ಪ್ರತಿಮಾನಾಟಕ

🌺 ಪ್ರತಿಮಾನಾಟಕದ ಒಂದು ಸುಮ 🌺

*सुचिरेणापि कालेन यश: किञ्चिन्मयार्जितम् | अचिरेणैव कालेन भरतेनाद्य सूचितम् ||*

_ರಾಮನ ಮಾತು. ಪಾದಗಳಿಂದ ಸೇವಿಸಲ್ಪಟ್ಟ ಪಾದುಕೆಗಳನ್ನು ನೀಡು, ನೀನು ಬರುವ ತನಕ ನಿನ್ನ ಕಾಲುಗಳೆಂದೇ ಭಾವಿಸಿ ಇವುಗಳಿಗೆ ವಿಧೇಯನಾಗಿ ಆಡಳಿತ  ನಿರ್ವಹಿಸುವೆನು ಎಂದು ಭರತ ಆಡಿದಾಗ ರಾಮನ ನುಡಿ. ತುಂಬಾ ದಿನಗಳಿಂದ ನಾನು ಸಂಪಾದಿಸಿದ ಕೀರ್ತಿಯೆಂಬ ಸಂಪತ್ತು ಭರತನಿಂದ ಅಲ್ಪ ಸಮಯದಲ್ಲೇ ಹೊಂದಲ್ಪಟ್ಟಿದೆ. ತಂದೆಯ ಆಜ್ಞೆಯಂತೆ ಕಾಡಿಗೆ ತೆರಳಿ ಪಿತೃವಾಕ್ಯ ಪರಿಪಾಲಕನೆಂಬ ಕೀರ್ತಿಯನ್ನು ಬಹುದಿನಗಳ ಶ್ರಮದಿಂದ ಕಾಡಿನಲ್ಲಿ ಕಷ್ಟಪಡುತ್ತಾ ಸಂಪಾದಿಸಿದ್ದೆ. ಆದರೆ ಈ ಭರತ ಈಗ ಬಂದನಷ್ಟೇ. ತಾನು ಹೋಗುವುದರೊಳಗೆ  ಅಣ್ಣನನ್ನೇ ಒಪ್ಪಿಸಿ ಅವನ ಪಾದುಕೆ ಸ್ವೀಕರಿಸಿ ಅದರಡಿಯಲ್ಲಿ ಅಂದರೆ ಅಣ್ಣನನ್ನು ಮೀರದೆ ರಾಜ್ಯವಾಳುತ್ತೇನೆಂದು ತಂದೆಗೆ ಸಮಾನನಾದ ನನ್ನನ್ನು ಗೌರವಿಸಿ ನನಗಿಂತಲೂ ಹೆಚ್ಚಿನ ಕೀರ್ತಿಯನ್ನು ಸಂಪಾದಿಸಿದ್ದಾನೆ. ದಾಯಾದಿಗಳಲ್ಲಿ ದಾಯ ಬಯಸದ ಆದಿಪುರುಷನಿವನು. ಇವನ ಕೀರ್ತಿ ನಿಜಕ್ಕೂ ಲೋಕೋತ್ತರವಾದುದು. ರಾಮ ಭರತನ ಉದಾರತೆಯನ್ನು ವಿಷಯವನ್ನು ಕಂಡು ಮೂಕವಿಸ್ಮಿತನಾಗಿದ್ದಾನೆ. ರಾಮಾಯಣದ ಕೆಲವು ಸನ್ನಿವೇಶಗಳಲ್ಲಿ ಭರತನ ನಡತೆ ರಾಮನನ್ನೇ ಗುಣದಲ್ಲಿ ಮೀರಿದಂತಿದೆ._

📜 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩