ಮೇಘದೂತ
🌹 ಮೇಘದೂತದ ಒಂದು ಬಿಂದು 🌹
*अङ्गेनाङ्गं प्रतनु तनुना गाढतप्तेन तप्तं सास्रेणाश्रुद्रुतमविरतोत्कण्ठमुत्कण्ठितेन | उष्णोच्छ्वासं समधिकतरोच्छ्वासिना दूरवर्ती संकल्पैस्तैर्विशति विधिना वैरिणा रुद्धमार्ग: ||*
_ಮೇಘನೇ, ನೀನು ನನ್ನೀ ಸಂದೇಶವನ್ನು ಅವಳಿಗೆ ಅರುಹು. ನಿನ್ನ ಇನಿಯನು ಇನ್ನೂ ಬದುಕಿರುವನು, ಆದರೆ ಬಹಳಷ್ಟು ವಿಷಯದಲ್ಲಿ ನಿನ್ನ ಸಾಮ್ಯತೆಯೇ ಇದೆ. ನಮ್ಮಿಬ್ಬರ ಸೇರುವಿಕೆಯು ದೂರದಲ್ಲಿರುವ ನಮ್ಮ ವೈರಿಯಾದ ದೈವದಿಂದ ತಡೆಯಲ್ಪಟ್ಟಿದೆ. ಆ ದಾರಿಯನ್ನು ವಿಧಿ ಎಂದು ಕರುಣಿಸುವುದೋ ಎಂಬ ಯೋಚನೆ ದಿನದಿನವೂ ಬಾಧಿಸುತ್ತಿದೆ. ನಿನ್ನ ಪತಿಯು ದುಃಖದಿಂದ ಏನನ್ನೂ ಸರಿಯಾಗಿ ಸ್ವೀಕರಿಸದೇ ಕೃಶನಾಗಿದ್ದಾನೆ. ನಿರಂತರವಾದ ರೋದನವು ಅವನ ವೇದನೆಯ ಆಧಿಕ್ಯವನ್ನು ಸೂಚಿಸುತ್ತಿದೆ. ಮತ್ತೆ ಮತ್ತೆ ಬಿಡುತ್ತಿರುವ ನಿಟ್ಟುಸಿರು ಗಲ್ಲವನ್ನು ಸುಡುತ್ತಿದೆ. ವಿಯೋಗದುಃಖದಿಂದ ಅವನ ತನುವು ಸಾಕಷ್ಟು ದಣಿದಿದೆ. ಹೀಗೆ ಬೇಸರಗೊಂಡು ಇದೇ ಅವಸ್ಥೆಯಲ್ಲಿರುವ ನಿನ್ನನ್ನು ಮನೋರಥಗಳಿಂದಲೇ ಪ್ರವೇಶಿಸುತ್ತಾನೆ. ಇಲ್ಲಿ ಮನದ ಬಯಕೆಯು ಯಾರನ್ನು ಬೇಕಾದರೂ ಒಂದುಗೂಡಿಸಬಲ್ಲದು ಎಂಬ ಕಲ್ಪನೆಯಿದೆ. ಯಕ್ಷ ಹಾಗೂ ಅವನ ಪತ್ನಿ ಸಮಾನ ಅವಸ್ಥೆಯಲ್ಲಿ ಶೋಕಿಸುತ್ತಿದ್ದಾರೆ. ಹೀಗೆ ಅವಸ್ಥೆಯಲ್ಲಿ ಒಂದಾಗಿರುವ ಇವರು ಮುಂದೆ ನಿಜಕ್ಕೂ ಒಂದಾಗುತ್ತಾರೆ ಎಂಬ ಭಾವ. ಕಣ್ಣೀರು ಸುರಿಸುವುದು, ರಾತ್ರಿ ನಿದ್ರೆ ಬರದಿರುವುದು, ನೋವು ಅನುಭವಿಸುವುದು, ಬಿಡುವಿಲ್ಲದ ಚಿಂತೆ, ನಿಡಿದಾದ ನಿಟ್ಟುಸಿರು, ಕೃಶಕಾಯ, ಮತ್ತೆ ಮತ್ತೆ ಕನಸು ಕಾಣುವುದು ಹೀಗೆ ಎಲ್ಲದರಲ್ಲೂ ಸಮಾನತೆಯಿದೆ. ಈ ಸಮಾನತೆಯೇ ಅವರನ್ನು ದೂರವಿದ್ದರೂ ಒಂದುಗೂಡಿಸಿದೆ ಎಂಬ ಭಾವ. ಹೀಗೆ ಹೇಳಿ ನನ್ನ ಪ್ರಿಯೆಯ ಮನಕ್ಕೆ ತಂಪು ನೀಡು. ನನ್ನೊಡನೆ ಸೇರುವಳೆಂಬ ವಾರ್ತೆಯೇ ಅವಳ ಶೋಕವನ್ನು ಕ್ಷಣಕಾಲವಾದರೂ ಮರೆಸುತ್ತದೆ._
📜 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ