📙🌾 ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು 🌾📙
ಭಾಗ-೨೪
*ರಾಘವಸ್ಯ ಪ್ರಭಾವೇಣ ಭವತಾಂ ಚೈವ ತೇಜಸಾ ಸುಗ್ರೀವಸ್ಯ ಚ ಕಾರ್ಯಾರ್ಥಂ ಮಯಾ ಸರ್ವಮನುಷ್ಠಿತಮ್*
_ಪವನಾತ್ಮಜನು ತಾನು ಹೋದ ಕಾರ್ಯ ಯಶಸ್ವಿಯಾಗಿ ಪೂರೈಸಿ ಹಿಂತಿರುಗಿದ್ದಾನೆ. ಅಲ್ಲಿ ಎಲ್ಲವನ್ನೂ ಕಪಿವೀರರಿಗೆ ಅರುಹಿ ಈ ಮಾತನ್ನು ಆಡುತ್ತಿರುವನು. ವಿನಯವೆಂದರೆ ಇದೇ ಆಗಿದೆ. ಶ್ರೀರಾಮನ ಪ್ರಭಾವದಿಂದಲೂ ನಿಮ್ಮೆಲ್ಲರ ಅನುಗ್ರಹದಿಂದಲೂ ಸುಗ್ರೀವನ ಕಾರ್ಯಸಿದ್ಧಿಯ ಸಲುವಾಗಿ ನಾನು ಈ ಎಲ್ಲವನ್ನೂ ಮಾಡಿದೆನು. ಇಲ್ಲಿ ಮೊದಲಿಗೆ ಅವನ ಉಲ್ಲೇಖ ಗಮನಿಸಿ. ನಾವು ಏನೇ ಕಾರ್ಯ ಯಶಸ್ವಿಯಾಗಿ ಪೂರೈಸಿದರೂ ನಾನು ನನ್ನಿಂದ ಎಂಬುದನ್ನು ಹೇಳಿ ಮುಂದುವರೆಯುತ್ತೇವೆ. ( ನನ್ನನ್ನೂ ಸೇರಿಸಿ) ಆದರೆ ಹನುಮಂತ ರಾಮನ ಪ್ರಭಾವ ಹಾಗೂ ನಿಮ್ಮೆಲ್ಲ ಹಿರಿಯರ ಆಶೀರ್ವಾದವೇ ಈ ಯಶಸ್ಸಿಗೆ ಕಾರಣ ಎನ್ನುತ್ತಾನೆ. ತಾನು ಮಾಡಿದ್ದು ನಿಮ್ಮೆಲ್ಲರಿಂದಾಗಿ ತನ್ನ ಪಾತ್ರವೇನೂ ಇಲ್ಲ ಎನ್ನುತ್ತಾನೆ. ನಿಜಕ್ಕಾದರೆ ಈ ಕಾರ್ಯದಲ್ಲಿ ಹನುಮನದ್ದೇ ಹೆಚ್ಚು ಅಥವಾ ಪೂರ್ತಿ ಶ್ರಮವಿರುತ್ತದೆ. ಆದರೂ ಅವನ ವಿನಯ ನಮ್ಮೆಲ್ಲರ ಕಣ್ಣು ತೆರೆಸುತ್ತದೆ. ಹಿಂದಿನ ರಾಷ್ಟ್ರಪತಿಗಳಾಗಿದ್ದ ಕಲಾಂ ಅವರೂ ಇಂತಹ ವಿನಯ ತೋರುತ್ತಿದ್ದರು. ಕ್ಷಿಪಣಿಯೊಮ್ಮೆ ವಿಫಲವಾದಾಗ ತಾನೇ ಜವಾಬ್ದಾರಿ ಹೊತ್ತು ಸಫಲವಾದಾಗ ಉಳಿದವರೇ ಕಾರಣ ಎಂದದ್ದು ಅವರ ವಿನಯದ ಸಂಕೇತ. ನಾವೂ ಯಶಸ್ಸನ್ನು ಹಂಚಿಕೊಳ್ಳುವ ಉದಾರತೆ ಬೆಳಿಸಿಕೊಳ್ಳೋಣವೇ!_
*ಸರ್ವಥಾತಿಪ್ರವೃದ್ಧೋಸೌ ರಾವಣೋ ರಾಕ್ಷಸೇಶ್ವರಃ ತಸ್ಯ ತಾಂ ಸ್ಪೃಶತೋ ಗಾತ್ರಂ ತಪಸಾ ನ ವಿನಾಶಿತಮ್*
_ರಾವಣ ನೀಚನಾದರೂ ಹನುಮನ ಗೌರವದ ಮಾತಿದು. ರಾಕ್ಷಸೇಶ್ವರನಾದ ರಾವಣನು ಕೂಡ ನಿಜಕ್ಕೂ ಮಹಾತಪಸ್ವಿಯಾಗಿದ್ದಾನೆ. ಮಹಾಸಾಧ್ವಿ ಸೀತೆಯ ಶರೀರ ಸ್ಪರ್ಶಿಸಿಯೂ ಅವನ ಶರೀರವು ಅವಳ ತಪಃಪ್ರಭಾವದಿಂದ ವಿನಾಶಹೊಂದಲಿಲ್ಲ. ಹಾಗಾಗಿ ಅವನೂ ಮಹಾತಪಸ್ವಿ ಹಾಗೂ ತೇಜಸ್ವಿ. ಇಲ್ಲಿ ಶತ್ರುವಿನಲ್ಲೂ ಗುಣವನ್ನು ಗುರುತಿಸುವ ಹನುಮನು ನಮಗೆ ಮಾದರಿ. ಇನ್ನೊಬ್ಬರ ಅವಗುಣಗಳನ್ನು ಮಾತ್ರ ಬೆಟ್ಟು ಮಾಡಿ ತೋರುವ ನಾವು ಕಡೇಪಕ್ಷ ನಮ್ಮ ಮಿತ್ರರ ಗುಣಗಳನ್ನು ಹೊಗಳುತ್ತೇವೆಯೇ! ಇದನ್ನೇ ಪರಗುಣಮರಮಾಣೂನ್ ಪರ್ವತೀಕೃತ್ಯ ಎಂದದ್ದು. ಗುಣಗ್ರಾಹಿತ್ವಕ್ಕೆ ಹನುಮನು ನಮಗೆಲ್ಲ ಆದರ್ಶ._
📙 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ