🌾📗 ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು 🌾📗
ಭಾಗ-೧೯
*ರಾಜಧರ್ಮವಿರುದ್ಧಂ ಚ ಲೋಕವೃತ್ತೇಶ್ಚ ಗರ್ಹಿತಮ್ ತವ ಚಾಸದೃಶಂ ವೀರ ಕಪೇರಸ್ಯ ಪ್ರಮಾಪಣಮ್*
_ವಿಭೀಷಣನು ಅಣ್ಣನಿಗೆ ಹೇಳುವ ಮಾತು. ಬುದ್ಧಿಮಾತು ಹೇಳಿದ ಕಪಿಯನ್ನು ರಾವಣನು ಕೊಲ್ಲಲು ಹೊರಟಾಗ ಅವನಾಡುವ ಮಾತು. ದೂತನಾಗಿ ಬಂದಿರುವ ಈ ಕಪಿಯನ್ನು ವಧಿಸುವುದು ರಾಜಧರ್ಮಕ್ಕೆ ವಿರುದ್ಧ. ಲೋಕದ ಸಹಜ ನಡವಳಿಕೆಗೆ ಇದು ವಿರುದ್ಧವಾಗಿದೆ. ಲೋಕದಲ್ಲಿ ದೂತನು ಎಂತಹ ತಪ್ಪು ಮಾಡಿದರೂ ಅವನಿಗೆ ದಂಡನೆಯಾಗಿ ಮರಣ ವಿಧಿಸುವುದು ಈವರೆಗೆ ಕಂಡಿಲ್ಲ. ಇನ್ನು ನೀನು ಮೂರು ಲೋಕಗಳಲ್ಲೂ ಪರಾಕ್ರಮಿ ರಾಜನೆಂದು ಖ್ಯಾತನಾಗಿರುವೆ. ದೂತನನ್ನು ವಧಿಸಿದರೆ ನಿನ್ನ ಘನತೆಗೂ ಕುಂದುಂಟಾದೀತು. ರಾಜಧರ್ಮ ಅರಿತ ನೀನು ಯಾವ ಕಾರಣದಿಂದಲೂ ಹೀಗೆ ಮಾಡುವುದು ತರವಲ್ಲ._
*ನ ಪಾಪಾನಾಂ ವಧೇ ಪಾಪಂ ವಿದ್ಯತೇ ಶತ್ರುಸೂದನ ತಸ್ಮಾದೇನಂ ವಧಿಷ್ಯಾಮಿ ವಾನರಂ ಪಾಪಕಾರಣಮ್*
_ರಾವಣನು ತನ್ನ ಕೃತ್ಯ ಸಮರ್ಥಿಸುತ್ತಾ ಹೀಗೆ ನುಡಿಯುವನು. ಶತ್ರುಹಂತಕನೇ, ಪಾಪಿಷ್ಠರನ್ನು ವಧಿಸುವುದರಿಂದ ಯಾವ ಪಾಪವೂ ಸೋಕದು. ಆದುದರಿಂದ ಪಾಪಕರ್ಮಿಯಾದ ಇವನನ್ನು ನಾನು ವಧಿಸುತ್ತೇನೆ. ಈ ನ್ಯಾಯದ ಪ್ರಕಾರ ದುಷ್ಟರನ್ನು ಕೊಲ್ಲಲು ಹಿಂಜರಿಯಬೇಕಿಲ್ಲ. ಅತ್ಯಾಚಾರಿಗಳಿಗೆ, ವಿಕೃತಮನೋಭಾವದವರಿಗೆ, ಭಯೋತ್ಪಾದಕರಿಗೆ, ವಂಚಕರಿಗೆ ಗಲ್ಲು ವಿಧಿಸುವುದರಲ್ಲಿ ಯಾವ ತಪ್ಪೂ ಇಲ್ಲ. ಮಾನವ ಹಕ್ಕುಗಳೆಂದು ವಧಿಸುವುದು ತರವಲ್ಲವೆಂದರೆ ಪಾಪಕರ್ಮದಲ್ಲಿ ತೊಡಗುವವರಿಗೆ ಭಯವಿರುವುದಿಲ್ಲ. ರಾಮನು ರಾವಣನನ್ನು ಕೊಂದ ಕಾರಣ ರಾವಣನಂತಹ ದುಷ್ಟ ಬಹಳ ಕಾಲ ಹುಟ್ಟಲಿಲ್ಲ. ಒಂದು ವೇಳೆ ಬಿಟ್ಟಿದ್ದರೆ ಸಾಕಷ್ಟು ರಾವಣರು ಅಲ್ಲಲ್ಲಿ ಹುಟ್ಟಿಕೊಳ್ಳುತ್ತಿದ್ದರೇನೋ! ರಾವಣ ಸಮರ್ಥನೆಗೆ ಹೇಳುವ ಮಾತಾದರೂ ಸತ್ಯವಾದ ಮಾತೇ ಇದು. ಕಡುಪಾಪಿಗಳಲ್ಲಿ ಕರುಣೆ ತೋರುವುದು ಹಿಂಸೆಗೆ ಅನೈತಿಕತೆಗೆ ಬೆಂಬಲ ಕೊಟ್ಟಂತೇ ಸರಿ._
*ದೂತಾನವಧ್ಯಾನ್ಸಮಯೇಷು ರಾಜನ್ಸರ್ವೇಷು ಸರ್ವತ್ರ ವದಂತಿ ಸಂತಃ ವೈರೂಪ್ಯಮಂಗೇಷು ಕಶಾಭಿಘಾತೋ ಮೌಣ್ಡ್ಯಂ ತಥಾ ಲಕ್ಷಣಸನ್ನಿಪಾತಃ ಏತಾನ್ಹಿ ದೂತೇ ಪ್ರವದಂತಿ ದಣ್ಡಾನ್ವಧಸ್ತು ದೂತಸ್ಯ ನ ನಃ ಶ್ರುತೋಸ್ತಿ*
_ವಿಭೀಷಣನು ಮತ್ತೆ ಹೇಳುತ್ತಿದ್ದಾನೆ. ಊಹಿಸಲು ಅಸಾಧ್ಯವಾದ ಅಪ್ರಿಯ ಕಾರ್ಯ ಮಾಡಿದರೂ ಪ್ರಬಲವಾದ ಶತ್ರುವಾದರೂ ದೂತನು ಎಂದಿಗೂ ಅವಧ್ಯ. ಒಡೆಯನ ಸಂದೇಶ ಅರುಹಲು ಬಂದ ದೂತನನ್ನು ಯಾವುದೇ ಕಾರಣದಿಂದಲೂ ಯಾವುದೇ ಕಾಲದಲ್ಲಿಯೂ ವಧಿಸಬಾರದೆಂದು ಸತ್ಪುರುಷರು ಹೇಳುತ್ತಾರೆ. ವಧೆಯನ್ನು ಬಿಟ್ಟು ದೂತರಿಗೆ ವಿಧಿಸಬಹುದಾದ ಅನೇಕ ಶಿಕ್ಷೆಗಳಿವೆ. ಅವಯವ ವಿರೂಪಗೊಳಿಸುವುದು, ಚಾವಟಿಯಿಂದ ಹೊಡೆಯುವುದು, ತಲೆ ಬೋಳಿಸುವುದು, ಅವಲಕ್ಷಣಗೊಳಿಸುವುದು ಮುಂತಾದ ಶಿಕ್ಷೆಗಳನ್ನು ವಿಧಿಸಬಹುದೆಂದು ರಾಜನೀತಿಜ್ಞರು ಹೇಳುವರು. ಹಾಗಾಗಿ ನೀನು ಇವನನ್ನು ವಧಿಸದೇ ಶಿಕ್ಷೆಯನ್ನು ವಿಧಿಸು. ಇಲ್ಲಿ ವಿಭೀಷಣನ ಧರ್ಮಪ್ರಜ್ಞೆ ನಮಗೆಲ್ಲ ಮಾರ್ಗದರ್ಶಕ. ಹನುಮಂತ ತನ್ನದೇ ರಾಜ್ಯದ ನಷ್ಟಕ್ಕೆ ಕಾರಣನಾದರೂ ಧರ್ಮಪಕ್ಷಪಾತಿ. ಹಾಗಾಗಿ ಅವನನ್ನು ರಕ್ಷಿಸುವುದು ತನ್ನ ಕರ್ತವ್ಯವೆಂದು ಭಾವಿಸುತ್ತಾನೆ. ಧರ್ಮಕ್ಕಾಗಿ ಅಣ್ಣನನ್ನು ಒಲಿಸಿ ಹನುಮನ ಮರಣ ತಪ್ಪಿಸುತ್ತಾನೆ. ಧರ್ಮದ ವಿಷಯದಲ್ಲಿ ನಾವೂ ಎಂದಾದರೊಂದು ದಿನವಾದರೂ ಇಷ್ಟು ನಿಷ್ಠೆ ತೋರಿದ್ದೇವೆಯೇ! ಅಧರ್ಮದ ಅಧರ್ಮಿಗಳ ಜೊತೆಗೆ ಜೀವನಕ್ಕಾಗಿ ಅಥವಾ ಧನಕ್ಕಾಗಿ ಹೊಂದಾಣಿಕೆ ಮಾಡಿಕೊಳ್ಳುವ ನಮಗೆಲ್ಲ ವಿಭೀಷಣನ ನಡತೆ ಮಾದರಿಯಾಗಿದೆ._
📗 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ