ಪ್ರತಿಮಾ ನಾಟಕ
🌺 ಪ್ರತಿಮಾ ನಾಟಕದ ಒಂದು ಸುಮ 🌺
*उभयस्यास्ति सान्निध्यं यद्येतत् साधयिष्यति | धनुर्वा तपसि श्रान्ते श्रान्ते धनुषि वा तप: ||*
_ರಾಮ ಬ್ರಾಹ್ಮಣ ವೇಷದ ರಾವಣನಿಗೆ ಹೇಳುವ ಮಾತು. ದಶರಥನ ಶ್ರಾದ್ಧಕ್ಕೆ ಬ್ರಾಹ್ಮಣನಾಗಿ ರಾವಣ ಬಂದಿದ್ದಾನೆ. ರಾವಣನು ತನ್ನನ್ನು ಮನುವಿನ ಧರ್ಮಶಾಸ್ತ್ರ, ಮಹೇಶ್ವರನಿಂದ ಬಂದ ಯೋಗಶಾಸ್ತ್ರ , ಬೃಹಸ್ಪತಿಯ ಅರ್ಥಶಾಸ್ತ್ರ, ಮೇಧಾತಿಥಿಯ ನ್ಯಾಯಶಾಸ್ತ್ರ, ಪ್ರಾಚೇತಸನ ಶ್ರಾದ್ಧಕಲ್ಪ ಇತ್ಯಾದಿ ಅಧ್ಯಯನ ಮಾಡಿದ್ದೇನೆ. ಶ್ರಾದ್ಧಕ್ಕೆ ಸಂಬಂಧಿಸಿದಂತೆ ತೃಣಗಳಲ್ಲಿ ದರ್ಭೆ ಶ್ರೇಷ್ಠ, ಧಾನ್ಯಗಳಲ್ಲಿ ಎಳ್ಳು, ಪಕ್ಷಿಗಳ ಮಾಂಸದಲ್ಲಿ ರಾಜನಾದ ವಾರ್ಧ್ರೀಣಸ ಎಂಬ ಪಕ್ಷಿ, ಮೀನುಗಳಲ್ಲಿ ಮಹಾಶಫರ ಹೆಸರಿನ ಮೀನು ಶ್ರೇಷ್ಠ, ಪಶುಗಳಲ್ಲಿ ಎತ್ತು ಅಥವಾ ಖಡ್ಗಮೃಗ ಅಥವಾ ಎಂದು ನುಡಿಯುವನು. ಆಗ ರಾಮ ವಾ ಎಂದೇಕೆ ಸುಮ್ಮನಿರುವೆ. ಶ್ರೇಷ್ಠವಾದದ್ದೆಲ್ಲವೂ ತಾನು ತಂದುಕೊಡುವೆನು. ಅಂತಹ ಸಾಮರ್ಥ್ಯ ನನ್ನಲ್ಲಿದೆ ಎನ್ನುತ್ತಾ ಈ ಮಾತು ಹೇಳುವನು. ಎರಡೂ ಬಗೆಯ ಸಾಧನೆ ನನ್ನಲ್ಲಿದೆ. ತಪಸ್ಸಿನ ಶಕ್ತಿಯಿಂದ ಪಡೆಯುವ ವಿಷಯವಾಗಲಿ, ಅಥವಾ ಧನುಸ್ಸಿನ ಶಕ್ತಿಯಿಂದ ಪಡೆಯುವ ವಸ್ತುವಾಗಲಿ ಪಡೆದೇ ತೀರುವೆನು. ಬಲಗಳಲ್ಲಿ ಎರಡೇ ಪ್ರಸಿದ್ಧ. ತಪೋಬಲ, ಬಾಹುಬಲ. ಈ ಎರಡನ್ನೂ ಸಂಪಾದಿಸಿರುವೆ. ಶಸ್ತ್ರಾಸ್ತ್ರ ಗಳ ಪರಿಣತಿಯನ್ನು, ಧರ್ಮಮಾರ್ಗಾಸಕ್ತನಾದ ಕಾರಣ ತಪವನ್ನೂ ಹೊಂದಿರುವೆ. ತಪಸ್ಸಿನಿಂದ ಒಂದು ವೇಳೆ ಪಡೆಯಲು ಅಸಾಧ್ಯವಾದರೆ ಧನುಸ್ಸಿಗೆ ಬಾಣ ಹೂಡಿಯಾದರೂ ಸಂಪಾದಿಸುವೆನು. ಧನುಸ್ಸಿನ ಶಕ್ತಿಯು ಒಂದು ವೇಳೆ ವ್ಯರ್ಥವಾದರೆ ತಪಗೈದಾದರೂ ಪಡೆಯುವೆನು. ನನಗೆ ಅಸಾಧ್ಯವಾದುದು ಯಾವುದೂ ಇಲ್ಲ. ಮುಂದೆ ಸಮುದ್ರರಾಜನು ತಪಸ್ಸಿಗೆ ಪ್ರತಿಕ್ರಿಯೆ ನೀಡದಿದ್ದಾಗ ರಾಮ ಧನುಸ್ಸನ್ನು ಸೆಳೆಯುತ್ತಾನೆ.ಹೀಗೆ ರಾಮ ಋಷಿಯೂ ಹೌದು, ಪರಾಕ್ರಮಿಯೂ ಹೌದೆಂಬುದನ್ನು ಕವಿ ವರ್ಣಿಸಿದ್ದಾನೆ._
📜 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ