ಮೇಘದೂತ

🌹 ಮೇಘದೂತದ ಒಂದು ಬಿಂದು 🌹

*त्वामालिख्यप्रणयकुपितां धातुरागैश्शिलायां आत्मानन्ते चरणपतितं यावदिच्छामि कर्तुम् | अस्त्रैस्तावन्मुहुरुपचितैर्दृष्टिरालुप्यते मे क्रूरस्तस्मिन्नपि न सहते संगमं नौ कृतान्त: ||*

_ಎಲೇ ನವತರುಣಿಯೇ, ಪ್ರಣಯ ಅತಿಶಯವಾಗಿ ನನ್ನ ವಿಷಯದಲ್ಲಿ ಕೋಪಗೊಂಡವಳಂತೆ ಗಂಧಕ ರಂಜಕ ಮುಂತಾದ ಗಿರಿಯಲಿ ಸಹಜವಾಗಿ ಸಿಗುವ ಧಾತುಗಳಿಂದ ಕಲ್ಲಿನ ಮೇಲೆ ನಿನ್ನ ಚಿತ್ರವನ್ನು ಬರೆಯಲು ಪ್ರಯತ್ನಿಸುತ್ತಿರುವೆ. ಹಾಗೆ ಬರೆದು ನನ್ನನ್ನು ನಿನ್ನ ಕೋಪ ತಣಿಸಲು ಕಾಲಮೇಲೆ ಬಿದ್ದವನಂತೆ ಚಿತ್ರಿಸಲೂ ಪ್ರಯತ್ನಿಸುತ್ತಿರುವೆ. ಕೋಪಗೊಂಡ ಪ್ರಿಯೆಯನ್ನು ಒಲಿಸಿ ಮುದ್ದಿಸಲು ಪ್ರಿಯಕರನು ಕಾಲು ಹಿಡಿದು ಬೇಡುವಂತಹ ಒಳ್ಳೆಯ ಕಲ್ಪನೆಯ ದೃಶ್ಯ ಮನದಲ್ಲಿ ಇದೆ. ಆದರೆ ಬರೆಯಲು ಬಯಸಿ ತೊಡಗಿದಾಗಲೆಲ್ಲ ಮತ್ತೆ ಮತ್ತೆ ಹೆಚ್ಚುತ್ತಿರುವ ಕಣ್ಣೀರಿನಿಂದ ನನ್ನ ದೃಷ್ಟಿಯೇ ಮುಚ್ಚಿಹೋಗುತ್ತಿದೆ. ನಿನ್ನ ನೆನಪು ಎದೆಯಾಳದಿಂದ ಒತ್ತರಿಸಿ ಕಣ್ಣೀರನ್ನು ಹೊರಹಾಕುತ್ತಿದೆ. ಕಣ್ಣೀರು ಕಡಿಮೆಯಾಗದೆ ಚಿತ್ರ ಬರೆಯಲು ದೃಷ್ಟಿ ಸಹಕರಿಸುತ್ತಿಲ್ಲ. ಹೀಗೆ ಕ್ರೂರವಾದ ವಿಧಿಯು ಆ ಚಿತ್ರದಲ್ಲಿಯೂ ನಮ್ಮಿಬ್ಬರ ಸಮಾಗಮವನ್ನು ಸಹಿಸುವುದಿಲ್ಲ. ವಿಧಿಯ ಕ್ರೂರತೆಯು ನನ್ನನ್ನು ಚಿತ್ರ ಬಿಡಿಸುವುದರಿಂದಲೂ ವಿಮುಖನನ್ನಾಗಿಸುತ್ತಿದೆ. ಚಿತ್ರದಲ್ಲಾದರೂ ಇವರು ಒಂದಾಗಿರುವುದು ಬೇಡವೆಂಬ ಅದರ ನಿರ್ಣಯವೇ ಕಾರಣ. ಹೀಗೆ ದುಃಖಿಸುತ್ತಿರುವ ನನ್ನ ಅವಸ್ಥೆಯನ್ನು ಪ್ರಿಯೆಗೆ ನಿವೇದಿಸಿ ಸ್ವಲ್ಪ ಕಾಲ ತಾಳುವಂತೆ ಹೇಳು, ಓ ಮೇಘವೇ ಬೇಗನೇ ತೆರಳು._

📜 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩