📙🌾 ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು 🌾📙
ಭಾಗ-22
_*ಧಿಗಸ್ತು ಮಾಂ ಸುದುರ್ಬುದ್ಧಿಂ ನಿರ್ಲಜ್ಜಂ ಪಾಪಕೃತ್ತಮಮ್ ಅಚಿಂತಯಿತ್ವಾ ತಾಂ ಸೀತಾಮಗ್ನಿದಂ ಸ್ವಾಮಿ ಘಾತಕಮ್*
_ಹನುಮನು ತನ್ನ ಕೆಲಸಕ್ಕೆ ಮತ್ತೆ ಪಶ್ಚಾತ್ತಾಪಪಡುತ್ತಿರುವನು. ಅತ್ಯಂತ ಮೂಢಬುದ್ಧಿಯಿಂದ ಕೂಡಿದ ನಾಚಿಕೆಯಿಲ್ಲದ ಮಹಾಪಾಪಿಯಾದ ಸ್ವಾಮಿದ್ರೋಹಿಯಾದ ನನಗೆ ಧಿಕ್ಕಾರವಿರಲಿ. ಈ ಲಂಕೆಯಲ್ಲಿ ಸೀತೆಯಿರುವಳೆಂಬುದನ್ನೂ ಮರೆತು ಮೂರ್ಖತನ ಪ್ರದರ್ಶಿಸಿದೆ. ಗೊತ್ತಿದ್ದೂ ತಪ್ಪು ದಾರಿಯಲ್ಲಿ ಪ್ರವರ್ತಿಸಿವುದು ಮೂಢತನ. ತನ್ನ ಕೃತ್ಯದ ಬಗ್ಗೆ ಪಶ್ಚಾತ್ತಾಪ ಇಲ್ಲದಿರೆ ಅದು ನಾಚಿಕೆಯಿಲ್ಲದ ಕೆಲಸ. ಸ್ವಾಮಿಯ ಆಜ್ಞೆಯಂತೆ ಹುಡುಕಲು ಬಂದು ಅವನ ಪತ್ನಿಯನ್ನೇ ಸುಟ್ಟ ಕಾರಣ ಸ್ವಾಮಿದ್ರೋಹ. ಹನುಮನು ಇದಾವುದನ್ನೂ ಮಾಡದಿದ್ದರೂ ವಾಲ್ಮೀಕಿಗಳು ಬರೆದದ್ದು ಅವನಿಗಾಗಿ ಅಲ್ಲ. ನಾವು ಪ್ರತಿಯೊಂದು ಕಾರ್ಯದ ಪೂರ್ವದಲ್ಲಿ ಯೋಚಿಸಿ ತೊಡಗುವಂತಾಗಲೆಂದು. ಕೆಟ್ಟ ಮೇಲೆ ಬುದ್ಧಿ ಓಡಿಸುವ ಬದಲು ಕೆಡದಿರುವ ಸಮಯದಲ್ಲೇ ಮತಿಗೆ ಕೆಲಸ ಕೊಡಬೇಕು._
*ಯದರ್ಥಮಯಮಾರಂಭಸ್ತತ್ಕಾರ್ಯಮವಸಾದಿತಮ್ ಮಯಾ ಹಿ ದಹತಾ ಲಂಕಾಂ ನ ಸೀತಾ ಪರಿರಕ್ಷಿತಾ.*
_ನಾನು ಲಂಕೆಗೆ ಬೆಂಕಿ ಕೊಡುವಾಗ ಸೀತೆಯನ್ನು ರಕ್ಷಿಸಬೇಕೆಂದು ಯೋಚಿಸಲೇ ಇಲ್ಲ. ಯಾವ ಕಾರ್ಯದ ಸಿದ್ಧಿಗಾಗಿ ನಾನು ಇದರಲ್ಲಿ ತೊಡಗಿದೆನೋ ಆ ಕಾರ್ಯವನ್ನೇ ಹಾಳುಮಾಡಿದಂತಾಯಿತು. ಸೀತೆಯನ್ನು ಸಂದರ್ಶಿಸಿದ ವಿಷಯವನ್ನು ರಾಮನಿಗೆ ಅರುಹುವ ಮೊದಲೇ ಕೋಪಕ್ಕೆ ಬೆಲೆಕೊಟ್ಟು ಮೂಲವನ್ನೇ ನಾಶಮಾಡಿದೆನು. ನಾವೂ ಅನೇಕ ಬಾರಿ ಯೋಚಿಸುವುದಿಲ್ಲ. ಸುಮ್ಮನೆ ತೊಡಗಿಕೊಳ್ಳುತ್ತೇವೆ. ಆದರೆ ಸಾಧಕ-ಬಾಧಕಗಳನ್ನು ಪರೀಕ್ಷಿಸಿ ಪ್ರವೃತ್ತಿ ಮಾಡುವುದೇ ಕುಶಲತೆ. ನಾವು ಯಾವುದೋ ಒಳ್ಳೆಯ ಉದ್ದೇಶ ಇಟ್ಟುಕೊಂಡು ಆರಂಭಿಸಿದ ಅನೇಕ ಕಾರ್ಯಗಳು ತನ್ನ ಮೂಲ ಉದ್ದೇಶವನ್ನು ಮರೆತು ಸ್ವಾರ್ಥದತ್ತ ಸಾಗುತ್ತಿರುತ್ತವೆ. ಮೂಲ ಉದ್ದೇಶಕ್ಕೆ ಭಂಗ ಬರದಂತೆ ಕಾರ್ಯ ಸಾಧಿಸುವುದು ವಿವೇಕಿಗಳ ಲಕ್ಷಣವೆಂದು ಕವಿ ಹೀಗೆ ನಿರೂಪಿಸಿದ್ದಾನೆ._
*ಕಿಮಗ್ನೌ ನಿಪತಾಮ್ಯದ್ಯ ಆಹೋಸ್ವಿದ್ವಡವಾಮುಖೇ ಶರೀರಮಾಹೋ ಸತ್ವಾನಾಂ ದದ್ಮಿ ಸಾಗರವಾಸಿನಾಮ್*
_ಇಂತಹ ಹೇಯ ಕೃತ್ಯವೆಸಗಿದ ನಾನು ಏನು ಮಾಡಲಿ? ಬೆಂಕಿಯಲ್ಲಿ ಬಿದ್ದು ಸತ್ತುಹೋಗಲೇ? ಸಮುದ್ರದ ಒಳಗಿನ ವಡವಾಗ್ನಿಯಲ್ಲಿ ಅಸುವನ್ನು ನೀಗಲೇ? ನನ್ನೀ ಶರೀರವನ್ನು ತುಂಡು ತುಂಡುಗಳಾಗಿ ಕತ್ತರಿಸಿ ಜಲಚರಗಳಿಗೆ ಹಂಚಿಬಿಡಲೇ?ಏನು ಮಾಡಬೇಕೆಂದೇ ತೋಚುತ್ತಿಲ್ಲ. ಕವಿ ಇಲ್ಲಿ ನಮ್ಮ ಆಲೋಚನೆಗಳನ್ನು ಹನುಮನ ಮೂಲಕ ಪ್ರತಿಧ್ವನಿಸಿದ್ದಾನೆ. ಏನಾದರೂ ಕೆಲಸ ಕೆಟ್ಟರೆ ಅಥವಾ ಸಮಸ್ಯೆ ಎದುರಾದರೆ ನಾವೂ ಹೀಗೆ ಯೋಚಿಸುತ್ತೇವೆ ಹೊರತು ಹೇಗೆ ಪಾರಾಗಬಹುದೆಂದಲ್ಲ. ಸಮಸ್ಯೆಗಳನ್ನು ಎದುರಿಸಲು ಆತ್ಮಹತ್ಯೆಯೇ ಪರಿಹಾರವಾಗಿದ್ದರೆ ಇಷ್ಟು ಜನಸಂಖ್ಯೆ ಬೆಳೆಯುತ್ತಿರಲೇ ಇಲ್ಲ. ಪ್ರತಿಯೊಬ್ಬರಿಗೂ ಸಣ್ಣದೋ ದೊಡ್ಡದೋ ಸಮಸ್ಯೆ ಇದ್ದೇ ಇರುತ್ತದೆ. ನಾವು ಕೆಲಸ ಹಾಳುಮಾಡಿದ ಮೇಲೂ ತಪ್ಪನ್ನು ಒಪ್ಪಿಕೊಳ್ಳಲು ಹಿಂಜರಿಯುತ್ತೇವೆ. ಯಾರಾದರೂ ಬೊಟ್ಟು ಮಾಡಿದರೂ ನಮ್ಮದೇ ಸರಿಯೆಂಬಂತೆ ಸಮರ್ಥಿಸುತ್ತೇವೆ. ಆದರೆ ಹನುಮನ ನಡೆ ನೋಡಿ. ನಾನು ತಪ್ಪು ಮಾಡಿರುವನೆಂದು ಯೋಚಿಸಿದ ಕೂಡಲೇ ಎಷ್ಟೆಲ್ಲ ಪಶ್ಚಾತ್ತಾಪ ಪಡುತ್ತಿದ್ದಾನೆ. ನಿಜಕ್ಕಾದರೆ ಅವನಿಂದಾವ ತಪ್ಪೂ ನಡೆದಿಲ್ಲ. ಹನುಮನಂತೆ ನಾವೂ ವಿನೀತರಾಗಲು ಸಾಧ್ಯವೇ! ಕಡೇಪಕ್ಷ ತಪ್ಪು ನಡೆದಾಗಲಾದರೂ ಒಪ್ಪಿಕೊಂಡು ಮುಂದೆ ಮಾಡದಂತೆ ನೋಡಿಕೊಳ್ಳೋಣ._
📙 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ