🌹ಮೇಘದೂತದ ಒಂದು ಬಿಂದು🌹

*मत्वा देवं धनपतिसखं यत्र साक्षाद्वसन्तं प्रायश्चापं न वहति भयान्मन्मथ: षट्टदज्यम् | सभ्रूभङ्गप्रहितनयनै: कामिलक्ष्येष्वमोघै: तस्यारम्भश्चतुरवनिताविभ्रमैरेव सिद्ध: ||*

_ಆ ಅಲಕೆಯಲ್ಲಿ ಇದೊಂದು ಹೊಸರೂಪವನ್ನು ನೀನು ಕಾಣುವೆ. ಅಲ್ಲಿ ಕುಬೇರನ ಆಪ್ತಮಿತ್ರನಾದ ಹರನು ನಿಜರೂಪದಿಂದ ವಾಸಮಾಡುತ್ತಿರುವನು. ಅವನಿಗೂ ಕುಬೇರನಿಗೂ ಇರುವ ಆಪ್ತತೆಯೇ ವಾಸಕ್ಕೆ ಕಾರಣ. ಹಾಗಾಗಿ ಅಲ್ಲಿ ಪರಸ್ಪರ ಗಂಡು ಹೆಣ್ಣುಗಳನ್ನು ಒಂದುಗೂಡಿಸಲು ಮನ್ಮಥನ ಶರಗಳು ಪ್ರಯೋಗಿಸಲ್ಪಡುವುದಿಲ್ಲ. ಶಿವನ ಹೆದರಿಕೆಯಿಂದ ಮದನನು ಶರಗಳನ್ನು ಬತ್ತಳಿಕೆಯಿಂದ ಹೊರಗೆಳೆಯುವುದಿಲ್ಲ. ಆದರೆ ಮನ್ಮಥನ ಆ ಕಾರ್ಯವನ್ನು ಅಲ್ಲಿನ ಮಾನಿನಿಯರೇ ಪೂರೈಸುವರು. ತಮ್ಮ ಹುಬ್ಬುಗಂಟಿಕ್ಕುವಿಕೆಯಿಂದ ಪ್ರಯುಕ್ತವಾದ ನೋಟವಿರುವ ಕಾಮುಕರೆಂಬ ಗುರಿಗಳಲ್ಲಿ ವಿಫಲವಾಗದ ವಿಲಾಗಳುಳ್ಳವರಾಗುವರು. ಆ ನಾರಿಯರ ಕಣ್ಣೋಟವೇ ಮದನನ ಬಾಣದಂತೆ ಕಾಮಿಗಳನ್ನು ಆಕರ್ಷಿಸಿ ಒಂದುಗೂಡಿಸುತ್ತವೆ. ಅತ್ತಿತ್ತ ಓಡಾಡುತ್ತಾ ತೋರುವ ವೈಯ್ಯಾರ, ಹುಬ್ಬುಗಂಟಿಕ್ಕಿದ ನೋಟ, ವಸ್ತೃವಿನ್ಯಾಸದಲ್ಲಿನ ಆಕರ್ಷಣೆ, ಪ್ರಕೃತಿ ಸಹಜವಾದ ಲಾಲಿತ್ಯ ಇವೆಲ್ಲವನ್ನು ಕಂಡ ಕಾಮುಕರು ಮನಸಾರೆ ಒಂದುಗೂಡುತ್ತಾರೆ. ಹೀಗೆ ಅಲಕೆಯ ಸ್ತ್ರೀಯರ ಕಣ್ಣೋಟಗಳೇ ಮದನನ ಕಾರ್ಯವನ್ನು ಮಾಡುತ್ತವೆ. ಸ್ತ್ರೀಯರ ಕಣ್ಣೋಟವೇ ಪುರುಷರನ್ನು ಆಕರ್ಷಿಸಬಲ್ಲದು. ಅನೇಕ ಚಿತ್ರಗೀತೆಗಳು ಅದನ್ನೇ ಸಾರಿವೆ. ಕಣ್ಣಿನ ನೋಟಗಳು ಕೋಲ್ ಮಿಂಚಿನ ಬಾಣಗಳು, ಕಣ್ಣೋಟಕ್ಕಿಂತ ನಿನ್ನ ಕಣ್ಣು ಕಣ್ಣು ಕಲೆತಾಗ ಇತ್ಯಾದಿ. ಕವಿ ಅವುಗಳಿಗೆಲ್ಲ ಇಲ್ಲಿ ಮೂಲವಾಗಿದ್ದಾನೆ._

📜 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩