🌺 ಪ್ರತಿಮಾನಾಟಕದ ಒಂದು ಸುಮ 🌺
*असुरसमरदक्षैर्वज्रसंघट्टचापै: अनुपमबलवीर्यै: स्वै: कुलैस्तुल्यवीर्य: | रघुरिव स नरेन्द्रो यज्ञविश्रान्तकोशो भव जगतिगुणानां भाजनं भ्राजितानाम् ||*
_ಲಕ್ಷ್ಮಣ ಭರತನಿಗೆ ಆಶೀರ್ವದಿಸಿ ನುಡಿದ ಮಾತು. ಆಶೀರ್ವಾದ ಹೇಗಿರಬೇಕು ಎಂಬುದಕ್ಕೆ ಒಳ್ಳೆಯ ನಿದರ್ಶನ. ಅಸುರರ ಜೊತೆಗಿನ ಯುದ್ಧದಲ್ಲಿ ದೇವತೆಗಳ ಪರವಾಗಿ ಪಾಲ್ಗೊಂಡು ತಮ್ಮ ಸಾಮರ್ಥ್ಯವನ್ನು ತೋರಿದ, ಇಂದ್ರನ ವಜ್ರಾಯುಧದ ಜೊತೆಗೆ ನಾಮುಂದು ತಾಮುಂದು ಎನ್ನುತ್ತಾ ಬಾಣಪ್ರಯೋಗಕ್ಕೆ ಸ್ಪರ್ಧೆಗಿಳಿದ ಅಥವಾ ಅಸುರರ ಪ್ರಾಣ ಸೆಳೆಯಲು ವಜ್ರಾಯುಧದೊಡನೆ ಸ್ಪರ್ಧಿಸುತ್ತಿರುವ ಧನುಸ್ಸನ್ನು ಹಿಡಿದ ಅಸದೃಶವಾದ ಪರಾಕ್ರಮಶಾಲಿಗಳಾದ ನಿನ್ನ ಕುಲದವರ ಪರಾಕ್ರಮ ನಿನಗೂ ಬರಲಿ. ವಿಶ್ವಜಿತ್ ಎಂಬ ಯಜ್ಞದ ಮೂಲಕ ಖಜಾನೆಯನ್ನು ಬರಿದು ಮಾಡಿಕೊಂಡ ರಘುವಿನ ಕೀರ್ತಿಯನ್ನು ಪಡೆ. ಈ ಜಗದಲ್ಲಿ ಯಾವ ಯಾವ ಒಳ್ಳೆಯ ಗುಣಗಳಿವೆಯೋ ಅವೆಲ್ಲವುಗಳಿಗೆ ನೀನು ಆಶ್ರಯ ನೀಡು. ಎಂತಹ ಸುಂದರ ಮಾತು. ಕ್ಷತ್ರಿಯನಿಗೆ ಪರಾಕ್ರಮವೇ ಮುಖ್ಯ. ನಿನ್ನ ಪೂರ್ವಜರು ದೇವತೆಗಳ ಸಮನಾಗಿ ಹೋರಾಡಿದ ವೀರರು. ವಜ್ರಾಯುಧದ ಜೊತೆಜೊತೆಗೆ ನಿನ್ನ ತಾತಂದಿರ ಧನುಸ್ಸುಗಳಿಂದ ಹೊರಟ ಬಾಣಗಳೂ ರಾಕ್ಷಸರ ಪ್ರಾಣ ಹೀರಿವೆ. ಅಂತಹ ಅದ್ಭುತ ಪರಾಕ್ರಮವನ್ನು ನೀನು ಹೊಂದಿ ವಂಶದ ಗೌರವ ಉಳಿಸು. ರಘು ಮಹಾರಾಜ ಇಡೀ ವಿಶ್ವವನ್ನು ಗೆದ್ದು ಕೊನೆಗೆ *ವಿಶ್ವಜಿತ್* ಎಂಬ ಯಜ್ಞವನ್ನು ಮಾಡಿ ಸಂಪತ್ತನ್ನು ಸಾರ್ಥಕವಾಗಿ ವಿನಿಯೋಗಿಸಿದ. ತನ್ನಲ್ಲಿರುವ ಎಲ್ಲವನ್ನೂ ದಾನ ಮಾಡುವುದು ಈ ಯಜ್ಞದ ನಿಯಮ. ನಚಿಕೇತನ ತಂದೆ ಇದೇ ಯಜ್ಞವನ್ನು ಮಾಡಿದವರು. ನೀನು ಸಂಪಾದಿಸುವ ಸಂಪತ್ತೂ ಕೂಡ ರಘುವಿನಂತೆ ಸತ್ಕಾರ್ಯಗಳಿಗೆ ವಿನಿಯೋಗವಾಗಲಿ. ಕೊನೆಯ ಮಾತು ಬಹಳ ಚಂದ. ಲೋಕದಲ್ಲಿ ಶೌರ್ಯ ಔದಾರ್ಯ ವಿನಯ ಜಿಜ್ಞಾಸೆ ಮುಂತಾದ ಯಾವೆಲ್ಲ ಶೋಭಿಸುವ ಗುಣಗಳಿವೆಯೋ ಅವೆಲ್ಲ ನಿನ್ನನ್ನೇ ಆಶ್ರಯಿಸಲಿ. ಗುಣವಂತನಾಗು ಎಂಬ ಭಾವ. ನಮಗೆಂದಾದರೂ ಕಿರಿಯರು ನಮಸ್ಕರಿಸಿದರೆ ಸಂಪತ್ತು ಸಿಗಲೆಂದೋ, ಮದುವೆ ಆಗಲೆಂದೋ ಏನೇನೋ ಆಶೀರ್ವಾದ ನೀಡುತ್ತೇವೆ. ಲಕ್ಷ್ಮಣ ನಮಗೆಲ್ಲ ಮಾದರಿಯಾಗಿದ್ದಾನೆ. ಕವಿ ಈ ಮೂಲಕ ಸಂದೇಶವನ್ನೂ ನೀಡಿದ್ದಾನೆ. ನಮ್ಮ ಶಕ್ತಿ ದೇವತೆಗಳಂತೆ ದುಷ್ಟರ ದಮನಕ್ಕೆ, ಧನ ಸಕಲರ ಕ್ಷೇಮಸಾಧಿಸುವ ಯಜ್ಞಗಳಿಗೆ ವಿನಿಯೋಗವಾಗಲಿ, ಸದ್ಗುಣಗಳನ್ನು ಸಂಪಾದಿಸಲಿ ಅವಿರತ ಪ್ರಯತ್ನ ನಡೆಯಲಿ ಎಂಬುದಾಗಿ._
📜 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ