೇ ಮೊದಲು ಭಕ್ಷಿಸುವೆನೆಂದು ಹೇಳದೆ ಉಳಿದವರು ಈ ಸಂತೋಷವನ್ನು ನನಗಿಂತಲೂ ಹೆಚ್ಚು ಅನುಭವಿಸಲೆಂಬ ಉದಾರತೆ. ನಾವು ಯಾವುದಾದರೂ ಪರಿಶ್ರಮದ ಕಾರ್ಯ ಮಾಡಿದಾಗ ಇದೇ ಭಾವನೆ ಎಂದಾದರೂ ತೋರುತ್ತೇವೆಯೇ? ಹನುಮನು ನಾಯಕನಾಗಿ ತನ್ನ ಸಹಚರರ ಒಳಿತನ್ನು ಬಯಸುವಂತೆ ನಾವೂ ಜೊತೆಗಾರರ ಸಂತೋಷ ಮೊದಲು ಅನುಭವಿಸಿ ನಂತರ ನಮ್ಮ ಸಂತೋಷ ಪಡೆಯೋಣ._
📙 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ