🌺 ಪ್ರತಿಮಾ ನಾಟಕದ ಒಂದು ಕುಸುಮ 🌺

*घन: स्पष्टो धीर: समदवृषभस्निग्धमधुर: कल: कण्ठे वक्षस्यनुपहतसञ्चाररभस: | यथास्थानं प्राप्य स्फुटकरणनानाक्षरतया चतुर्णां वर्णानामभयमिव दातुं व्यवसित: ||*

_ಭರತ ಸುಮಂತ್ರನೊಡನೆ ರಾಮ ದರ್ಶನಕ್ಕೆ ಆಗಮಿಸಿದ್ದಾನೆ. ತಪ್ಪು ಮಾಡಿದೆನೆಂದು ಪರಿತಪಿಸುತ್ತಿರುವ ಭರತ ಯಾರೋ ಭೇಟಿಯಾಗಲು ತಪ್ಪಿತಸ್ಥನು ಆದರೂ ನಿನ್ನ ಭಕ್ತನೊಬ್ಬ ಬಂದಿದ್ದಾನೆ, ಪ್ರವೇಶಿಸುವುದೋ ನಿರ್ಗಮಿಸುವುದೋ ಎಂದು ಹೇಳುವನು. ಆಗ ಅದನ್ನಾಲಿಸಿದ ರಾಮನು ತಂದೆಯ ಸ್ವರದಂತೆ ಪ್ರೀತಿಪೂರ್ವಕವಾದ ಬಂಧುವೆಂಬ ಭಾವ ತರುವ ಈ ಸ್ವರ ಯಾರದಿರಬಹುದೆಂದು ಸಂದೇಹಿಸುವನು. ಆಗ ಲಕ್ಷ್ಮಣನೂ ಅವನನ್ನು ಅನುಮೋದಿಸುತ್ತಾ ಹೇಳುವ ಮಾತು._

_ಗಟ್ಟಿಯಾದ, ಸ್ಪಷ್ಟವಾದ ಉಚ್ಚಾರಣೆ ಇರುವ, ಗಂಭೀರವಾದ, ಮದವೇರಿದ ಅಥವಾ ಕೊಬ್ಬಿದ ಗೂಳಿಯ ಗುಟುರಿನಂತೆ ಕೇಳಲು ಮಧುರವಾದ ( ಗೂಳಿಯ ಸ್ವರವನ್ನು ಕೇಳಿದ ಗೋ ಧಾವಿಸಿ ಬರುವಂತೆ ಎಂಬ ಕಲ್ಪನೆ ಬರಬಹುದು)( ಅಥವಾ ಏರು ಯೌವನದ  ಸ್ವರ ರಮಣಿಯರಿಗೆ ಆಕರ್ಷಕ. ಉದಾ- ಅಮಿತಾಬ್ ಸುದೀಪ್ ರವಿತೇಜ ಮುಂತಾದವರ ಧ್ವನಿ) ಹಾಗಿದ್ದೂ ಕೋಮಲ, ಶಬ್ದದ ಉಚ್ಚಾರಣೆಯಲ್ಲಿ ಬಳಸುವ ಒಳ ಹಾಗೂ ಹೊರ ಪ್ರಯತ್ನಗಳು ಸರಿಯಾಗಿ ನಡೆದು ಆ ಅಕ್ಷರಗಳು ಕಂಠ ಹೃದಯ ಮುಂತಾದೆಡೆಗಳಿಂದ ಸಹಜವಾಗಿ ಹುಟ್ಟಿ ಅಥವಾ ಆಯಾಸ್ಥಾನಗಳನ್ನು ಹೊಂದಿ ( ಆಗ ಮಾತ್ರ ಸರಿಯಾದ ಉಚ್ಚಾರಣೆ) ಸ್ಥಾನ ಹಾಗೂ ಪ್ರಯತ್ನದಲ್ಲಿ ಯಾವೊಂದು ದೋಷವೂ ಇಲ್ಲದೇ, ತಡೆಯಿಲ್ಲದ ( ಸುಲಲಿತವಾಗಿ ಹೊರಹೊಮ್ಮಿದ) ಈ ಯುವಕನ ಸ್ವರ ನಾಲ್ಕು ವರ್ಣದವರಿಗೂ ಅಭಯವನ್ನು ಕೊಡಲು ಹೊರಟಂತಿದೆ. ಜನರು ಇವನ ಸ್ವರ ಕೇಳಿ ಅಭಯ ಪಡೆಯುವುದು ನಿಶ್ಚಯ. ಹೀಗೆ ಕವಿ ಧ್ವನಿಯ ಬಗ್ಗೆ ಸುಂದರವಾದ ವಿವರಣೆ ನೀಡಿದ್ದಾನೆ._

📜 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩