📙🌾 ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು 🌾📙
ಭಾಗ-23
_ಹನುಮನು ತನ್ನ ಕೋಪದ ಬಗ್ಗೆ ಬಹಳ ಪಶ್ಚಾತ್ತಾಪ ಪಡುತ್ತಾನೆ. ಕೋಪದ ದೋಷದಿಂದಾಗಿ ಜ್ಞಾನಿಯಾದ ನಾನೂ ಕಪಿತ್ವವನ್ನು ಪ್ರಕಟಿಸಿದೆ. ರಾಜಸಭಾವಕ್ಕೆ ಒಳಗಾಗಿ ಜಿತೇಂದ್ರಿಯನಾದ ನಾನೂ ಬುದ್ಧಿಗೆಟ್ಟೆ ಇತ್ಯಾದಿ. ರಾಮಾಯಣದ ಮಂಗಗಳು ಮಂಗಗಳೇ ಅಲ್ಲ ಎನ್ನುವವರಿಗೆ ಸ್ಪಷ್ಟವಾದ ಉತ್ತರ ಇದೆ. ಹನುಮನೇ ತಾನು ಕಪಿಯಂತೆ ಚಂಚಲತೆ ತೋರಿದನಲ್ಲಾ ಎನ್ನುತ್ತಾನೆ. *ಪ್ರಥಿತಂ ತ್ರಿಷು ಲೋಕೇಷು ಕಪಿತ್ವಮನವಸ್ಥಿತಮ್* ಕಪಿಯಾಗಿ ಹುಟ್ಟಿದರೂ ಸಾಧನೆಯಲ್ಲಿ ನರರನ್ನೇ ಮೀರಿಸಿದ ವಾ- ನರನಿವನು._
*ಅಥವಾ ಚಾರುಸರ್ವಾಂಗೀ ರಕ್ಷಿತಾ ಸ್ವೇನ ತೇಜಸಾ ನ ನಶಿಷ್ಯತಿ ಕಲ್ಯಾಣೀ ನಾಗ್ನಿರಗ್ನೌ ಪ್ರವರ್ತತೇ*
_ಮತ್ತೆ ಸ್ವಲ್ಪಸಮಯದಲ್ಲಿ ಹನುಮನು ಹೀಗೆ ಆಲೋಚಿಸುವನು. ಒಂದು ವೇಳೆ ಸರ್ವಾಂಗಸುಂದರಿಯಾದ ಈ ಮಾತೆ ಅಪರಿಮಿತವಾದ ತೇಜಸ್ಸಿನಿಂದ ತನ್ನನ್ನು ತಾನು ರಕ್ಷಿಸಿಕೊಂಡಿರಬಹುದೇ? ಏಕೆಂದರೆ ಒಂದು ಅಗ್ನಿಯು ಮತ್ತೊಂದು ಅಗ್ನಿಯಲ್ಲಿ ಪ್ರವರ್ತಿಸಲಾರದು. ಬೆಂಕಿಯು ಬೆಂಕಿಯನ್ನೇ ಸುಡುವುದೇ? ಸೀತೆ ತನ್ನ ಪಾತಿವ್ರತ್ಯದ ತೇಜಸ್ಸಿನಿಂದ ಬೆಂಕಿಯಂತೆ ಪ್ರಕಾಶಿಸುತ್ತಿದ್ದಾಳೆ. ಅಂತಹ ಶ್ರೇಷ್ಠಳನ್ನು ಅಗ್ನಿ ಸುಟ್ಟಾನೇ! ಸಾಧ್ಯವೇ ಇಲ್ಲ._
*ನಹಿ ಧರ್ಮಾತ್ಮನಸ್ತಸ್ಯ ಭಾರ್ಯಾಮಮಿತತೇಜಸಃ ಸ್ವಚಾರಿತ್ರಾಭಿಗುಪ್ತಾಂ ತಾಂ ಸ್ಪ್ರಷ್ಟುಮರ್ಹತಿ ಪಾವಕಃ*
_ಮಹಾಪರಾಕ್ರಮಿಯಾದ ಹಾಗೂ ಧರ್ಮಾತ್ಮನಾದ ರಾಮನ ಭಾರ್ಯೆಯಾದ ಸೀತೆಯು ತನ್ನ ಚಾರಿತ್ರ್ಯದಿಂದಲೇ ತನ್ನನ್ನು ರಕ್ಷಿಸಿಕೊಳ್ಳಲು ಸಮರ್ಥಳು. ಹಾಗಾಗಿ ಅಗ್ನಿಯೂ ಅವಳನ್ನು ಮುಟ್ಟಲು ಸಮರ್ಥನಲ್ಲ. ರಾವಣನು ಅಪಹರಿಸುವಾಗ ಯಾಕೆ ರಕ್ಷಿಸಿಕೊಳ್ಳಲಿಲ್ಲ ಎಂದು ಕೆಲವರು ಪ್ರಶ್ನಿಸಿದರೆ ದುಷ್ಟರ ನಾಶಕ್ಕೆ ತನ್ನ ಕೊಡುಗೆಯೂ ಇರಲಿ ಎಂದೇ ಸೀತೆಯು ಸುಮ್ಮನಿದ್ದಳು. ರಾವಣನು ಅಷ್ಟು ಕಾಲ ಬಂಧಿಸಿದ್ದರೂ ಒಂದು ದಿನವೂ ಅವಳನ್ನು ಸ್ಪರ್ಶಿಸುವ ಧೈರ್ಯ ತಾಳಲಿಲ್ಲ. ಶಾಪ ಎನ್ನುವುದು ಕಾರಣವಾದರೂ ಸೀತೆಯ ತಪದ ರಾಮನ ಶೌರ್ಯದ ಹೆದರಿಕೆ ಅವನನ್ನೂ ತಡೆದಿತ್ತು ಎನ್ನಬಹುದು._
*ತಪಸಾ ಸತ್ಯವಾಕ್ಯೇನ ಅನನ್ಯತ್ವಾಚ್ಚ ಭರ್ತರಿ ಅಪಿ ಸಾ ನಿರ್ದಹೇದಗ್ನಿಂ ನ ತಾಮಗ್ನಿಃ ಪ್ರಧಕ್ಷ್ಯತಿ*
_ತಪಸ್ಸಿನಿಂದಲೂ ಸತ್ಯನಿಷ್ಠೆಯಿಂದಲೂ ಪತಿಯ ವಿಷಯದಲ್ಲಿ ಅನನ್ಯ ಮಾನಸಳಾಗಿಯೂ ಇರುವ ಸೀತೆಯು ಅಗ್ನಿಯನ್ನೇ ಶಕ್ತಿಯಿಲ್ಲದವನಂತೆ ಮಾಡಲು ಸಮರ್ಥಳು. ಆದರೆ ಅಗ್ನಿಯೆಂದೂ ಅವಳನ್ನು ದಹಿಸಲಾರನು. ಮುಂದೆ ಅಗ್ನಿಪ್ರವೇಶ ಕಾಲದಲ್ಲಿ ಅಗ್ನಿ ಸುಡದಿದ್ದಾಗ ಅವಳು ಮಾಯಾಸೀತೆ ಸುಟ್ಟು ನಿಜಸೀತೆ ಬಂದಳು ಎಂದೆಲ್ಲಾ ಕಲ್ಪಿಸುತ್ತಾರೆ. ಅದು ಅನವಶ್ಯಕ. ಸೀತೆ ಅವಳೇ ಇವಳು. ಇಲ್ಲದಿದ್ದರೆ ರಾಮ ಯಾಕೆ ದುಃಖಿಸುತ್ತಿದ್ದ? ವಾಲ್ಮೀಕಿಗಳು ಯಾವ ಅಂಶವನ್ನೂ ಸ್ಪಷ್ಟಪಡಿಸದೆ ಇರುವುದಿಲ್ಲ. ಹಾಗಾಗಿ ನಾವು ಅವರ ವಾಕ್ಯ ಮೀರಿ ಏನೇನೋ ಕಲ್ಪನೆ ಮಾಡಿ ಹೇಳುವುದು ಮೂರ್ಖತನ ಎನ್ನುವುದು ನನ್ನ ಮತ._
📙 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ