ಮೇಘದೂತ

🌹 ಮೇಘದೂತದ ಒಂದು ಬಿಂದು 🌹

*सा सन्यस्ताभरणमबला पेशलं धारयन्ती शय्योत्सङ्गे विहितमसकृद्दुखदु:खेन गात्रम् |त्वामप्यस्रं नवजलमयं मोचयिष्यत्यवश्यं प्रायस्सर्वो भवति करुणावृत्तिरार्द्रान्तरात्मा ||*

_ಹೇ ಮೇಘವೇ, ನೀನು ಆ ಅಲಕೆಯಲ್ಲಿ ಸದಾ ದುಃಖದಿಂದ ಕೂಡಿರುವ ನನ್ನ ಸಖಿಯನ್ನು ನೋಡುವೆ. ಪತಿ ವಿರಹದ ಕಾರಣ ಅಲಂಕಾರಕ್ಕಿರುವ ಯಾವ ಆಭರಣಗಳನ್ನೂ ಅವಳು ಧರಿಸುವುದಿಲ್ಲ. ಸರಿಯಾಗಿ ಆಹಾರ ಸ್ವೀಕರಿಸದೆ ಸೊರಗಿದ್ದಾಳೆ. ಅನೇಕಬಾರಿ ಉಕ್ಕಿಬರುವ ದುಃಖದ ಕಾರಣ ನಿರಂತರವಾದ ನದಿಯ ಪ್ರವಾಹದಂತೆ ಅಳುತ್ತಾ ಹಾಸಿಗೆಯ ಮೇಲೆ ಇಡಲ್ಪಟ್ಟ ತನ್ನ ಮೃದು ಶರೀರವನ್ನು ಹೇಗೋ ಏನೋ ಕಷ್ಟಪಟ್ಟು ಧರಿಸಿರುವಳು. ಮತ್ತೆ ಹಿಂತಿರುಗಿ ಬರುವನೆಂಬ ಆಸೆಯಿಂದ ತನ್ನ ಕೋಮಲತನುವನ್ನು ಬಹಳ ಕಷ್ಟದಿಂದ ಧರಿಸಿದ್ದಾಳೆ. ಆಸೆಯೊಂದೇ ಅವಳು ಜೀವಂತ ಇರಲು ಸಹಾಯಕವಾಗಿದೆ. ಆ ನನ್ನ ಪ್ರಿಯೆಯು ನಿನಗೂ ಕೂಡ ಹೊಸದಾದ ನೀರಿನ ರೂಪದ ಕಣ್ಣೀರನ್ನು ಸುರಿಸುವಂತೆ ಮಾಡುವಳು. ಅವಳ ದುಃಖವನ್ನು ಹತ್ತಿರದಿಂದ ಕಂಡ ನೀನು ಅದನ್ನು ತನ್ನ ದುಃಖವೆಂದೇ ಭಾವಿಸಿ ಹೊಸನೀರಿನ ಕಣ್ಣೀರನ್ನು ಸುರಿಸುವೆ. ಏಕೆಂದರೆ ಮೃದುಹೃದಯದ ವ್ಯಕ್ತಿಗಳು ಎಂದಿಗೂ ದಯೆಯಿಂದ ಕೂಡಿದ ವಿಶಿಷ್ಟವಾದ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ನೀನು ಸ್ವಭಾವತಃ ಮೃದು ಮನಸ್ಸಿನವನು. ಅವಳ ಅಷ್ಟು ತೀವ್ರತರವಾದ ದುಃಖವನ್ನು ಕಂಡ ನೀನು ಕಣ್ಣೀರು ಸುರಿಸುವುದು ನಿಶ್ಚಯ. ನಿನ್ನ ಸ್ವಭಾವವೇ ಹಾಗಿದೆ. ಮೋಡ ಹೊಸದಾದ ನೀರಿನಿಂದ ಮಳೆ ಸುರಿಸುವುದನ್ನೇ ಕವಿ ಕಣ್ಣೀರಾಗಿಸಿದ್ದಾನೆ. ನಮಗೂ ಇನ್ನೊಬ್ಬರ ಕಷ್ಟ ಕಂಡು ಅನೇಕ ಬಾರಿ ಕಣ್ಣೀರು ಹುಟ್ಟುವುದಿಲ್ಲವೇ! ಭಾವುಕಜೀವಿಗಳಿಗ ಹಾಗೂ ಮೃದು ಹೃದಯದ ವ್ಯಕ್ತಿಗಳಿಗೆ ದುಃಖವನ್ನು ಕಂಡು ತಾವೂ ಅದರಲ್ಲಿ ಪಾಲ್ಗೊಳ್ಳುವರು._

📜 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩