📗🌾📙 ವೇದ-ಧರ್ಮ 📗🌾📙 ಭಾಗ-20
*ವೇದಾಂಗಗಳು*
*ಕಲ್ಪಗಳು*
_*ಕಲ್ಪ್ಯತೇ ಸಮರ್ಥ್ಯತೇ ಯಾಗ ಪ್ರಯೋಗೇತ್ರೇತಿ ಕಲ್ಪಃ* ಎಂಬಂತೆ ಮಂತ್ರಗಳ ಮೂಲಕ ಆಚರಿಸುವ ಯಜ್ಞದ ಪ್ರಕ್ರಿಯೆಯನ್ನು ಅಥವಾ ಯಾಗ ಪ್ರಯೋಗಗಳನ್ನು ಕಲ್ಪಿಸಿಕೊಡುವುದು ಅರ್ಥಾತ್ ವಿವರಿಸುವ ಕೆಲಸ ಈ ಕಲ್ಪಸೂತ್ರಗಳು ಮಾಡುತ್ತವೆ. ಒಟ್ಟಾರೆಯಾಗಿ ಯಜ್ಞ ಪ್ರಕ್ರಿಯೆಯನ್ನು ಸೂತ್ರಗಳ ಮೂಲಕ ವಿವರಿಸುವ ಗ್ರಂಥಗಳೇ ಕಲ್ಪಗಳು. ಹಾಗಾದರೆ ವೇದದ ಬ್ರಾಹ್ಮಣಗಳಲ್ಲಿ ಇದೇ ಅಲ್ಲವೇ ಇರುವುದು ಎಂದರೆ ಬ್ರಾಹ್ಮಣಗಳಲ್ಲಿ ಬೇರೆ ಯಜ್ಞಗಳನ್ನು ಅಲ್ಲಲ್ಲಿ ವರ್ಣಿಸಿದ್ದಾರೆ. ಕಲ್ಪಸೂತ್ರಗಳಲ್ಲಿ ಅವೆಲ್ಲವನ್ನೂ ಒಂದುಗೂಡಿಸಿ ಒಂದೇ ಕಡೆ ದೊರೆಯುವಂತೆ ಮಾಡಿದ್ದಾರೆ. ಅಷ್ಟಲ್ಲದೇ ಪ್ರಸಿದ್ಧವಾದ ಹದಿನಾರು ಸಂಸ್ಕಾರಗಳು, ಅಪ್ರಸಿದ್ಧವಾದ ಉಳಿದ ಹದಿನಾರು ಸಂಸ್ಕಾರಗಳು, ಅಂತ್ಯಕರ್ಮ ಹೀಗೆ ಅನೇಕ ವಿಷಯಗಳನ್ನು ಈ ಸೂತ್ರಗಳು ಒಳಗೊಂಡಿವೆ. ನಾಲ್ಕು ವೇದಿಗಳಿಗೂ ಶಾಖಾ ಭೇದದಿಂದಾಗಿ ಅನೇಕ ಸೂತ್ರಗಳಿವೆ. ಅನೇಕ ವಿಚಾರಗಳಲ್ಲಿ ಸಾಮ್ಯತೆ ಅಥವಾ ಪುನರುಕ್ತಿ ಎನಿಸಿದರೂ ಆ ಶಾಖೆಯ ವಿಭಿನ್ನವಾದ ಆಚರಣೆಗಳನ್ನು ಅವುಗಳು ಪ್ರತಿಪಾದಿಸುತ್ತವೆ. ಹೀಗಾಗಿಯೇ ನೂರು ಕಡೆಯ ಆಚರಣೆಗಳು ನೂರು ತರಹ. ಆಚರಣೆಯ ಉದ್ದೇಶ ಎಲ್ಲೆಡೆ ಒಂದೇ ಆಗಿರುತ್ತದೆ._
_ಶಾಖಾಸಂಪ್ರದಾಯದಂತೆ ಕರ್ಮಕಾಂಡೋಕ್ತ ಕರ್ಮಗಳನ್ನು ವಿಧಿಸುವ ಕಲ್ಪಸೂತ್ರಗಳು ಹಲವಾರು ಇವೆ. ಋಗ್ವೇದದಲ್ಲಿ ಆಶ್ವಲಾಯನ ಶಾಖೆಯವರಿಗೆ ಅದರದ್ದೇ ಸೂತ್ರವಿದೆ. ಶಾಕಲ ಶಾಖೆಯವರಿಗೆ ಅದೇ ಸೂತ್ರದ ಆಚರಣೆ ಕಂಡುಬರುವುದು. ಹಾಗೆಯೇ ಶಾಂಖಾಯನ ಗೃಹ್ಯಸೂತ್ರವೂ ಋಗ್ವೇದಿಗಳಿಗೆ ಸಂಬಂಧಿಸಿದೆ. ಇನ್ನೂ ಅನೇಕ ಹೆಚ್ಚು ಪ್ರಚಲಿತ ಇಲ್ಲದ ಸೂತ್ರಗಳು ಋಗ್ವೇದಕ್ಕೆ ಸಂಬಂಧಿಸಿವೆ._
_ಯಜುರ್ವೇದಕ್ಕೆ ಸಂಬಂಧಿಸಿದಂತೆ ಭಾರದ್ವಾಜೀಯ ಸೂತ್ರ, ಬೋಧಾಯನ ಸೂತ್ರ, ಆಪಸ್ತಂಭ ಸೂತ್ರ, ಹಿರಣ್ಯಕೇಶೀಯ ಸೂತ್ರ, ಮಾನವ ಸೂತ್ರ, ಕಾಠಕಗೃಹ್ಯಸೂತ್ರ, ವೈಖಾನಸ ಗೃಹ್ಯಸೂತ್ರಗಳು ಕಾಣಸಿಗುವವು. ಇವುಗಳಲ್ಲಿ ಮೊದಲನೆಯದು ಆಪಸ್ತಂಭವೆಂದು ಅನೇಕರ ಮತ. ಶುಕ್ಲಯಜುರ್ವೇದಿಗಳಿಗೆ ಪಾರಸ್ಕರ ಗೃಹ್ಯಸೂತ್ರವಿದೆ. ಕಾತ್ಯಾಯನ ಗೃಹ್ಯಸೂತ್ರವೂ ಇದೆ. ಕೆಲವು ಶುಕ್ಲಯಜುರ್ವೇದಿಗಳು ಹಿರಣ್ಯಕೇಶೀಯ ಅಥವಾ ಸತ್ಯಾಷಾಢಸೂತ್ರಗಳನ್ನು ಅನುಸರಿಸುತ್ತಾರೆ._
_ಸಾಮಶಾಖಿಗಳಿಗೆ ಮಶಕ ಶ್ರೌತಸೂತ್ರ, ಲಾಟ್ಯಾಯನ ಶ್ರೌತಸೂತ್ರ, ದ್ರಾಹ್ಯಾಯಣ ಶ್ರೌತಸೂತ್ರ, ಖಾದಿರ ಗೃಹ್ಯಸೂತ್ರವೂ, ಗೋಭಿಲ ಗೃಹ್ಯಸೂತ್ರವೂ ಇವೆ. ಇವರಿಗೆ ಗೃಹ್ಯಸೂತ್ರಗಳು ಲಭ್ಯವಿಲ್ಲದ ಕಾರಣ ಹೆಚ್ಚಾಗಿ ಋಗ್ವೇದದ ಸೂತ್ರಗಳನ್ನು ಸಾಮಾನ್ಯ ಕರ್ಮಗಳಿಗೂ ಶ್ರೌತಯಾಗಗಳಿಗೆ ಉಳಿದ ಸೂತ್ರಗಳನ್ನು ಅವಲಂಬಿಸುತ್ತಾರೆ._
_ಅಥರ್ವವೇದಕ್ಕೆ ಸಂಬಂಧಿಸಿದಂತೆ ಕೌಶಿಕ ಗೃಹ್ಯಸೂತ್ರವೂ, ವೈತಾನ ಶ್ರೌತಸೂತ್ರಗಳೂ ಇವೆ._
_ಹೀಗೆ ಹಲವಾರು ಶಾಖೆಗಳಿಗನುಗುಣವಾಗಿ ಹಲವಾರು ಕಲ್ಪಸೂತ್ರಗಳು ಪ್ರಸಿದ್ಧವಾಗಿವೆ._
📗 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ