ಧರ್ಮಾಚರಣೆ-೭೦
ಧರ್ಮಾಚರಣೆ--೭೦
ಮೌನವ್ರತಂ ಸಮಾಶ್ರಿತ್ಯ ಆಸೀನೋ ನ ವದೇದ್ವಿಜಃ | ಭುಂಜಾನೋ ಹಿ ವದೇದ್ಯಸ್ತು ತದನ್ನಂ ಪರಿವರ್ಜಯೇತ್ || ಪರಾಶರ ಸ್ಮೃತಿ||
ಭುಂಜತೋ ಮೃತ್ಯುರಾಯುಷ್ಯಂ ಎಂಬಂತೆ ಊಟ ಮಾಡುವಾಗ ಮಾತನಾಡುವುದು ಆಯುಷ್ಯ ಕ್ಷೀಣಕರ. ಒಂದೊಮ್ಮೆ ಮೌನನಿಯಮ ಪಾಲಿಸುತ್ತಿದ್ದ ವ್ಯಕ್ತಿ ಮಾತನಾಡಿದರೆ ತಾನು ಉಣ್ಣುತ್ತಿದ್ದ ಅನ್ನವನ್ನು ಅಲ್ಲಿಗೇ ಬಿಟ್ಟು ಅಂದಿನ ಊಟವನ್ನು ಅಷ್ಟರಿಂದಲೇ ಮುಗಿಸಬೇಕು. ಹಾಗಾಗಿ ಉಣ್ಣುವಾಗ ಮಾತನಾಡುವುದು ಎಂದೂ ಒಳ್ಳೆಯದಲ್ಲ. ಉಳಿದವರೂ ಮಾತನಾಡಿಸಲು ಪ್ರಯತ್ನ ಪಡುವುದೂ ತಪ್ಪು. ಭಗವಂತನ ಧ್ಯಾನ ಮಾಡುತ್ತಾ ಅವನ ಪ್ರಸಾದವೆಂದು ನಿಧಾನಕ್ಕೆ ಸಮಾಧಾನದಿಂದ ಉಣ್ಣಬೇಕು. ಇದು ಆರೋಗ್ಯದ ದೃಷ್ಟಿಯಿಂದ ಹಾಗೂ ಶಾಸ್ತ್ರದ ದೃಷ್ಟಿಯಿಂದಲೂ ಉತ್ತಮ.
ಸಂಗ್ರಹ: ಶ್ರೀನಿಧಿ ಅಭ್ಯಂಕರ್.
http://shreenidhiabhyankar.blogspot.com
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ