🌾📗 ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು🌾📗
ಭಾಗ-೧೫
*ದಾಸೋಹಂ ಕೋಸಲೇಂದ್ರಸ್ಯ ರಾಮಸ್ಯಾಕ್ಲಿಷ್ಟಕರ್ಮಣಃ*
_ಲಂಕಾಧ್ವಂಸ ಆರಂಭಿಸಿದ ಹನುಮನ ಆರ್ಭಟದ ಮಾತು. ಅವನ ಮಾತಿನಲ್ಲಿ ಎಂತಹ ವಿನಯ. ನಾನು ಕೋಸಲೇಂದ್ರನ ದಾಸ. ತಾನು ಪರಾಕ್ರಮಿಯೆಂದಾಗಲಿ ಅಥವಾ ಮರುತಾತ್ಮಜನೆಂದಾಗಲಿ ಅಥವಾ ದೇವವರಪ್ರಸಾದಿತ ಎಂದೇನೂ ಹೇಳಿಕೊಳ್ಳದೆ ನಾನು ರಾಮದಾಸ ಎನ್ನುತ್ತಾನೆ. ಮುಂದೆ ಇದೇ ಶ್ಲೋಕದಲ್ಲಿ ಮರುತಾತ್ಮಜ ಎನ್ನುವನಾದರೂ ಮೊದಲಿಗೆ ಮಾಡಿದ ಪರಿಚಯ ನಿಜಕ್ಕೂ ಮಾದರಿ. ನಾವು ನಮ್ಮ ಸಾಧನೆಯನ್ನು ಮೊದಲು ಹೇಳಿ ಅಥವಾ ಇಂತಹವನು ಎನ್ನುತ್ತೇವೆ ಹೊರತು ಹನುಮನ ರೀತಿ ವಿನಯ ಸಾಧ್ಯವೇ!_
*ನ ರಾವಣಸಹಸ್ರಂ ಮೇ ಯುದ್ಧೇ ಪ್ರತಿಬಲಂ ಭವೇತ್*
_ಇದೂ ಹನುಮನ ಮಾತೇ. ರಾಮನಾಮದ ಬೆಂಬಲವಿರುವಾಗ ಒಬ್ಬ ರಾವಣನಲ್ಲಾ, ಸಾವಿರ ರಾವಣರು ಬಂದರೂ ನನಗೆ ಸಾಟಿಯಾಗಲಾರರು. ಇದು ಶತ್ರುವನ್ನು ಕಂಗೆಡಿಸಲು ಬಳಸುವ ಮಹತ್ವದ ರಾಜನೀತಿ. ತನಗೆ ನೀನು ಸಾಟಿಯೇ ಅಲ್ಲ ಎಂದಾಗ ಶತ್ರು ಮನದಲ್ಲೇ ಭಯಪಡುತ್ತಾನೆ. ನಿಜವಾಗಿ ಸಮರ್ಥನಿದ್ದರೂ ಒಂದು ಕ್ಷಣ ಹೆದರುತ್ತಾನೆ. ಹನುಮನ ಈ ಮಾತು ಅದೇ ಕಾರಣದಿಂದ ಬಂದದ್ದು._
*ರಾವಣಃ ಸಂವೃತಾಕಾರಶ್ಚಕಾರ ಮತಿಮುತ್ತಮಾಮ್*
_ಯಾವಾಗ ಹನುಮನಿಂದ ಮಹಾವೀರರಾದ ಅಗ್ನಿಯಂತೆ ಪ್ರಜ್ವಲಿಸುವ ಏಳು ಜನ ಮಂತ್ರಿ ಕುಮಾರರು ಸಾಯಲ್ಪಡುವರೋ ಆಗ ರಾವಣನು ಹೆದರುತ್ತಾನೆ. ಆದರೂ ಅದನ್ನು ಮರೆಮಾಚಿ ಉತ್ತಮವಾಗಿ ಆಲೋಚಿಸಿ ಮುಂದೆ ಏನು ಮಾಡಬೇಕೆಂದು ಯೋಚಿಸುತ್ತಾನೆ. ಇದು ನಮಗೆಲ್ಲ ಪಾಠ. ನಮ್ಮ ಪ್ರಯತ್ನದಲ್ಲಿ ಸೋತರೂ ಹಿಂಜರಿಯದೆ ಮನಸ್ಸನ್ನು ಅಧೈರ್ಯಕ್ಕೊಳಪಡಿಸದೇ ಮುಂದುವರೆಯುವುದು. ಕೆಲವೊಂದು ಸಂದರ್ಭಗಳಲ್ಲಿ ಭಯವುಂಟಾದರೂ ಹೊರಗೆ ತೋರಿಸಿಕೊಳ್ಳಬಾರದು. ದೊಡ್ಡ ಸಭೆಗಳಲ್ಲಿ, ಪರೀಕ್ಷೆಗಳಲ್ಲಿ, ವಾದದ ಸಂದರ್ಭದಲ್ಲಿ ನಾವು ನಿರಪರಾಧಿಯಾಗಿದ್ದು ಅದನ್ನು ಸಾಬೀತುಪಡಿಸುವ ಸಂದರ್ಭಗಳಲ್ಲಿ ಹೆದರದೇ ಮುಂದಡಿ ಇಡಬೇಕು. ರಾವಣ ಅದನ್ನೇ ಮಾಡಿದ್ದು. ಹೆದರಿದರೆ ನಮ್ಮ ಶತ್ರುಗಳ ಮನೋಬಲ ಮತ್ತಷ್ಟು ಗಟ್ಟಿಯಾಗುವುದು. ರಾಮಾಯಣ ಹೆಜ್ಜೆ ಹೆಜ್ಜೆಗೂ ಪಾಠ ಕಲಿಸುವುದು ಹೀಗೆಯೇ.ಹನುಮನು ಮುಂದೆ ಅಕ್ಷಕುಮಾರನನ್ನು ಸಂಹರಿಸಲು ತುಂಬಾ ವಿಚಾರ ಮಾಡುತ್ತಾನೆ. ದೇವತೆಗಳನ್ನು ಕಂಗೆಡಿಸುವ ಸಾಮರ್ಥ್ಯವುಳ್ಳ ಈ ಬಾಲಕನನ್ನು ಹೇಗೆ ಕೊಲ್ಲಲಿ! ಸುತ್ತಲೂ ಹರಡುತ್ತಿರುವ ಬೆಂಕಿಯಂತೆ ಬಾಣಗಳಿಂದ ಸುಡುತ್ತಿರುವನು. ಹಾಗಿದ್ದರೂ ಉಪೇಕ್ಷಿಸದೇ ಯುದ್ಧ ನಿಯಮದಂತೆ ಸಂಹರಿಸುವುದೇ ಸರಿಯೆಂದು ತೀರ್ಮಾನಿಸುತ್ತಾನೆ. ಇದು ನ್ಯಾಯಾಧೀಶರಿಗೊಂದು ಒಳ್ಳೆಯ ಪಾಠ. ಅತ್ಯಾಚಾರ, ಭಯೋತ್ಪಾದನೆ, ಕಳ್ಳತನ ಮುಂತಾದ ಘೋರಕೃತ್ಯಗಳಲ್ಲಿ ಪಾಲ್ಗೊಳ್ಳುವ ಸಣ್ಣವರನ್ನೂ ಶಿಕ್ಷಿಸದೇ ಬಿಡಬಾರದೆಂಬುದು ಹನುಮನ ನೀತಿ. ಸಣ್ಣ ತಪ್ಪುಗಳನ್ನು ಕ್ಷಮಿಸಬೇಕೇ ಹೊರತು ಸಮಾಜಘಾತಕ ಕೃತ್ಯಗಳನ್ನು ಎಂದಿಗೂ ಕ್ಷಮಿಸಬಾರದು. ಇಷ್ಟಲ್ಲದೇ ಯುದ್ಧ ಮಾಡುವಾಗ ಭಾವನೆಗೆ ಬೀಳಬಾರದು. ಇವನು ಚಿಕ್ಕವನೆಂದೋ, ಸಂಬಂಧಿಯೆಂದೋ ಭಾವಿಸಿ ಅಧರ್ಮದ ಪರವಾಗಿ ನಿಂತಿರುವರನ್ನು ಕೊಲ್ಲದೇ ಬಿಡುವುದೇ ಅಪರಾಧ. ಈಗಿನ ನ್ಯಾಯವ್ಯವಸ್ಥೆಯಲ್ಲಿ ಈ ನಿಯಮ ಬಂದರೆ ಅಪರಾಧಿಗಳಿಗೆ ಭಯ ಹುಟ್ಟಿ ಅಪರಾಧಗಳ ಸಂಖ್ಯೆ ಕಡಿಮೆ ಆದರೂ ಆಗಬಹುದೇನೋ!_
📗 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ