🌺 ಪ್ರತಿಮಾನಾಟಕದ ಒಂದು ಕುಸುಮ🌺
*इह स्थास्यामि देहेन तत्र स्थास्यामि कर्मणा | नाम्नैव भवतो राज्यं कृतरक्षं भविष्यति ||*
_ರಾಮ ದುಃಖದಿಂದ ಒತ್ತರಿಸಿಬಂದ ಕಣ್ಣೀರು ತೊಳೆಯಲು ನೀರು ಕೇಳುವನು. ಆಗ ಲಕ್ಷ್ಮಣನು ನೀರು ತರಲೆಂದು ಹೊರಡುತ್ತಾನೆ. ಆಗ ಭರತನು ನನಗೊಂದು ಅವಕಾಶ ಕೊಡು ಎಂದಾಗ ಸೀತೆಯೂ ರಾಮನಿಗೆ ಹೇಳುವಳು. ಆಗ ರಾಮನ ನುಡಿ. ನಾನು ಇಲ್ಲಿ ದೇಹದಿಂದ ವಾಸಿಸುತ್ತಿದ್ದೇನೆ. ಅಲ್ಲಿ ನನ್ನ ಕರ್ಮದಿಂದ ವಾಸಿಸುತ್ತಿದ್ದೇನೆ. ಇಲ್ಲಿ ಲಕ್ಷ್ಮಣನ ಆರೈಕೆಯಿಂದ ರಾಜನಂತೆಯೇ ಇಲ್ಲಿ ಸಂತೋಷವಾಗಿದ್ದೇನೆ. ಅಲ್ಲಿ ರಾಜ್ಯಪಾಲನೆಯೆಂಬ ಕರ್ಮವನ್ನು ನನ್ನ ಪರವಾಗಿ ಭರತ ನಡೆಸುತ್ತಿದ್ದಾನೆ. ಹಾಗಾಗಿ ಅಲ್ಲೂ ಇದ್ದೇನೆ. ರಾಮನ ರಾಜ್ಯವೆಂಬ ಹೆಸರಿನಿಂದಲೇ ಅಲ್ಲಿ ಸುರಕ್ಷಿತವಾಗಿರುವುದು. ನೀನು ಬಹಳ ಶ್ರಮಪಡಬೇಕಾಗಿಲ್ಲ. ರಾಮನಿಗೆ ತಮ್ಮನ ಮಾತನ್ನು ತೆಗೆದುಹಾಕಲು ತಮ್ಮನ ಕೋರಿಕೆ ತಿರಸ್ಕರಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಈ ಮಾತಿನ ಮೂಲಕ ತಮ್ಮನನ್ನು ಒಪ್ಪಿಸುತ್ತಿದ್ದಾನೆ. ಇಲ್ಲಿ ಲಕ್ಷ್ಮಣನೇ ನನ್ನನ್ನು ಸೇವಿಸಲಿ. ಅಲ್ಲಿ ಭರತ ನನ್ನ ಮನದಿಚ್ಛೆಯಂತೆ ರಾಜ್ಯವಾಳಿ ನನ್ನನ್ನು ಸೇವಿಸಲಿ. ಆಗ ಇಬ್ಬರಿಗೂ ಬೇಸರವಿಲ್ಲ. ಇಬ್ಬರೂ ಕೃತಾರ್ಥರಾಗುವರು. ರಾಮ ಹಾಗೂ ಭರತ ಲಕ್ಷ್ಮಣಾದಿಗಳ ಮಧ್ಯೆ ಸ್ವಭಾವ ಭೇದವಿತ್ತೇ ಹೊರತು ಪ್ರೀತಿಯಲ್ಲಲ್ಲ. ಅವರ ನಡುವಿನ ಪ್ರೀತಿಯನ್ನು ಕವಿ ಇಲ್ಲಿ ಸೆರೆಹಿಡಿದಿದ್ದಾನೆ. ರಾಮನನ್ನು ಸೇವಿಸಲು ನಾ ಮುಂದು ತಾ ಮುಂದು ಎನ್ನುವ ಅನುಜರು, ಇಬ್ಬರಿಗೂ ಬೇಸರವಾಗದಂತೆ ಧರ್ಮಕ್ಕೂ ಚ್ಯುತಿ ಬರದಂತೆ ತಮ್ಮಂದಿರನ್ನು ಸಮಾಧಾನಿಸುವ ರಾಮ ಹೀಗೆ ಪಾತ್ರಚಿತ್ರಣ ಮಧುರವಾಗಿದೆ. ರಾಮನ ಪರಾಕ್ರಮ ಎಷ್ಟಿತ್ತೆಂದರೆ ಶತ್ರುಗಳು ಅವನ ಹೆಸರು ಕೇಳಿದರೇನೆ ಪಲಾಯನ ಮಾಡುತ್ತಿದ್ದರು. ಹಾಗಾಗಿ ಭರತನಿಗೆ ರಾಮನ ಹೆಸರಿನಲ್ಲಿ ರಾಜ್ಯವಾಳಲು ಯಾವ ತೊಂದರೆಯೂ ಇಲ್ಲ. ರಾಮನು ಅಲ್ಲಿ ನಾಮದಿಂದ ಇಲ್ಲಿ ಕಾಯದಿಂದ ಇದ್ದು ನಮ್ಮನ್ನೂ ಪೊರೆಯಲಿ._
📜 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ